ಭುವನೇಶ್ವರ : ದೇಶದ ಹಲವೆಡೆ ಅಧಿಕಾರಿಗಳು ಮಾದಕ ವಸ್ತುವಿನ ಜಾಲ ಬೇಧಿಸುತ್ತಿದ್ದಾರೆ. ಈ ಮಧ್ಯೆ ಒಡಿಶಾದ ಭುವನೇಶ್ವರದಲ್ಲಿ ಬಾಲಶೋರ್ ಪೊಲೀಸರೊಂದಿಗೆ ಎಸ್ಟಿಎಫ್ (ಅಪರಾಧ ವಿಭಾಗದ ವಿಶೇಷ ಕಾರ್ಯಪಡೆ) ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಒಂದು ಕೋಟಿ ರೂಪಾಯಿ ಮೌಲ್ಯದ ಬ್ರೌನ್ ಶುಗರ್ ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಜಮೀರ್, ಪ್ರಭಾತ್ ಸೇಥಿ, ಸುಕುರಾಸ್ ಎಂದು ಗುರುತಿಸಲಾಗಿದೆ.
ಮಾದಕ ದ್ರವ್ಯಗಳ ಮಾರಾಟಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಮತ್ತಷ್ಟು ಮಾಹಿತಿ ಕಲೆ ಹಾಕಿದ ಎಸ್ಟಿಎಫ್, ಪೊಲೀಸರ ಸಹಕಾರದೊಂದಿಗೆ ಮೂವರನ್ನು ಬಂಧಿಸಿದ್ದಾರೆ.