ETV Bharat / bharat

ಹಾಲು ಸೇವಿಸಿದ್ದ ತಾಯಿ - ಮಕ್ಕಳು ಅಸ್ವಸ್ಥ.. ಅಕ್ಕ- ತಮ್ಮ ಸಾವು, ಅಮ್ಮನ ಸ್ಥಿತಿ ಗಂಭೀರ! - ಗಂಜಾಂನಲ್ಲಿ ವಿಷ ಆಹಾರ

ಹಾಲು ಸೇವಿಸಿದ್ದ ತಾಯಿ - ಮಕ್ಕಳು ತೀವ್ರ ಅಸ್ವಸ್ಥಗೊಂಡಿದ್ದು, ಮಕ್ಕಳಿಬ್ಬರು ಸಾವನ್ನಪ್ಪಿದ್ದಾರೆ. ಇನ್ನು ತಾಯಿಯ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಈ ಘಟನೆ ಒಡಿಶಾದ ಗಂಜಾಂನಲ್ಲಿ ನಡೆದಿದೆ.

Brother and sister die over food poisoning in Odisha, mother critical over food poisoning in Ganjam, Food poison in Ganjam, Odisha crime news, ಒಡಿಶಾದಲ್ಲಿ  ವಿಷ ಆಹಾರ ಸೇವಿಸಿ ಸಹೋದರ ಮತ್ತು ಸಹೋದರಿ ಸಾವು, ಗಂಜಾಂನಲ್ಲಿ ವಿಷ ಆಹಾರ ಸೇವಿಸಿ ತಾಯಿ ಅಸ್ವಸ್ಥ, ಗಂಜಾಂನಲ್ಲಿ ವಿಷ ಆಹಾರ, ಒಡಿಶಾ ಅಪರಾಧ ಸುದ್ದಿ,
ಮಗು
author img

By

Published : Apr 26, 2022, 2:14 PM IST

ಗಂಜಾಂ( ಒಡಿಶಾ): ಜಿಲ್ಲೆಯಲ್ಲಿ ಮನಕಲುಕುವಂತಹ ಘಟನೆಯೊಂದು ನಡೆದಿದೆ. ವಿಷ ಆಹಾರ ಸೇವಿಸಿದ ಬಳಿಕ ತಾಯಿ ಮತ್ತು ಆಕೆಯ ಮಕ್ಕಳಿಬ್ಬರು ಅಸ್ವಸ್ಥಗೊಂಡಿದ್ದಾರೆ. ಬಳಿಕ ಆಕೆಯ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ತಾಯಿ ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆ ರಂಭಾ ಪೊಲೀಸ್ ಠಾಣಾ ವ್ಯಾಪ್ತಿಯ ಗಡಗುಮಾ ಗ್ರಾಮದಲ್ಲಿ ನಡೆದಿದೆ.

ಏನಿದು ಘಟನೆ: ರಾಮಕೃಷ್ಣ ಮಹಾರಾಣಾ ಅವರ ಪತ್ನಿ ಮತ್ತು 2 ವರ್ಷದ ಮಗ ರುದ್ರ ಹಾಗೂ 4 ವರ್ಷದ ಮಗಳು ಸಿಮ್ರಾನ್ ನಿನ್ನೆ ಹಾಲು ಸೇವಿಸಿದ್ದಾರೆ. ಹಾಲು ಸೇವಿಸಿದ ಕೆಲ ಹೊತ್ತಿನ ಬಳಿಕ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅವರೆಲ್ಲರನ್ನೂ ಚಿಕಿತ್ಸೆಗಾಗಿ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆರೋಗ್ಯದಲ್ಲಿ ಸುಧಾರಣೆ ಕಂಡ ನಂತರ ತಾಯಿ, ಮಕ್ಕಳನ್ನು ಸಂಜೆ ಡಿಸ್ಚಾರ್ಜ್​ ಮಾಡಲಾಯಿತು.

ಓದಿ: ಹರಿದ್ವಾರ: ಹುರುಳಿ ಹಿಟ್ಟು ಸೇವಿಸಿ 120ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಇಂದು ಬೆಳಗ್ಗೆ ಮೂವರಿಗೆ ವಾಂತಿ ಶುರುವಾಗಿದ್ದು, ಅವರ ಆರೋಗ್ಯ ಸ್ಥಿತಿ ಸಂಪೂರ್ಣ ಹದಗೆಡಲು ಪ್ರಾರಂಭಿಸಿತು. ಕೂಡಲೇ ಅವರನ್ನು ಛತ್ರಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಬ್ಬರು ಮಕ್ಕಳು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗ್ತಿದೆ. ಘಟನೆ ಕುರಿತು ಪೊಲೀಸರು ಗ್ರಾಮಸ್ಥರನ್ನು ವಿಚಾರಣೆಗೊಳಪಡಿಸಿ ತನಿಖೆ ಆರಂಭಿಸಿದ್ದಾರೆ. ಅವರ ಸ್ಥಿತಿ ಯಾವ ಸಂದರ್ಭಗಳಲ್ಲಿ ಹದಗೆಟ್ಟಿದೆ ಎಂಬುದನ್ನು ಕಂಡು ಹಿಡಿಯುವ ಪ್ರಯತ್ನಗಳು ಪೊಲೀಸರಿಂದ ನಡೆಯುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.