ETV Bharat / bharat

ಸಚಿವ ಜೈಶಂಕರ್​ - ಬ್ರಿಟನ್​ ವಿದೇಶಾಂಗ ಕಾರ್ಯದರ್ಶಿ ಭೇಟಿ: ಬಿಬಿಸಿ ವಿವಾದದ ಬಗ್ಗೆ ಪ್ರಸ್ತಾಪ - ಈಟಿವಿ ಭಾರತ ಕನ್ನಡ

ಬ್ರಿಟನ್​ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಜೊತೆ ವಿದೇಶಾಂಗ ಸಚಿವ ಜೈಶಂಕರ್ ಮಾತುಕತೆ - ಬಿಬಿಸಿ ವಿವಾದದ ಬಗ್ಗೆ ಪ್ರಸ್ತಾಪ - ವೃತ್ತಿಪರ ಯೋಜನೆ ಪ್ರಾರಂಭಿಸುವ ಬಗ್ಗೆ ಚರ್ಚೆ

british-foreign-secretary-james-cleverly-eam-jaishankar-meeting
ಸಚಿವ ಜೈಶಂಕರ್​ - ಬ್ರಿಟನ್​ ವಿದೇಶಾಂಗ ಕಾರ್ಯದರ್ಶಿ ಭೇಟಿ : ಬಿಬಿಸಿ ವಿವಾದದ ಬಗ್ಗೆ ಪ್ರಸ್ತಾಪ
author img

By

Published : Mar 1, 2023, 6:12 PM IST

ನವದೆಹಲಿ : ಬ್ರಿಟನ್​ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಅವರು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರೊಂದಿಗೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ. ಈ ವೇಳೆ, ಭಾರತದಲ್ಲಿ ಬಿಬಿಸಿ ಮಾಧ್ಯಮ ಕಚೇರಿಗಳ ಮೇಲೆ ತೆರಿಗೆ ಅಧಿಕಾರಿಗಳು ಸಮೀಕ್ಷೆ ನಡೆಸಿರುವ ಬಗ್ಗೆ ಪ್ರಸ್ತಾಪಿಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಜೈಶಂಕರ್ ಅವರು ಭಾರತದಲ್ಲಿ ಕಾರ್ಯ ನಿರ್ವಹಿಸುವ ಯಾವುದೇ ಸಂಸ್ಥೆಗಳು ದೇಶದ ಕಾನೂನಿಗೆ ಬದ್ಧವಾಗಿರಬೇಕು ಎಂದು ದೃಢವಾಗಿ ಹೇಳಿದ್ದಾರೆ.

  • Began the morning with a bilateral meeting with Foreign Secretary @JamesCleverly of the UK.

    Reviewed the progress in our relationship since our last discussion. Noted in particular the commencement of the Young Professional Scheme. pic.twitter.com/R3aUvX1U4Z

    — Dr. S. Jaishankar (@DrSJaishankar) March 1, 2023 " class="align-text-top noRightClick twitterSection" data=" ">

ಭಾರತದಲ್ಲಿ ನಡೆಯಲಿರುವ ಜಿ20 ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಬ್ರಿಟನ್​ ಕಾರ್ಯದರ್ಶಿ ಜೇಮ್ಸ್​ ಕ್ಲೆವರ್ಲಿ ಭಾರತದ ವಿದೇಶಾಂಗ ಸಚಿವ ಜೈಶಂಕರ್​ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಂಸ್ಥೆಗಳು ದೇಶದ ಕಾನೂನಿಗೆ ಬದ್ಧವಾಗಿರಬೇಕು. ಅಲ್ಲದೇ ದೇಶದ ಕಾನೂನುಗಳನ್ನು ಮತ್ತು ನಿಬಂಧನೆಗಳನ್ನು ಸಂಪೂರ್ಣವಾಗಿ ಅನುಸರಿಸಬೇಕು ಎಂದು ತಿಳಿಸಿದ್ದಾರೆ. ಇದರ ಜೊತೆಗೆ ಯುವ ವೃತ್ತಿಪರ ಯೋಜನೆ ಪ್ರಾರಂಭಿಸುವ ಕುರಿತು ಚರ್ಚೆ ನಡೆಸಿದ್ದಾರೆ. ಭಾರತದ ಜಿ20 ಅಧ್ಯಕ್ಷತೆಯ ಕಾರ್ಯಸೂಚಿ ಮತ್ತು ಜಾಗತಿಕ ಪರಿಸ್ಥಿತಿಗಳ ಕುರಿತು ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ವಿದೇಶಾಂಗ ಸಚಿವ ಜೈಶಂಕರ್​ ,'ಯುಕೆಯ ವಿದೇಶಾಂಗ ಕಾರ್ಯದರ್ಶಿ @JamesCleverly ಅವರೊಂದಿಗಿನ ದ್ವಿಪಕ್ಷೀಯ ಸಭೆಯೊಂದಿಗೆ ಇಂದಿನ ದಿನ ಪ್ರಾರಂಭವಾಯಿತು. ಉಭಯ ದೇಶಗಳ ಪ್ರಗತಿ ಸಂಬಂಧ ಚರ್ಚೆ ನಡೆಸಿದ್ದೇವೆ. ಪ್ರಮುಖವಾಗಿ ಯುವ ವೃತ್ತಿಪರ ಯೋಜನೆ ಪ್ರಾರಂಭಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಅಲ್ಲದೇ ಜಾಗತಿಕ ಪರಿಸ್ಥಿತಿ, ಜಿ20 ಅಜೆಂಡಾ ಬಗ್ಗೆ ಚರ್ಚಿಸಲಾಯಿತು ಎಂದು ತಿಳಿಸಿದ್ದಾರೆ.

ಈ ಬಗ್ಗೆ ಭಾರತದ ಬ್ರಿಟೀಷ್​ ರಾಯಭಾರಿ ಕಚೇರಿ ಟ್ವೀಟ್​ ಮಾಡಿದ್ದು, ಭಾರತ ಮತ್ತು ಬ್ರಿಟನ್​ ದ್ವಿಪಕ್ಷೀಯ​ ಸಂಬಂಧಗಳು ಯುಕೆ ಆರ್ಥಿಕತೆ ಉತ್ತೇಜಿಸಲು ಮತ್ತು ಕೈಗಾರಿಕೆಗಳ ವೃದ್ಧಿಗೆ ಸಹಾಯ ಮಾಡುತ್ತದೆ. ಇದರ ಜೊತೆಗೆ ಇಂಗ್ಲೆಂಡ್​​ - ಇಂಡಿಯಾ ಯಂಗ್ ಪ್ರೊಫೆಷನಲ್ ಸ್ಕೀಮ್ ಮತ್ತು ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಯುಕೆಯ ಮೊದಲ ಟೆಕ್ ರಾಯಭಾರವನ್ನು ರಚಿಸುವುದಾಗಿ ಇದೇ ವೇಳೆ ತಿಳಿಸಿದ್ದಾರೆ.

ಈ ಹಿಂದೆ ಬಿಬಿಸಿ ಸುದ್ದಿವಾಹಿನಿ 2002ರಲ್ಲಿ ನಡೆದ ಗುಜರಾತ್​ ಗಲಭೆ ಬಗ್ಗೆ ಒಂದು ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿತ್ತು. ಇದು ದೇಶದಾದ್ಯಂತ ಪರ ವಿರೋಧ ಚರ್ಚೆಗಳಿಗೆ ಕಾರಣವಾಗಿತ್ತು. ಇದಾದ ನಂತರ ಫೆಬ್ರವರಿ 14 ರಂದು ಆದಾಯ ತೆರಿಗೆ ಅಧಿಕಾರಿಗಳು ದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿ ಮೇಲೆ ದಾಳಿ ನಡೆಸಿ, ಸುಮಾರು 60 ಗಂಟೆಗಳ ಕಾಲ ಅದರ ವ್ಯವಹಾರಗಳು,ತೆರಿಗೆ ಸಂಬಂಧಿತ ಕಡತಗಳ ಪರಿಶೀಲನೆ ಮಾಡಿದ್ದರು.

ಬುಧವಾರ ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಗೆ ಭೇಟಿ ನೀಡಲಿರುವ ವಿದೇಶಾಂಗ ಕಾರ್ಯದರ್ಶಿ ಯುವ ವೃತ್ತಿಪರರ ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ಯೋಜನೆಯಿಂದ ಸುಮಾರು 3,000 ಬ್ರಿಟನ್ನರಿಗೆ ಮತ್ತು 3,000 ಭಾರತೀಯರಿಗೆ ಲಾಭವಾಗಲಿದೆ. ಈ ಮೂಲಕ ಎರಡೂ ದೇಶದವರು ಒಂದು ವರ್ಷದಿಂದ ಎರಡು ವರ್ಷಗಳವರೆಗೆ ಎರಡು ದೇಶಗಳಲ್ಲಿ ಕೆಲಸ ಮಾಡಲು ಮತ್ತು ಜೀವನ ನಡೆಸಲು ಇದು ಪೂರಕವಾಗುತ್ತದೆ ಎಂದು ಯುಕೆ ರಾಯಭಾರ ಕಚೇರಿ ತಿಳಿಸಿದೆ.

ಇದನ್ನೂ ಓದಿ : 'ಅತ್ಯಂತ ವಿಫಲ ವಿದೇಶಾಂಗ ಸಚಿವ': ಜೈಶಂಕರ್ ವಿರುದ್ಧ ಕಾಂಗ್ರೆಸ್​ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.