ETV Bharat / bharat

ವಂಚಕ ಪ್ರಿಯಕರನ ಮದುವೆ ತಡೆಯಲು ಓಡೋಡಿ ಬಂದ ಪ್ರಿಯತಮೆ! ಮುಂದೆ ಆಗಿದ್ದೇ ಬೇರೆ.. - ಮೋಸ ಹೋದ ಯುವತಿರು

ಪ್ರೀತಿ ಮಾಯೆ ಹುಷಾರು, ಕಣ್ಣೀರ್ ಮಾರೋ ಬಜಾರು... ಒಮ್ಮೆ ಶರಣಾದ್ರೆ ಪ್ರೀತಿಗೆ ಕತ್ತು ಕೊಟ್ಟಂಗೆ ಕತ್ತಿಗೆ... ಎಂಬ ಸಿನಿಮಾದ ಹಾಡಿನ ಸಾಲಿನಂತೆ ಇಲ್ಲೊಂದು ಘಟನೆ ನಡೆದಿದೆ ಓದಿ.

Bridegroom family members attacked on Lady for trying to stop the marriage

author img

By

Published : Apr 15, 2022, 8:45 PM IST

Updated : Apr 15, 2022, 10:45 PM IST

ಹೈದರಾಬಾದ್​: ಮದುವೆ ತಡೆಯಲು ಯತ್ನಿಸಿದ ಯುವತಿಯೊಬ್ಬಳನ್ನು ಮನಬಂದಂತೆ ಥಳಿಸಿ ಜುಟ್ಟು ಹಿಡಿದು ಮದುವೆ ಮಂಟಪದಿಂದ ಎಳೆದುಕೊಂಡು ಹೋಗಿರುವ ಅಮಾನವೀಯ ಘಟನೆ ಮಹಬೂಬಾಬಾದ್ ಜಿಲ್ಲೆಯ ಖಮ್ಮಮ್​ ನಗರದಲ್ಲಿ ನಡೆಯಿತು. ಕಳೆದ ಎಂಟು ವರ್ಷದಿಂದ ಪ್ರೇಮಿಯನ್ನು ನಂಬಿದ ಈ ಪ್ರಿಯತಮೆ ಆತನಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ ಮದುವೆಯಾಗುವ ಆಸೆ ಇಟ್ಟುಕೊಂಡಿದ್ದಳು. ಆದರೆ, ಆಗಿದ್ದೇ ಬೇರೆ.!

ಗರ್ವಾಲ್ ಪ್ರದೇಶದ ಶ್ರೀನಾಥ್ ಎಂಬ ಯುವಕನೊಂದಿಗೆ 8 ವರ್ಷದಿಂದ ಸಖ್ಯ ಹೊಂದಿದ್ದ ಯುವತಿಯೇ ಇಂದು ಈ ಅವಮಾನಕ್ಕೆ ತುತ್ತಾದವಳು. ತನ್ನ ಬಾಳಲ್ಲಿ ಇಂತಹ ದಿನಗಳು ಯಾವತ್ತೂ ಬರುವುದಿಲ್ಲ ಎಂದು ಬಲವಾಗಿ ಭಾವಿಸಿದ್ದ ಯುವತಿ ತನ್ನ ಪ್ರಿಯತಮ ಶ್ರೀನಾಥನಿಗಾಗಿ ದೇಹ, ಮನಸ್ಸು ಎಲ್ಲವನ್ನೂ ಧಾರೆ ಎರೆದಿದ್ದಳು. ತನ್ನ ಬದುಕಲ್ಲಿ ಅವೆಲ್ಲವೂ ನೆನಪುಗಳಾಗಿಯೇ ಉಳಿಯುತ್ತವೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲವೇನೋ.

ಆದರೆ, ಇಂದು ಆ ಕನಸುಗಳೆಲ್ಲ ಕಮರಿ ಹೋಗಿವೆ. ತನ್ನ 8 ವರ್ಷದ ನಿಷ್ಕಲ್ಮಶ ಪ್ರೀತಿ ಇಲ್ಲವಾಗಿದೆ. ಆ ಯುವಕ ಮೋಸ ಮಾಡಿದ್ದಲ್ಲದೇ ಇಂದು ಬೇರೆ ಮದುವೆಯಾಗುತ್ತಿರುವ ಸುದ್ದಿ ಕೇಳಿ ಕಲ್ಯಾಣ ಮಂಟಪಕ್ಕೆ ಆಕೆ ಓಡಿ ಬಂದಿದ್ದಳು. ಮುಂದೇನಾಯ್ತು ಅನ್ನೋದನ್ನು ಈ ಮನಕಲಕುವ ದೃಶ್ಯವೇ ನಿಮಗೆ ಮನವರಿಕೆ ಮಾಡಬಲ್ಲದು.

'ಶ್ರೀನಾಥ್ ನಿನ್ನನ್ನೇ ಮದುವೆಯಾಗುವುದಾಗಿ ಹೇಳುತ್ತಾ ಪ್ರತಿ ಬಾರಿಯೂ ಸ್ಕಿಪ್ ಆಗುತ್ತಿದ್ದ. ಇದರ ಬಗ್ಗೆ ತಿಳಿಯದೆ ನಾನು ಎಲ್ಲವನ್ನೂ ನಂಬಿ ಕುಳಿತಿದ್ದೆ. ಆದರೆ, ಇಂದು ಖಮ್ಮಂಗೆ ಬಂದು ಇಲ್ಲಿಯ ಕಲ್ಯಾಣ ಮಂಟಪವೊಂದರಲ್ಲಿ ಬೇರೆ ಯುವತಿಯ ಜೊತೆ ಗುಟ್ಟಾಗಿ ಮದುವೆಯಾಗಿದ್ದಾನೆ' ಎಂದು ನೊಂದ ಯುವತಿ ಬೇಸರ ತೋಡಿಕೊಂಡಳು.

ಹೆಣ್ಣಿಗೆ ಹೆಣ್ಣೇಕೆ ಶತ್ರು?: ತನ್ನನ್ನು ಪ್ರೀತಿಸಿದ ವ್ಯಕ್ತಿ ಬೇರೊಬ್ಬ ಯುವತಿಯನ್ನು ಮದುವೆಯಾಗುತ್ತಿದ್ದಾನೆ ಎಂಬ ವಿಚಾರ ತಿಳಿದ ತಕ್ಷಣ ಯುವತಿ ಕಲ್ಯಾಣ ಮಂಟಪಕ್ಕೆ ಓಡೋಡಿ ಬಂದಿದ್ದಾಳೆ. ಆದರೆ, ಮದುವೆ ತಡೆಯಲು ಯತ್ನಿಸಿದ ಆಕೆಯನ್ನು ಅಲ್ಲಿದ್ದ ವರನ ಸಂಬಂಧಿಕರು ಜುಟ್ಟು ಹಿಡಿದು ದರದರನೆ ಮದುವೆ ಮಂಟಪದಿಂದ ಎಳೆದು ಹೊರಹಾಕಿದರು. ಸಿನಿಮಾದಲ್ಲಿ ತೋರಿಸುವಂತೆ ನೈಜ ಜೀವನದಲ್ಲಿಯೂ ಇಂಥ ಘಟನೆಗಳು ನಡೆೀತವೆ ಅನ್ನೋದಕ್ಕೆ ಮೇಲಿನ ದೃಶ್ಯವೇ ಸಾಕ್ಷಿಯಾಗಿತ್ತು.

ಪೊಲೀಸರ ನಿರ್ಲಕ್ಷ್ಯ: 'ನಿಮ್ಮ ಮಗ ನನ್ನನ್ನು ಪ್ರೀತಿಸಿ ದ್ರೋಹ ಬಗೆದಿದ್ದಾನೆ, ನ್ಯಾಯ ಕೊಡಿಸಿ' ಎಂದು ಬೇಡಿಕೊಂಡರೂ ಕೇಳದೇ ವರನ ಸಂಬಂಧಿಕರು ಯುವತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನೆಲ್ಲ ಗಮನಿಸುತ್ತಿದ್ದ ಪೊಲೀಸ್ ಸಿಬ್ಬಂದಿಯೊಬ್ಬರೂ ಕನಿಷ್ಠ ಹಲ್ಲೆಯನ್ನು ತಡೆಯುವ ಪ್ರಯತ್ನವನ್ನೂ ಮಾಡಲಿಲ್ಲ ಎಂದು ಯುವತಿ ಅಳಲು ತೋಡಿಕೊಂಡರು.

ಇದನ್ನೂ ಓದಿ: ಜಿಂಬಾಬ್ವೆಯಲ್ಲಿ ಕಂದಕಕ್ಕೆ ಬಿದ್ದ 106 ಪ್ರಯಾಣಿಕರಿದ್ದ ಬಸ್‌: 35 ಮಂದಿ ಸಾವು

Last Updated : Apr 15, 2022, 10:45 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.