ETV Bharat / bharat

ಏಕಾಏಕಿ ಕೊರಳಿಗೆ ಹಾರ ಹಾಕಿದ್ದಕ್ಕೆ ಸಿಟ್ಟು; ವರನಿಗೆ ಕಪಾಳಮೋಕ್ಷ ಮಾಡಿದ ವಧು! - ಹಾರ ಹಾಕಿದ್ದಕ್ಕಾಗಿ ವರನಿಗೆ ಕಪಾಳಮೋಕ್ಷ

ವೇದಿಕೆ ಮೇಲೆ ನಿಂತಿದ್ದಾಗ ದಿಢೀರ್ ಹಾರ ಹಾಕಿರುವುದಕ್ಕೆ ಆಕ್ರೋಶಗೊಂಡ ವಧು, ವರನಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

bride slaps groom in hamirpur
bride slaps groom in hamirpur
author img

By

Published : Apr 18, 2022, 5:47 PM IST

ಹಮೀರ್​ಪುರ(ಉತ್ತರ ಪ್ರದೇಶ): ಮದುವೆ ಸಮಾರಂಭದ ವೇಳೆ ಏಕಾಏಕಿ ಕೊರಳಿಗೆ ಹಾರ ಹಾಕಿದ್ದಕ್ಕಾಗಿ ಕೋಪಗೊಂಡಿರುವ ವಧು, ವರನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಉತ್ತರ ಪ್ರದೇಶದ ಹಮೀರ್​ಪುರದಲ್ಲಿ ನಡೆದ ಘಟನೆಯ ವಿಡಿಯೋ ವೈರಲ್​ ಆಗಿದೆ.

ಸ್ವಾಸಾ ಬಡ್ಜ್​ ಗ್ರಾಮದಲ್ಲಿ ಮದುವೆ ಸಮಾರಂಭ ಏರ್ಪಟ್ಟಿತ್ತು. ಜೈಮಾಲಾ ಹಾಗೂ ರವಿಕಾಂತ್ ಸಪ್ತಪದಿ ತುಳಿಯಬೇಕಾಗಿತ್ತು. ವೇದಿಕೆ ಮೇಲೆ ವಧು-ವರರು ನಿಂತಿದ್ದರು. ವರ ತಾನು ಕೈಯಲ್ಲಿ ಹಿಡಿದುಕೊಂಡಿದ್ದ ಹೂವಿನ ಹಾರವನ್ನು ದಿಢೀರ್‌ ವಧುವಿನ ಕೊರಳಿಗೆ ಹಾಕೇ ಬಿಟ್ಟ. ಈ ವೇಳೆ ತಾನಿನ್ನೂ ಸಂಪೂರ್ಣವಾಗಿ ಸಿದ್ಧಗೊಂಡಿಲ್ಲ ಎಂದು ಕುಪಿತಗೊಂಡ ವಧು, ಎರಡು ಸಲ ಕಪಾಳಮೋಕ್ಷ ಮಾಡಿದ್ದಾಳೆ. ಬಳಿಕ ವೇದಿಕೆಯಿಂದ ಇಳಿದು ಹೊರಟೇ ಹೋದಳು.

ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ: ಹೂಡಿಕೆದಾರರಿಗೆ ₹3.39 ಲಕ್ಷ ಕೋಟಿ ನಷ್ಟ!

ಘಟನೆಯ ಬೆನ್ನಲ್ಲೇ ಸ್ಥಳದಲ್ಲಿ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು. ಈ ವೇಳೆ ಇಬ್ಬರ ಮನವೊಲಿಕೆ ಮಾಡಲಾಗಿದ್ದು, ಸುಮಾರು ಗಂಟೆಗಳ ಬಳಿಕ ಮದುವೆಶಾಸ್ತ್ರ ನಡೆಸಿದ್ದಾರೆ. ಯಾವುದೇ ರೀತಿಯ ಪೊಲೀಸ್ ಪ್ರಕರಣ ದಾಖಲಾಗಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.