ETV Bharat / bharat

ಹೃದಯಾಘಾತದಿಂದ ವಧು ಸಾವು: ಸಂಭ್ರಮದ ಮದುವೆ ಮನೆಯಲ್ಲಿ ಸೂತಕ - ಪ್ರಜ್ಞೆ ತಪ್ಪಿ ಬಿದ್ದಿದ್ದ ಮಧುಮಗಳು

ಗುಜರಾತ್​ನ ಭಾವನಗರದ ಮದುವೆ ಮನೆಯೊಂದರಲ್ಲಿ ವಧು ಹಠಾತ್ ಸಾವನ್ನಪ್ಪಿದ್ದು, ಮದುವೆ ಮನೆಯಲ್ಲಿ ಶೋಕ ಮಡುಗಟ್ಟಿದೆ.

There was silence during the wedding ceremony
ಗುಜರಾತ್​ನ ಭಾವನಗರದಲ್ಲಿ ಮದುವೆ ಮನೆಯೊಂದರಲ್ಲಿ ವಧು ಸಾವು
author img

By

Published : Feb 24, 2023, 5:59 PM IST

ಗುಜರಾತ್: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಯುವತಿ ಹಸೆಮಣೆ ಏರಬೇಕಿತ್ತು. ಆದ್ರೆ ವಿಧಿಯಾಟ ಬಲ್ಲವರಾರು ಹೇಳಿ?. ಹೌದು, ಸಂತಸದಿಂದಿದ್ದ ವಧು ದಿಢೀರ್ ಹೃದಯಾಘಾತದಿಂದ ಕೊನೆಯುಸಿರೆಳೆದರು. ಮದುವೆ ಮನೆಯಲ್ಲೀಗ ನೀರವ ಮೌನ ಆವರಿಸಿದೆ.

ವಿವರ: ಭಾವನಗರದ ಸುಭಾಷ್‌ನಗರ ಪ್ರದೇಶದಲ್ಲಿ ರಾಥೋಡ್ ಕುಟುಂಬದ ಇಬ್ಬರು ಹೆಣ್ಣು ಮಕ್ಕಳ ಮದುವೆ ನಡೆಯುತ್ತಿತ್ತು. ಅದ್ಧೂರಿ ಮೆರವಣಿಗೆ ನಡೆದಿತ್ತು. ಇದೇ ಸಂದರ್ಭದಲ್ಲಿ ಓರ್ವ ವಧು ಹೃದಯಾಘಾತದಿಂದ ಸಾವನ್ನಪ್ಪಿದರು. ಈ ಬೇಸರದ ನಡುವೆಯೇ ಕುಟುಂಬದವರ ನಿರ್ಧಾರದಂತೆ ಕಿರಿ ಮಗಳ ಮದುವೆ ನಡೆಯಿತು.

ಭರವಾಡ ಕುಟುಂಬದ ಜಿನಾಭಾಯಿ ಭಾಕಾಭಾಯಿ ರಾಥೋಡ್ ಎಂಬವರ ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಪುತ್ರನ ವಿವಾಹ ನಿಗದಿಯಾಗಿತ್ತು. ಕುಟುಂಬದಲ್ಲಿ ಹಬ್ಬದ ವಾತಾವರಣ ನೆಲೆಸಿತ್ತು. ಎಲ್ಲರೂ ಸೇರಿ ಮದುವೆ ಹಾಡುಗಳನ್ನು ಹಾಡುತ್ತಿದ್ದರು. ಮೈಕ್​ಗಳು ಅಬ್ಬರಿಸುತ್ತಿದ್ದವು. ರಾಣಾಭಾಯಿ ಬೂತಾಭಾಯಿ ಅವರ ಮಗ ವಿಶಾಲಭಾಯಿ ಕೂಡ ತಾನು ಮೆಚ್ಚಿದ ಯುವತಿಯನ್ನು ಮದುವೆಯಾಗಲು ನಾರಿ ಗ್ರಾಮದಿಂದ ಮೆರವಣಿಗೆಯೊಂದಿಗೆ ಬಂದಿದ್ದರು. ಅಷ್ಟರಲ್ಲಿ ವಿಧಿಯಾಟ ನಡೆದಿದೆ.

ಮದುವೆಯ ವೇಳೆ ಜಿನಾಭಾಯಿ ಅವರ ಮಗಳು ಹೇತಾಳ್ ಇದ್ದಕ್ಕಿದ್ದಂತೆ ತಲೆ ಸುತ್ತು ಬಂದು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ತಪಾಸಣೆ ನಡೆಸಿದ ವೈದ್ಯರು ಯುವತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಯುವತಿಯ ನಗ್ನ ವಿಡಿಯೋಗಳನ್ನು ತೋರಿಸಿ ಕಿರುಕುಳ ನೀಡಿದ ಆರೋಪ: ಆಪ್ತ ಸ್ನೇಹಿತನನ್ನೇ ಕೊಲೆ ಮಾಡಿದ ಪ್ರೇಮಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.