ಕಾಳಹಸ್ತಿ(ಆಂಧ್ರಪ್ರದೇಶ): ನಾವು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ನಮ್ಮ ಆಚಾರ-ವಿಚಾರ, ನಂಬಿಕೆಗಳನ್ನು ಬಿಡುತ್ತಿದ್ದೇವೆ. ಕೆಲವರು ನಮ್ಮ ಆಚರಣೆಗಳನ್ನೇ ಮೂಢ ನಂಬಿಕೆ ಎಂದು ಅಪಹಾಸ್ಯ ಮಾಡುತ್ತಾರೆ. ಆದರೆ ಭಾರತದ ಸಂಸ್ಕೃತಿಯ ಬಗ್ಗೆ ಪಾಶ್ಚಿಮಾತ್ಯರಲ್ಲಿ ಪಾವಿತ್ರ್ಯತೆಯ ಭಾವನೆ ಇದೆ. ಇದಕ್ಕೆ ಆಂಧ್ರಪ್ರದೇಶದ ಕಾಳಹಸ್ತೇಶ್ವರ ದೇವಸ್ಥಾನ ಸೋಮವಾರ ಸಾಕ್ಷಿಯಾಯಿತು.
ಬ್ರೆಜಿಲ್‌ನಿಂದ ಬಂದಿರುವ ಒಟ್ಟು 22 ಜನ ಭಕ್ತರು ಕಾಳಹಸ್ತೇಶ್ವರ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಎಲ್ಲಾ ಭಕ್ತರು ವಿಶೇಷ ರಾಹು ಕೇತು ಪೂಜೆಯನ್ನು ನೆರವೇರಿಸಿ ಶಿವ ಮತ್ತು ಗೌರಿ ದೇವಿಯನ್ನು ಪೂಜಿಸಿದರು. ದೇಗುಲದಲ್ಲಿ ಹಾಲು, ಪಂಚಾಮೃತ, ಶ್ರೀಗಂಧದೊಂದಿಗೆ ಮೃತ್ಯುಂಜಯ ಅಭಿಷೇಕ ಹಾಗೂ ವಿಭೂತಿ ಮತ್ತು ಪಚ್ಚೆ ಕರ್ಪೂರ ವಿವಿಧ ಪೂಜಾ ಸೇವೆಗಳನ್ನು ನೆರವೇರಿಸಿದರು.
ಕಾಳಹಸ್ತಿ ದೇವರ ದೇಗುಲಕ್ಕೆ ಬಂದಿರುವುದು ನಮ್ಮ ಪಾಲಿನ ಪುಣ್ಯ, ನಮಗೆ ದೇವರ ಮೇಲೆ ಅಪಾರ ನಂಬಿಕೆ ಇದೆ. ಇಲ್ಲಿ ಉತ್ತಮ ಆಥಿತ್ಯ ದೊರೆತಿದೆ ಎಂದು ಬ್ರೆಜಿಲ್ ಭಕ್ತರೊಬ್ಬರು ಹೇಳಿದ್ದಾರೆ.
ಬ್ರೆಜಿಲ್‌ನಿಂದ ಭಕ್ತರನ್ನು ಸ್ವಾಗತಿಸಲು ನಾವು ಸಂತೋಷಪಡುತ್ತೇವೆ. ಬ್ರೆಜಿಲ್‌ನ ಭಕ್ತರು ಇಲ್ಲಿ ವಿಶೇಷ ಪೂಜೆಗಳನ್ನು ಮಾಡಿಸಿದ್ದಾರೆ. ಅವರು ತುಂಬಾ ಜನ ಬಂದಿದ್ದರು. ನಮ್ಮ ಆತಿಥ್ಯ ಅವರಿಗೆ ಸಂತೋಷವಾಗಿದೆ. ಅವರು ರಾಹು-ಕೇತು ಪೂಜೆಗಳನ್ನು ಮಾಡಿಸಿದರು. ಪ್ರಪಂಚದಾದ್ಯಂತದ ಜನರು ಹಿಂದೂ ಪುರಾಣಗಳನ್ನು ನಂಬುತ್ತಾರೆ ಎಂದು ಕಾಳಹಸ್ತೇಶ್ವರದ ಕಾರ್ಯನಿರ್ವಾಹಕ ಅಧಿಕಾರಿ ಹೇಳಿದರು.
ಇದನ್ನೂ ಓದಿ: ನೀರು ಬಂಡಿ ಉತ್ಸವ.. ಕೊಪ್ಪರಿಗೆ ಇಳಿಯುವುದರೊಂದಿಗೆ ಕುಕ್ಕೆ ಜಾತ್ರೆ ಸಂಪನ್ನ