ETV Bharat / bharat

ಭಾರತದ 'ಬ್ರಹ್ಮೋಸ್' ಖರೀದಿಸಿದ ಮೊದಲ ದೇಶ ಫಿಲಿಪ್ಪೀನ್ಸ್​​.. ₹2,770 ಕೋಟಿ ರೂ. ಒಪ್ಪಂದ - ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್ ಕ್ಷಿಪಣಿ ಮಾರಾಟಕ್ಕೆ ಒಪ್ಪಂದ

India exporting Brahmos to Philippines : ಭಾರತದ ಬ್ರಹ್ಮೋಸ್ ಏರೋಸ್ಪೇಸ್ ಮತ್ತು ಫಿಲಿಪ್ಪೀನ್ಸ್ 374 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಮೂಲಕ ವಿದೇಶಕ್ಕೆ ತನ್ನ ಬ್ರಹ್ಮೋಸ್ ಕ್ಷಿಪಣಿಗಳನ್ನು ಮಾರಾಟ ಮಾಡುವ ಮಹತ್ವದ ಅವಕಾಶ ಪಡೆದುಕೊಂಡಿದೆ..

ಭಾರತದಿಂದ ಬ್ರಹ್ಮೋಸ್​​ ಮಾರಾಟ ಒಪ್ಪಂದ
ಭಾರತದಿಂದ ಬ್ರಹ್ಮೋಸ್​​ ಮಾರಾಟ ಒಪ್ಪಂದ
author img

By

Published : Jan 28, 2022, 7:31 PM IST

Updated : Jan 28, 2022, 8:00 PM IST

ನವದೆಹಲಿ : ರಕ್ಷಣಾ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮಹತ್ವದ ಮೈಲಿಗಲ್ಲು ಇಟ್ಟಿದೆ. ಇದೀಗ ಅತ್ಯಾಧುನಿಕ ಬ್ರಹ್ಮೋಸ್​ ಕ್ಷಿಪಣಿಗಳ ಪೂರೈಕೆಗೋಸ್ಕರ ಫಿಲಿಪ್ಪೀನ್ಸ್​​​ ರಕ್ಷಣಾ ಸಚಿವಾಲಯದೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಉಭಯ ದೇಶಗಳ ಮಧ್ಯೆ ಇಂದು 2,770 ಕೋಟಿ ರೂ. ಮೌಲ್ಯದ (374 ಮಿಲಿಯನ್ ಡಾಲರ್)​ ಒಪ್ಪಂದವಾಗಿದೆ.

ಬಿಜೆಪಿ ಬಳಿ 4,847.78 ಕೋಟಿ ರೂ. ಮೌಲ್ಯದ ಆಸ್ತಿ.. ಯಾವ ಪಾರ್ಟಿ ಬಳಿ ಎಷ್ಟೊಂದು ಕೋಟಿ ಆಸ್ತಿ ನೋಡಿ?

ರಕ್ಷಣಾ ವಲಯದಲ್ಲಿ ರಫ್ತುದಾರನಾದ ಭಾರತ : ಫಿಲಿಪ್ಪೀನ್ಸ್​​ ನೌಕಾಪಡೆಗೆ ಸೂಪರ್ ಸಾನಿಕ್ ಕ್ಷಿಪಣಿಗಳನ್ನ ಖರೀದಿಸಲು ಇದೀಗ ಮಹತ್ವದ ಒಪ್ಪಂದವಾಗಿದ್ದು, ಈ ಮೂಲಕ ಭಾರತ ತನ್ನ ಬ್ರಹ್ಮೋಸ್​ ಕ್ಷಿಪಣಿಗಳನ್ನ ಮಾರಾಟ ಮಾಡುವ ಮೊದಲ ಅವಕಾಶ ಪಡೆದುಕೊಂಡಿದೆ. ಈ ಒಪ್ಪಂದದಲ್ಲಿ ಎಷ್ಟು ಕ್ಷಿಪಣಿ ಮಾರಾಟ ಮಾಡಲು ಮಾತುಕತೆ ಆಗಿದೆ ಎಂಬುದರ ಬಗ್ಗೆ ಮಾಹಿತಿ ಬಹಿರಂಗಗೊಂಡಿಲ್ಲ.

India exporting Brahmos to Philippines
ಭಾರತದ 'ಬ್ರಹ್ಮೋಸ್' ಖರೀದಿಸಿದ ಮೊದಲ ದೇಶ ಫಿಲಿಪ್ಪೀನ್ಸ್

ಭಾರತ-ರಷ್ಯಾ ಜಂಟಿ ಪಾಲುದಾರಿಕೆ ಸಂಸ್ಥೆಯಾಗಿರುವ ಬ್ರಹ್ಮೋಸ್​ ಏರೋಸ್ಪೇಸ್​​ ಸೂಪರ್ ಸ್ಯಾನಿಕ್​ ಕ್ರೂಸ್ ಕ್ಷಿಪಣಿ ತಯಾರಿಸುತ್ತಿದ್ದು, ಇವುಗಳನ್ನ ಸಬ್​ಮರಿನ್, ಹಡಗು, ಯುದ್ದ ವಿಮಾನ ಅಥವಾ ನೆಲದ ಮೇಲಿಂದ ಉಡಾವಣೆ ಮಾಡಬಹುದಾಗಿದೆ.

ಫಿಲಿಪ್ಪೀನ್ಸ್ ಜೊತೆ ಚೀನಾ ವಿವಾದ ಹೊಂದಿದ್ದು, ಇದೀಗ ಭಾರತದ ಬ್ರಹ್ಮೋಸ್ ಖರೀದಿ ಮಾಡಿರುವುದರಿಂದ ಡ್ರ್ಯಾಗನ್ ದೇಶಕ್ಕೆ ಮತ್ತಷ್ಟು ತಲೆನೋವು ಹೆಚ್ಚಾಗಲಿದೆ.

ಇಷ್ಟು ದಿನ ರಷ್ಯಾ, ಜಪಾನ್ ಸೇರಿದಂತೆ ವಿವಿಧ ದೇಶಗಳಿಂದ ರಕ್ಷಣಾ ಸಾಮಗ್ರಿ ಆಮದು ಮಾಡಿಕೊಳ್ಳುತ್ತಿದ್ದ ಭಾರತ ಇದೀಗ ಬೇರೆ ದೇಶಕ್ಕೆ ರಫ್ತುದಾರನಾಗಿದ್ದು, ಈ ಮೂಲಕ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯುವತ್ತ ದಾಪುಗಾಲು ಇಟ್ಟಿದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 28, 2022, 8:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.