ETV Bharat / bharat

ಬ್ರಾಹ್ಮಣ ಎಂಬುದು ಜಾತಿಯಲ್ಲ, ಅದು ಉನ್ನತ ಜೀವನ ವಿಧಾನ: ಬಿಜೆಪಿ ನಾಯಕ ದಿನೇಶ್ ಶರ್ಮಾ

ಬಿಜೆಪಿ ಹಿಂದುಳಿದ ವರ್ಗಗಳು, ಜಾಟ್‌ಗಳು, ಗುಜ್ಜರ್‌ಗಳು, ಠಾಕೂರ್‌ಗಳು, ವೈಶ್ಯ ಮತ್ತು ಎಲ್ಲರಿಗಾಗಿ ಕೆಲಸ ಮಾಡುತ್ತದೆ. ನಮ್ಮಲ್ಲಿ ಸಚಿವರು, ಶಾಸಕರು, ಎಂಎಲ್‌ಸಿಗಳು ಜಾತಿವಾರು ಇದ್ದಾರೆ. ಇತರ ಪಕ್ಷಗಳಂತೆ ನಾವು ಜನರ ನಡುವೆ ಭೇದಭಾವ ಮಾಡಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕ ದಿನೇಶ್ ಶರ್ಮಾ ಹೇಳಿದ್ದಾರೆ.

ದಿನೇಶ್ ಶರ್ಮಾ
ದಿನೇಶ್ ಶರ್ಮಾ
author img

By

Published : Feb 7, 2022, 7:51 AM IST

ನೋಯ್ಡಾ: ಬ್ರಾಹ್ಮಣ ಎಂಬುದು ಜಾತಿಯಲ್ಲ, ಅದು ಉನ್ನತ ಜೀವನ ವಿಧಾನವಾಗಿದೆ ಎಂದು ಬಿಜೆಪಿಯ ಹಿರಿಯ ನಾಯಕ ದಿನೇಶ್ ಶರ್ಮಾ ಹೇಳಿದ್ದಾರೆ.

ಗೌತಮ್ ಬುದ್ಧ ನಗರದಲ್ಲಿ ಜೇವರ್‌ನಲ್ಲಿ ಬಿಜೆಪಿ ಅಭ್ಯರ್ಥಿ ಧೀರೇಂದ್ರ ಸಿಂಗ್ ಪರ ಪ್ರಚಾರದ ವೇಳೆ ಅವರು ಮಾತನಾಡಿದರು. ವಿಧಾನಸಭಾ ಚುನಾವಣೆಯ ಹಿನ್ನೆಲೆ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ ಮತ್ತು ಬ್ರಾಹ್ಮಣವಾದದ ಬಗ್ಗೆ ಮತ್ತು ಜಾತಿವಾದದ ಬಗ್ಗೆ ಪಕ್ಷದ ನಿಲುವಿನ ಬಗ್ಗೆ ಆಗಾಗ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಯಾರೋ ಓರ್ವರು ಬ್ರಾಹ್ಮಣರ ಬಗ್ಗೆ ನನ್ನ ಆಲೋಚನೆಗಳನ್ನು ಕೇಳಿದರು, ಅದಕ್ಕೆ ಉತ್ತರಿಸಿ, ಬಿಜೆಪಿಗೆ 'ಸಬ್ಕಾ ಸಾಥ್, ಸಬ್ಕಾ ವಿಕಾಸ' ಬೇಕು ಅಷ್ಟೇ... ಬ್ರಾಹ್ಮಣ ಅಥವಾ ಗುಜ್ಜರ್, ಜಾಟ್‌ಗಳು ಅಲ್ಲ. ಪ್ರತಿಯೊಂದು ಜಾತಿಗೂ ಅದರ ಮಹತ್ವವಿದೆ ಮತ್ತು ಅದಕ್ಕಾಗಿಯೇ ನಾವು ಇಲ್ಲಿ ಎಲ್ಲಾ ಜಾತಿಗಳನ್ನು ಬೆಂಬಲಿಸುತ್ತೇವೆ ಎಂದು ಹೇಳಿದೆ ಎಂದು ತಿಳಿಸಿದರು.

ನನ್ನನ್ನು ಬ್ರಾಹ್ಮಣತ್ವಕ್ಕೆ ಜೋಡಿಸಿದರೆ ಅದಕ್ಕೆ ನಾನು ಹೌದು ಎನ್ನುತ್ತೇನೆ. ನಾನು ಬ್ರಾಹ್ಮಣ ಮತ್ತು ಆ ಬಗ್ಗೆ ಹೆಮ್ಮೆಪಡುತ್ತೇನೆ. ನಾನು ಅದನ್ನು ಯಾವುದೇ ಅಗೌರವದಿಂದ ನೋಡುವುದಿಲ್ಲ. ಬ್ರಾಹ್ಮಣರ ಕೆಲಸವು 'ಸರ್ವೇ ಭವಂತು ಸುಖಿನಾ', ಇತರರ ಸಂತೋಷದಲ್ಲಿ ಸಂತೋಷವನ್ನು ಅನುಭವಿಸುವವನು ಬ್ರಾಹ್ಮಣ ಎಂದು ಸ್ಪಷ್ಟನೆ ನೀಡಿದರು.

ಬ್ರಾಹ್ಮಣ ಅನ್ನೋದು ಜಾತಿಯಲ್ಲ, ಉನ್ನತ ಜೀವನ ವಿಧಾನವನ್ನು ಬ್ರಾಹ್ಮಣ ಎಂದು ಕರೆಯಲಾಗುತ್ತದೆ. ಅವನು ಯಾವುದೇ ಜಾತಿಯೊಂದಿಗೆ ಸಂಘರ್ಷ ಹೊಂದಿಲ್ಲ. ಹುಟ್ಟಿನಿಂದ ಸಾಯುವವರೆಗೂ ಒಳ್ಳೆಯ ಕಾರ್ಯಕ್ಕಾಗಿ ಕೆಲಸ ಮಾಡುತ್ತಾರೆ ಎಂದು ವಿವರಿಸಿದರು.

ಇದನ್ನೂ ಓದಿ: ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ ಪ್ರಕರಣ: ಉಭಯ ಸದನಗಳಲ್ಲಿ ಇಂದು ಹೇಳಿಕೆ ನೀಡಲಿರುವ ಅಮಿತ್ ಶಾ

ಬಿಜೆಪಿ ಹಿಂದುಳಿದ ವರ್ಗಗಳು, ಜಾಟ್‌ಗಳು, ಗುಜ್ಜರ್‌ಗಳು, ಠಾಕೂರ್‌ಗಳು, ವೈಶ್ಯ ಮತ್ತು ಎಲ್ಲರಿಗಾಗಿ ಕೆಲಸ ಮಾಡುತ್ತದೆ. ನಮ್ಮಲ್ಲಿ ಸಚಿವರು, ಶಾಸಕರು, ಎಂಎಲ್‌ಸಿಗಳು ಜಾತಿವಾರು ಇದ್ದಾರೆ. ಇತರ ಪಕ್ಷಗಳಂತೆ ನಾವು ಜನರ ನಡುವೆ ಭೇದಭಾವ ಮಾಡಿಲ್ಲ ಎಂದು ಅವರು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಪಶ್ಚಿಮ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ಜೇವರ್ ರಾಜ್ಯದಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆ ಹಿನ್ನೆಲೆ ಫೆಬ್ರವರಿ 10 ರಂದು ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.