ETV Bharat / bharat

ತನ್ನೊಂದಿಗೆ ಸಹಕರಿಸಲಿಲ್ಲವೆಂದು ಯುವತಿಗೆ ಬೆಂಕಿ ಹಚ್ಚಿದ ಪ್ರೇಮಿ: ಆಸ್ಪತ್ರೆಗೆ ದಾಖಲಿಸಿ ಪರಾರಿ - ಮಧ್ಯಪ್ರದೇಶ ರೇವಾ

ತಡರಾತ್ರಿ ಲವರ್​ ಭೇಟಿ ಮಾಡಲು ತೆರಳಿದ್ದ ಯುವಕನೋರ್ವ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ.

Boyfriend sets fire to girlfriend
Boyfriend sets fire to girlfriend
author img

By

Published : Jul 8, 2021, 6:26 PM IST

ರೇವಾ(ಮಧ್ಯಪ್ರದೇಶ): ತಾನು ಪ್ರೀತಿಸುತ್ತಿದ್ದ ಯುವತಿಯೋರ್ವಳು ಸಹಕಾರ ನೀಡಲಿಲ್ಲ(ದೈಹಿಕ ಸಂಪರ್ಕ) ಎಂಬ ಕಾರಣಕ್ಕಾಗಿ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಮಧ್ಯಪ್ರದೇಶದ ರೇವಾದಲ್ಲಿನ ಮಂಗವಾನ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

ಕಳೆದ ಕೆಲ ತಿಂಗಳಿಂದ ಮಂಗವಾನ್​ ಗ್ರಾಮದ ಯುವಕ ಆನಂದ್​ ಪಟೇಲ್ ಹಾಗೂ ಅದೇ ಗ್ರಾಮದ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಗುರುವಾರ ರಾತ್ರಿ 12 ಗಂಟೆಗೆ ಆರೋಪಿ ಯುವತಿ ಭೇಟಿ ಮಾಡಲು ಬಂದಿದ್ದಾನೆ. ಈ ವೇಳೆ ಆತನೊಂದಿಗೆ ಕೆಲ ಸ್ನೇಹಿತರು ಬಂದಿದ್ದರು. ಎಲ್ಲರೂ ಸೇರಿ ಆಕೆಗೆ ಕಿರುಕುಳ ನೀಡಲು ಮುಂದಾಗಿದ್ದು, ದೈಹಿಕವಾಗಿ ಸಹಕಾರ ನೀಡುವಂತೆ ಕೇಳಿದ್ದಾರೆ. ಆದರೆ ಇದಕ್ಕೆ ಆಕೆ ಪ್ರತಿಭಟಿಸಿದ್ದಾಳೆ. ಇದರಿಂದ ಆಕ್ರೋಶಗೊಂಡು ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.

ಆಕೆಯ ದೇಹದ ಕೆಲವೊಂದು ಭಾಗಗಳಿಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಎಲ್ಲರೂ ಸೇರಿಕೊಂಡು ನಂದಿಸಿ, ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿದ್ದಾರೆ. ಇದರ ಬೆನ್ನಲ್ಲೇ ಎಲ್ಲರೂ ಅಲ್ಲಿಂದ ಪರಾರಿಯಾಗಿದ್ದಾರೆ. ಇದರ ಬಗ್ಗೆ ಪೋಷಕರಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

Boyfriend sets fire to girlfriend in Madhypradesh
ಯುವತಿ ಚಿಕಿತ್ಸೆಗೆ ದಾಖಲಾಗಿರುವ ಸಂಜಯ್​ ಗಾಂಧಿ ಆಸ್ಪತ್ರೆ

ಪ್ರಮುಖ ಆರೋಪಿ ಆನಂದ್ ಪಟೇಲ್ ವಿರುದ್ಧ ದೂರು ದಾಖಲು ಮಾಡಿಕೊಂಡಿರುವ ಪೊಲೀಸರು ಈಗಾಗಲೇ ಆತನ ಬಂಧನ ಮಾಡಿದ್ದಾರೆ. ಈ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ. ಹೀಗಾಗಿ ಸೆಕ್ಷನ್ 354, 307ರ ಅಡಿಯಲ್ಲಿ ಕೇಸ್​ ದಾಖಲು ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.