ETV Bharat / bharat

8 ವರ್ಷದ ಪ್ರೇಮ.. ಮೂರು ಬಾರಿ ಅಬಾರ್ಷನ್, ಹಲ್ಲೆ.. ಪೊಲೀಸ್​ ಮೊರೆ ಹೋದ ಯುವತಿ - 8 years love fails

8 ವರ್ಷಗಳ ಕಾಲ ಹುಡುಗಿಯ ಜೊತೆ ಪ್ರೀತಿಯ ಆಟ ಆಡಿದ ಯುವಕ ಮದುವೆಯಾಗಲು ನಿರಾಕರಿಸಿದ್ದಾನೆ. ಈಗ ಆಕೆ ಮಹಿಳಾ ಪೊಲೀಸ್​ ಠಾಣೆಯ ಮೊರೆಹೋಗಿದ್ದಾಳೆ.

boyfriend-cheated-on-girlfriend-for-eight-years
ಎಂಟು ವರ್ಷದ ಪ್ರೇಮ.. ಮೂರು ಬಾರಿ ಅಬಾರ್ಷನ್.. ಕುಟುಂಬಸ್ಥರಿಂದ ಹಲ್ಲೆ..: ಪೊಲೀಸರ ಮೊರೆ ಹೋದ ಯುವತಿ
author img

By

Published : Sep 9, 2021, 12:00 PM IST

Updated : Sep 9, 2021, 12:15 PM IST

ರೋಹ್ಟಾಸ್(ಬಿಹಾರ): ಸುಮಾರು 8 ವರ್ಷಗಳ ಕಾಲ ಪ್ರೀತಿ, ಮದುವೆ ಹೆಸರಲ್ಲಿ ಯುವತಿಯನ್ನು ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡು ಮದುವೆಯಾಗಲು ನಿರಾಕರಿಸಿದ ಯುವಕನ ವಿರುದ್ಧ ಸಂತ್ರಸ್ತೆ ಮಹಿಳಾ ಪೊಲೀಸ್ ಠಾಣೆಯ ಮೊರೆಹೋಗಿದ್ದಾಳೆ. ದಾಲ್ಮಿಯಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತನ್ನ ಮತ್ತು ದೆಹಲಿಯ ನಿವಾಸಿ ರವಿಕುಮಾರ್ ಎಂಬಾತನ ನಡುವೆ ಸುಮಾರು 8 ವರ್ಷಗಳಿಂದ ಪ್ರೇಮ ಸಂಬಂಧವಿದೆ. ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದೆವು. ಆಗಾಗ ರವಿಕುಮಾರ್ ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದನು ಎಂದು ಭೋಜ್‌ಪುರ್ ಜಿಲ್ಲೆಯ ಸಂತ್ರಸ್ತ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಮದುವೆಯ ವಿಚಾರವನ್ನು ಯುವತಿ ಪ್ರಸ್ತಾಪಿಸುತ್ತಿದ್ದರೂ, ಆತ ನೆಪ ಹೇಳುತ್ತಿದ್ದ. ಈ ಮಧ್ಯೆ ಆಕೆ ಮೂರು ಬಾರಿ ಗರ್ಭಿಣಿಯಾಗಿದ್ದಳು. ಆದರೆ ರವಿಕುಮಾರ್​ ಅಬಾರ್ಷನ್ ಮಾಡಿಸಿದ್ದನು. ಕೆಲವು ದಿನಗಳ ನಂತರ ಮದುವೆ ವಿಚಾರ ಪ್ರಸ್ತಾಪಿಸಿದಾಗ ಆರೋಪಿ ಮದುವೆಯಾಗಲು ನಿರಾಕರಿಸಿದನು.

ಯುವತಿಯ ಮೇಲೆ ಮಾರಣಾಂತಿಕ ಹಲ್ಲೆ..

ರವಿಕುಮಾರ್ ಮದುವೆಯಾಗಲು ನಿರಾಕರಿಸಿದ ನಂತರ, ಇದನ್ನು ಕೇಳಲು ಯುವತಿ ತಯಾರಿರಲಿಲ್ಲ. ನೇರವಾಗಿ ರವಿಕುಮಾರ್ ಮನೆಗೆ ತೆರಳಿ, ಆತನ ಕುಟುಂಬಸ್ಥರಿಗೆ ಈ ವಿಚಾರ ತಿಳಿಸಿದ್ದಳು. ಆದರೆ ರವಿ ಕುಟುಂಬಸ್ಥರು ಯುವತಿ ಮಾತನ್ನು ಕೇಳಲು ಸಿದ್ಧರಿರಲಿಲ್ಲ. ಯುವತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಚಾಕುವಿನಿಂದ ದಾಳಿಯೂ ನಡೆಯುತ್ತದೆ. ಅಲ್ಲಿಂದ ಹೇಗೋ ತಪ್ಪಿಸಿಕೊಂಡ ಯುವತಿ ತನ್ನ ಪ್ರಾಣ ಕಾಪಾಡಿಕೊಂಡಿದ್ದಳು.

ಈಗ ಯುವತಿ ರೋಹ್ಟಾಸ್ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ರವಿಕುಮಾರ್​ ಕುಟುಂಬಸ್ಥರಿಂದ ಪ್ರಾಣ ಬೆದರಿಕೆ ಇದೆ ಎಂದೂ ಆರೋಪಿಸಿದ್ದಾಳೆ. ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಸಂತ್ರಸ್ತೆಯ ಹೇಳಿಕೆಯ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಸಿಪಿಐಎಂ ಕಚೇರಿಗೆ ಬೆಂಕಿ.. ಬಿಜೆಪಿಯ ಗೂಂಡಾ ವರ್ತನೆ ಎಂದು ಆರೋಪಿಸಿದ ಸಿಪಿಐಎಂ

Last Updated : Sep 9, 2021, 12:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.