ತಿರುನಲ್ವೇಲಿ : ಆನ್‌ಲೈನ್ ಆಟದ ಗುಂಗಿಗೆ ಬಿದ್ದ 17 ವರ್ಷದ ಬಾಲಕನೊಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಪೋಷಕರ ಕಣ್ತಪ್ಪಿಸಿ ಬಾಲಕ ಅತೀ ಹೆಚ್ಚಾಗಿ ಫ್ರೀ ಫೈರಿಂಗ್ ಗೇಮ್ ಆಡುತ್ತಿದ್ದರಿಂದ ಬುದ್ಧಿಮಾಂದ್ಯತೆ ಕಾಣಿಸಿಕೊಂಡಿರುವ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಕಂಡು ಬಂದಿದೆ.
ಏಪ್ರಿಲ್ 4ರ ಮಧ್ಯರಾತ್ರಿ ಜಿಲ್ಲಾಸ್ಪತ್ರೆಗೆ ಶಾಲಾ ಬಾಲಕನೊಬ್ಬನನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆಗ ಬಾಲಕ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆತನ ಕೈಗಳು ಗನ್ ಶೂಟ್ ಮಾಡುವಂತೆ ಆಟ ಆಡುತ್ತಿರುವುದು ಕಂಡು ಬಂದಿದೆ.
ಈ ಬಗ್ಗೆ ಕುಟುಂಬಸ್ಥರಿಗೆ ವಿಚಾರಿಸಿದಾಗ ಆ ಬಾಲಕ ಅತೀ ಹೆಚ್ಚು ಪಬ್ಜೀ ಮತ್ತು ಫ್ರೀ ಫೈರ್ ಗೇಮ್ನಂತಹ ಆನ್‌ಲೈನ್ ಗೇಮ್ ಅತೀ ಹೆಚ್ಚು ಆಡುತ್ತಿದ್ದನು ಎಂದು ಹೇಳಿದ್ದಾರೆ.
ಓದಿ: ಆನ್‌ಲೈನ್ ಗೇಮ್ಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ : ತಿದ್ದುಪಡಿ ಕಾಯ್ದೆ ರದ್ದು
ನಿರಂತರವಾಗಿ ಸೆಲ್‌ಫೋನ್‌ನಲ್ಲಿ ಫ್ರೀ ಫೈರ್ ಗೇಮ್ ಆಡುತ್ತಿದ್ದ ಪರಿಣಾಮ ಬಾಲಕ ಮಾನಸಿಕ ಅಸ್ವಸ್ಥದಿಂದ ಬಳಲುತ್ತಿದ್ದಾನೆ ಎಂದು ತಿಳಿದು ಬಂದಿದೆ. ಮಾನಸಿಕ ಅಸ್ವಸ್ಥನಿಂದ ಬಳಲುತ್ತಿರುವ ಬಾಲಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪೋಷಕರು ತಮ್ಮ ಮಗನಿಗೆ ಮೊಬೈಲ್ ಅನ್ನು ವಿದ್ಯಾಭ್ಯಾಸ ಉದ್ದೇಶಕ್ಕೆ ನೀಡಿದ್ದರು ಎನ್ನಲಾಗಿದೆ.
ಆದ್ರೆ, ಬಾಲಕ ಪೋಷಕರ ಕಣ್ತಪ್ಪಿಸಿ ಫ್ರೀ ಫೈರ್ ಗೇಮ್ ಆಡುತ್ತಿದ್ದನು ಎನ್ನಲಾಗ್ತಿದೆ. ಇದೇ ವೇಳೆ ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್ ಗೇಮ್ಗಳ ಚಟಕ್ಕೆ ಬಲಿಯಾಗುವುದನ್ನು ತಡೆಯಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.