ಭುವನೇಶ್ವರ: ಮೊಬೈಲ್ನಲ್ಲಿ ಗೇಮ್ ಆಡಬೇಡ ಎಂದು ಪೋಷಕರು ಹೇಳಿದ್ದಕ್ಕೆ ಕೋಪಗೊಂಡ 13 ವರ್ಷದ ಬಾಲಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಡಿಶಾದ ಕೋರಾಪುಟ್ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಬಾಲಕ ಖಾಸಗಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದ. ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಮೊಬೈಲ್ ಫೋನ್ ಮೂಲಕ ಆನ್‌ಲೈನ್ ತರಗತಿಗೆ ಹಾಜರಾಗುತ್ತಿದ್ದ. ಆದರೆ ಬಾಲಕ ಮೊಬೈಲ್ನಲ್ಲಿ ಸದಾ ಗೇಮ್ ಆಡುವುದರಲ್ಲಿ ನಿರತನಾಗಿರುತ್ತಿದ್ದ. ಆಟ ಆಡದಂತೆ ಅನೇಕ ಸಲ ಪೋಷಕರು ಆತನಿಗೆ ತಿಳಿಹೇಳಿದ್ದರು.
ಆದರೂ ಕೂಡ ಗೇಮ್ ಆಡುವುದನ್ನು ಮುಂದುವರೆಸಿದ್ದು, ಅದನ್ನು ಕಂಡ ಪೋಷಕರು ಮೊಬೈಲ್ ಕಿತ್ತುಕೊಂಡಿದ್ದರು. ಇದರಿಂದ ಕೋಪಗೊಂಡ ಬಾಲಕ ಮನೆಯಲ್ಲಿನ ಕೋಣೆಯೊಳಗೆ ಹೋಗಿ ಬಾಗಿಲಿನ ಬೀಗ ಹಾಕಿಕೊಂಡಿದ್ದಾನೆ. ನಂತರ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ನೇಣು ಹಾಕಿಕೊಂಡ ಬಾಲಕನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಕೂಡ ಅದಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಪೋಷಕರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಕೇವಲ 1,000 ರೂಪಾಯಿಗೆ ಸ್ನೇಹಿತನ ಕೊಲೆ: ಮರ್ಡರ್ ಮಿಸ್ಟರಿ ಬಿಚ್ಚಿಟ್ಟ ಮರಣೋತ್ತರ ಪರೀಕ್ಷೆ ವರದಿ