ETV Bharat / bharat

2 ಲಕ್ಷದ ಕನಸಿನ ಬೈಕ್​ನ್ನು ಒಂದು ರೂಪಾಯಿ ನಾಣ್ಯಗಳನ್ನೇ ಪಾವತಿಸಿ ಖರೀದಿಸಿದ ಯುವಕ!

'ನನಗೆ ಬಾಲ್ಯದಿಂದಲೂ ಕೆಟಿಎಂ ಬೈಕ್​ ಎಂದರೆ ಇಷ್ಟ. ನಾನು ದೊಡ್ಡವನಾದ ಮೇಲೆ ಅದನ್ನು ಖರೀದಿಸಿಬೇಕು ಎಂದು ಕನಸು ಹೊಂದಿದ್ದೆ. ಅದಕ್ಕಾಗಿ ಹಣ ಸಂಪಾದಿಸಲು ಆನ್‌ಲೈನ್ ಗೇಮಿಂಗ್ ಚಾನೆಲ್ ನಡೆಸಿದೆ. ಜೊತೆಗೆ ಎಲ್ಲರಿಗಿಂತ ಭಿನ್ನವಾಗಿ ಖರೀದಿಸಬೇಕೆಂದಿದ್ದ ನಾನು ಕಷ್ಟಪಟ್ಟು ಒಂದು ರೂಪಾಯಿ ನಾಣ್ಯಗಳನ್ನು ಸಂಗ್ರಹಿಸಿ ಈ ಬೈಕ್​ನ್ನು ಖರೀದಿಸಿದೆ' ಎಂದು ಯುವಕ ಹೇಳಿದ್ದಾನೆ.

2 lakh dream bike
2 ಲಕ್ಷದ ಕನಸಿನ ಬೈಕ್
author img

By

Published : Dec 9, 2022, 1:09 PM IST

Updated : Dec 9, 2022, 3:42 PM IST

ಮಂಚೇರಿಯಲ್(ತೆಲಂಗಾಣ) : ಹುಡುಗರಿಗೆ ಬೈಕ್ ಅಂದರೆ ಕ್ರೇಜ್​ ಜಾಸ್ತಿ. ಬೈಕ್​ ಕೊಂಡುಕೊಳ್ಳುವುದು ಅವರ ಬಹುದೊಡ್ಡ ಕನಸಾಗಿರುತ್ತದೆ. ಇಂಥಹದ್ದೇ ಕನಸನ್ನು ತನ್ನ ಬಾಲ್ಯದಿಂದ ಕಟ್ಟಿಕೊಂಡ ಮಂಚೇರಿಯಲ್ ಸಿಟಿ ಯುವಕ ಅದನ್ನು ವಿಶೇಷ ರೀತಿಯಲ್ಲಿ ಪಡೆಯುವ ಮೂಲಕ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಹೌದು, ವೆಂಕಟೇಶ್ ಎಂಬಾತ ತನ್ನ ಡ್ರೀಮ್​ ಸ್ಪೋರ್ಟ್ಸ್ ಬೈಕ್​ನ್ನು ಖಾಲಿ ಒಂದು ರೂಪಾಯಿ ನಾಣ್ಯಗಳನ್ನು ಪಾವತಿಸಿ ಖರೀದಿಸಿದ್ದಾನೆ.

ಈತ ಆನ್‌ಲೈನ್ ಗೇಮಿಂಗ್ ಚಾನೆಲ್ ನಡೆಸುತ್ತಿದ್ದ. ಈ ಚಾನಲ್ ಮೂಲಕ ಗಳಿಸುತ್ತಿದ್ದ ಹಣವನ್ನು ಉಳಿತಾಯ ಮಾಡಿ ಬಾಲ್ಯದ ಕನಸಿನ ಬೈಕು ಖರೀದಿಸಲು ಸ್ಪೋರ್ಟ್ಸ್ ಬೈಕ್ ಶೋರೂಮ್‌ಗೆ ಹೋಗಿದ್ದಾನೆ. ನಂತರ ತನ್ನ ನೆಚ್ಚಿನ ಬಣ್ಣ KTM ಬೈಕ್​ ಅನ್ನು ಆಯ್ಕೆ ಮಾಡಿದಾಗ ಶೋರೂಂ ಮ್ಯಾನೇಜರ್ ಬೈಕಿನ ಬೆಲೆ 2.85 ಲಕ್ಷ ರೂ ಎಂದು ತಿಳಿಸಿದ್ದಾರೆ.

2 ಲಕ್ಷದ ಕನಸಿನ ಬೈಕ್​

ಆಗ ವೆಂಕಟೇಶ್ ಟ್ರಾಲಿ ಆಟೋವನ್ನು ಶೋರೂಮ್‌ಗೆ ತಂದು ಆ ವಾಹನದಿಂದ 112 ಪಾಲಿಥಿನ್ ಚೀಲಗಳನ್ನು ಹೊರತೆಗೆದು ಅದನ್ನು ಮ್ಯಾನೇಜರ್​ಗೆ ನೀಡಿದ್ದಾನೆ. ಚೀಲಗಳನ್ನು ತೆರೆದ ಮ್ಯಾನೇಜರ್​ಗೆ ಅದರಲ್ಲಿ ಒಂದು ರೂಪಾಯಿಯ ನಾಣ್ಯಗಳು ಇದ್ದುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ನಂತರ ಅವುಗಳನ್ನು ಎಣಿಸಲು ಶೋರೂಂ ಸಿಬ್ಬಂದಿ ಇಡೀ ದಿನ ತೆಗೆದುಕೊಂಡು ಕೊನೆಗೂ 2.85 ಲಕ್ಷ ರೂಪಾಯಿ ಎಣಿಸಿ ವೆಂಕಟೇಶ್​ಗೆ ಬೈಕ್​​ ನೀಡಿದ್ದಾರೆ.

'ನನಗೆ ಬಾಲ್ಯದಿಂದಲೂ ಕೆಟಿಎಂ ಬೈಕ್​ ಎಂದರೆ ಇಷ್ಟ. ನಾನು ದೊಡ್ಡವನಾದ ಮೇಲೆ ಅದನ್ನು ಖರೀದಿಸಬೇಕೆಂದು ಕನಸನ್ನು ಹೊಂದಿದ್ದೆ. ಅದಕ್ಕಾಗಿ ಹಣ ಸಂಪಾದಿಸಲು ಆನ್‌ಲೈನ್ ಗೇಮಿಂಗ್ ಚಾನೆಲ್ ನಡೆಸಿದೆ. ಜೊತೆಗೆ ಎಲ್ಲರಿಗಿಂತ ಭಿನ್ನವಾಗಿ ಖರೀದಿಸಬೇಕೆಂದಿದ್ದ ನಾನು ಕಷ್ಟಪಟ್ಟು ಒಂದು ರೂಪಾಯಿ ನಾಣ್ಯಗಳನ್ನು ಸಂಗ್ರಹಿಸಿ ಈ ಬೈಕ್​ನ್ನು ಖರೀದಿಸಿದೆ' ಎಂದು ಕನಸನ್ನು ನನಸಾಗಿಸಿಕೊಂಡ ತನ್ನ ಕಥೆಯನ್ನು ಈ ರೀತಿಯಾಗಿ ಆತ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ: ಸ್ವದೇಶಿ ಕಂಪ್ಯೂಟರ್ ಚಿಪ್ ತಯಾರಿಸಲಿದೆ ಟಾಟಾ ಗ್ರೂಪ್

Last Updated : Dec 9, 2022, 3:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.