ಜಮ್ಮು : ಜಮ್ಮು ಮತ್ತು ಕಾಶ್ಮೀರದ ಆರ್‌ಎಸ್ ಪುರ ಸೆಕ್ಟರ್ ಮತ್ತು ಅಂತರರಾಷ್ಟ್ರೀಯ ಗಡಿಯಿಂದ ಒಳನುಸುಳುವಿಕೆ ನಡೆಸಿದ್ದ ಪಾಕಿಸ್ತಾನದ ನುಸುಳುಕೋರರ ಪ್ರಯತ್ನವನ್ನು ಗಡಿ ಭದ್ರತಾ ಪಡೆ ವಿಫಲಗೊಳಿಸಿತು. ಗಡಿಯಲ್ಲಿ ಹಾಕಿದ್ದ ಬೇಲಿ ಮೂಲಕ ಬೆಳಗ್ಗೆ 2. 30ಕ್ಕೆ ಒಳನುಸುಳಲು ಪ್ರಯತ್ನ ನಡೆಸಿದ್ದು, ಇದನ್ನು ತಡೆಯಲಾಗಿದೆ.
ಆರ್ಎಸ್ಪುರ ಸೆಕ್ಟರ್ನಲ್ಲಿ ಆಕ್ರಮಣಕಾರಿಯಾಗಿ ಒಳನುಗ್ಗಲ್ಲು ಯತ್ನಿಸಿದ ನುಸುಳಕೋರರ ಮೇಲೆ ಬಿಎಸ್ಎಫ್ ಫೈರಿಂಗ್ ನಡೆಸಿದೆ. ಒಳ ನುಸುಳುಕೋರನಿಗೆ ಪ್ರವೇಶಿಸದಂತೆ ಎಚ್ಚರಿಸಿದರೂ ಆತ ಸೇನೆಯ ಮಾತಿಗೆ ಮನ್ನಣೆ ನೀಡದೇ ತನ್ನ ಪ್ರಯತ್ನ ನಡೆಸಿದ್ದಾನೆ. ಈ ವೇಳೆ, ಬೇರೆ ದಾರಿ ಕಾಣದೇ ಆತನ ಫೈರಿಂಗ್ ನಡೆಸಲಾಗಿದೆ. ದಾಳಿಯಲ್ಲಿ ನುಸುಳಕೋರ ಸಾವನ್ನಪ್ಪಿದ್ದಾನೆ ಎಂದು ಬಿಎಸ್ಎಫ್ ವಕ್ತಾರರು ಮಾಹಿತಿ ನೀಡಿದ್ದಾರೆ.
ಎರಡನೇ ಘಟನೆಯಲ್ಲಿ ಜಮ್ಮುನ ಅಂತಾರಾಷ್ಟ್ರೀಯ ಗಡಿ ಇಂದ್ರೇಶ್ವರ್ ನಗರದಲ್ಲಿ ಮತ್ತೊಬ್ಬ ಪಾಕಿಸ್ತಾನ ಒಳನುಸುಳುವಿಕೆ ಪ್ರಯತ್ನ ನಡೆಸಿದ್ದಾನೆ. ಗೇಟ್ ತೆಗೆದ ಬಳಿಕ ಭಾರತದ ಕಡೆಯಿಂದ ಅವರನ್ನು ಒಳಗೆ ಕರೆತರಲಾಯಿತು. ಇದುವರೆಗೆ ಆತನ ಬಳಿ ದೋಷಾರೋಪಣೆ ಪತ್ತೆಯಾಗಿಲ್ಲ. ಈ ಸಂಬಂಧ ಎರಡೂ ವಲಯಗಳ ಸಂಪೂರ್ಣ ಪ್ರದೇಶವನ್ನು ಕೂಲಂಕಷವಾಗಿ ಶೋಧಿಸಲಾಗುತ್ತಿದೆ.
ಇದನ್ನೂ ಓದಿ: ಅತಿವೇಗ ತಂದ ಆಪತ್ತು..ಕಾರು ಲಾರಿ ಮಧ್ಯೆ ಭೀಕರ ಡಿಕ್ಕಿಗೆ 6 ಮಂದಿ ಸ್ಥಳದಲ್ಲೇ ದುರ್ಮರಣ