ETV Bharat / bharat

ಗಡಿ ವಿವಾದ: ಶಾಂತಿ ಕಾಪಾಡುವಂತೆ ಮಿಜೋರಾಂಗೆ ಮನವಿ ಮಾಡಿದ ಅಸ್ಸೋಂ: 3 ದಿನ ಶೋಕಾಚರಣೆ - ಅಸ್ಸಾಂ ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ

ತನ್ನ ಜನರು ಮತ್ತು ಪೊಲೀಸರನ್ನು ಹಿಂಸಾಚಾರದಲ್ಲಿ ತೊಡಗಿಸಿಕೊಳ್ಳದಂತೆ, ಶಾಂತಿ ಪುನಃ ಸ್ಥಾಪಿಸಲು ಕೆಲಸ ಮಾಡುವಂತೆ ಕೋರಿ ಅಸ್ಸೋಂ ಸರ್ಕಾರ ಮಿಜೋರಾಂ ಸರ್ಕಾರಕ್ಕೆ ಮನವಿ ಮಾಡಿದೆ.

Border dispute
ಅಸ್ಸಾಂ
author img

By

Published : Jul 27, 2021, 10:31 AM IST

Updated : Jul 27, 2021, 2:03 PM IST

ಡಿಸ್ಪುರ್ (ಅಸ್ಸಾಂ): ಅಸ್ಸೋಂ ಮತ್ತು ಮಿಜೋರಾಂ ಗಡಿಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ತನ್ನ ಜನರು ಮತ್ತು ಪೊಲೀಸರನ್ನು ಹಿಂಸಾಚಾರದಲ್ಲಿ ತೊಡಗಿಸಿಕೊಳ್ಳದಂತೆ ಮತ್ತು ಶಾಂತಿ ಪುನಃ ಸ್ಥಾಪಿಸಲು ಕೆಲಸ ಮಾಡುವಂತೆ ಕೋರಿ ಅಸ್ಸೋಂ ಸರ್ಕಾರ ಮಿಜೋರಾಂ ಸರ್ಕಾರಕ್ಕೆ ಮನವಿ ಮಾಡಿದೆ.

ಘಟನೆ ವಿವರ: ಜುಲೈ 26 ರಂದು ಅಸ್ಸೋಂ 200ಕ್ಕೂ ಹೆಚ್ಚು ಪೊಲೀಸರು ಮಿಜೋರಾಂ ಗಡಿಗೆ ಆಗಮಿಸಿ ಆಟೋ ನಿಲ್ದಾಣದಲ್ಲಿದ್ದ ಪೊಲೀಸರನ್ನು ಒತ್ತಾಯ ಪೂರ್ವಕವಾಗಿ ಕಳುಹಿಸಿದ್ದಾರೆ. ಈ ಸಮಯದಲ್ಲಿ ಉಂಟಾದ ಘರ್ಷಣೆಯಲ್ಲಿ ಮಿಜೋರಾಂ ಪೊಲೀಸರು ಸಹ ಪ್ರತಿದಾಳಿ ಮಾಡಿದ್ದಾರೆ ಎಂದು ಮಿಜೋರಾಂ ಸರ್ಕಾರ ಹೇಳಿಕೆ ನೀಡಿತ್ತು. ಆದರೆ, ಅಸ್ಸೋಂ ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ ಹೇಳಿಕೆ ನೀಡಿದ್ದು, ಮಿಜೋರಾಂ ಪೊಲೀಸರು ನಮ್ಮ ಗಡಿ ಪೊಲೀಸ್ ಠಾಣೆಯನ್ನು ಆಕ್ರಮಿಸಿಕೊಂಡಿದ್ದರು.

ಅದನ್ನು ಮರಳಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದೇವೆ ಎಂದಿದ್ದಾರೆ. ಅಸ್ತಿತ್ವದಲ್ಲಿರುವ ಒಪ್ಪಂದಗಳನ್ನು ಉಲ್ಲಂಘಿಸಿ, ಮಿಜೋರಾಂ ಸರ್ಕಾರವು ಅಸ್ಸೋಂ ರೆಂಗ್ಟಿ ಬಸ್ತಿ ಕಡೆಗೆ ರಸ್ತೆ ನಿರ್ಮಿಸಲು ಪ್ರಾರಂಭಿಸಿದೆ. ಅಷ್ಟೇ ಅಲ್ಲದೆ, ಲೈಲಾಪುರ ಪ್ರದೇಶದ ಇನ್ನರ್ ಲೈನ್ ರಿಸರ್ವ್ ಫಾರೆಸ್ಟ್ ಅನ್ನು ನಾಶಪಡಿಸಿದೆ ಎಂದು ಅಸ್ಸೋಂ ಆರೋಪಿಸಿದೆ.

ರಾಜ್ಯಗಳಲ್ಲಿ ಹಿಂಸಾಚಾರ ಭುಗಿದೇಳುತ್ತಿದ್ದ ಸಂದರ್ಭದಲ್ಲಿಯೇ ಹಿಮಂತ ಬಿಸ್ವಾ ಶರ್ಮಾ ಮಿಜೋರಾಂ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕ್ರಮವಾಗಿ ಅಸ್ಸೋಂ ಮತ್ತು ಮಿಜೋರಾಂನ ಮುಖ್ಯಮಂತ್ರಿಗಳಾದ ಹಿಮಂತ ಬಿಸ್ವಾ ಶರ್ಮಾ ಮತ್ತು ಜೋರಮಾಥಂಗಾ ಅವರೊಂದಿಗೆ ಮಾತನಾಡಿ, ವಿವಾದಿತ ಗಡಿಯಲ್ಲಿ ಶಾಂತಿ ಕಾಪಾಡಿಕೊಳ್ಳಬೇಕು ಮತ್ತು ಸೌಹಾರ್ದಯುತ ಇತ್ಯರ್ಥವನ್ನು ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.

ಎರಡು ರಾಜ್ಯಗಳು ಸುಮಾರು 165 ಕಿ.ಮೀ ಗಡಿಯನ್ನು ಹಂಚಿಕೊಂಡಿವೆ. ಅಲ್ಲಿನ ನಿವಾಸಿಗಳು ಮತ್ತು ಅಧಿಕಾರಿಗಳ ನಡುವೆ ಹಿಂಸಾತ್ಮಕ ಮುಖಾಮುಖಿಗಳು ಆಗಾಗ್ಗೆ ಸಂಭವಿಸುತ್ತಿವೆ.

ಮೂರು ದಿನ ಶೋಕಾಚರಣೆ:

ಇಲ್ಲಿನ ಲೈಲಾಪುರದಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಮೃತಪಟ್ಟ ಐವರು ಅಸ್ಸೋಂ ಪೊಲೀಸರು ಮತ್ತು ನಾಗರಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ಮೂರು ದಿನಗಳ ಕಾಲ ರಾಜ್ಯದಲ್ಲಿ ಶೋಕಾಚರಣೆ ಮಾಡಲು ಅಸ್ಸೋಂ ಸರ್ಕಾರ ಇಂದು ಸೂಚಿಸಿದೆ. ಈ ಅವಧಿಯಲ್ಲಿ, ರಾಷ್ಟ್ರಧ್ವಜವನ್ನು ಅರ್ಧದಷ್ಟು ಹಾರಿಸಬೇಕು. ಸಾರ್ವಜನಿಕ ಮನರಂಜನೆ ಇರುವುದಿಲ್ಲ ಎಂದು ಸಾಮಾನ್ಯ ಆಡಳಿತ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

ಸಿಎಂ ಭೇಟಿ:

ಗಡಿ ಘರ್ಷಣೆಯಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ ಭೇಟಿ ನೀಡಿದ ಅವರ ಆರೋಗ್ಯ ವಿಚಾರಿಸಿದರು.

Last Updated : Jul 27, 2021, 2:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.