ಮುಂಬೈ: ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿದ ಆರೋಪದಲ್ಲಿ ಜೈಲು ಸೇರಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
3 ದಿನಗಳ ವಾದ, ಪ್ರತಿವಾದಗಳನ್ನು ಆಲಿಸಿದ ನಂತರ ಬಾಂಬೆ ಹೈಕೋರ್ಟ್ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೇಚಾ ಅವರಿಗೆ ಜಾಮೀನು ಮಂಜೂರು ಮಾಡಿದೆ.
ವಿವರವಾದ ಆದೇಶವನ್ನು ನಾಳೆ ನೀಡಲಾಗುವುದು. ನಾಳೆ ಅಥವಾ ಶನಿವಾರದ ವೇಳೆಗೆ ಅವರೆಲ್ಲರೂ ಜೈಲಿನಿಂದ ಹೊರಬರುತ್ತಾರೆ ಎಂದು ಆರ್ಯನ್ ಖಾನ್ ಪರವಾಗಿ ವಾದ ಮಂಡಿಸಿದ್ದ ಕೇಂದ್ರ ಸರ್ಕಾರದ ಮಾಜಿ ಎಜಿ ಮುಕುಲ್ ರೋಹಟಗಿ ತಿಳಿಸಿದ್ದಾರೆ.
ನ್ಯಾಯಾಲಯದಿಂದ ಆದೇಶ ಹೊರಬಂದ ನಂತರ ಮೂವರು ಜೈಲಿನಿಂದ ಬರುತ್ತಾರೆ. ನನಗೆ ಇದು ಸಾಮಾನ್ಯ ಪ್ರಕರಣವಾಗಿದೆ. ಕೆಲವನ್ನು ಗೆಲ್ಲುವುದು, ಕೆಲವು ಪ್ರಕರಣಗಳಲ್ಲಿ ಸೋಲುತ್ತೇವೆ. ಆರ್ಯನ್ ಖಾನ್‌ಗೆ ಜಾಮೀನು ಸಿಕ್ಕಿರುವುದು ನನಗೆ ಖುಷಿ ತಂದಿದೆ ಮುಕುಲ್ ರೋಹಟಗಿ ತಿಳಿಸಿದ್ದಾರೆ.
ಆರ್ಯನ್ ಮಾದಕ ದ್ರವ್ಯ ಸೇವನೆಯನ್ನು ತೋರಿಸಲು ಎನ್‌ಸಿಬಿ ಯಾವುದೇ ವೈದ್ಯಕೀಯ ಪರೀಕ್ಷೆ ನಡೆಸಲಿಲ್ಲ ಎಂದು ಮುಕುಲ್ ರೋಹಟಗಿ ಮೊನ್ನೆ ವಾದ ಮಂಡಿಸಿದ್ದರು. ಅಕ್ಟೋಬರ್ 2ರಂದು ಆರ್ಯನ್ ಖಾನ್‌ರನ್ನು ಎನ್‌ಸಿಬಿ ಬಂಧಿಸಿದ್ದು, ಅಕ್ಟೋಬರ್ 8 ರಿಂದ ಜೈಲಿನಲ್ಲೇ ಇದ್ದಾರೆ.