ETV Bharat / bharat

ನಟಿ ಕಂಗನಾ ಪ್ರಕರಣ: ಜ.25ರವರೆಗೆ ವಿಚಾರಣೆಗೆ ಕರೆಯದಂತೆ ಪೊಲೀಸರಿಗೆ ಹೈಕೋರ್ಟ್​ ತಾಕೀತು! - ನಟಿ ಕಂಗನಾ ರಣಾವತ್ ಪ್ರಕರಣ,

ನಟಿ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜ.25ರವರೆಗೆ ಕಂಗನಾ ರಣಾವತ್ ಅವ​ರನ್ನು ವಿಚಾರಣೆಗೆ ಕರೆಯದಂತೆ ಪೊಲೀಸರಿಗೆ ಹೈಕೋರ್ಟ್​ ಆದೇಶಿಸಿದೆ.

Bombay High Court extends protection to actor Kangana Ranaut, actor Kangana Ranaut, actor Kangana Ranaut case, actor Kangana Ranaut case news, ಜನವರಿ 25ರವರೆಗೆ ವಿಚಾರಣೆಗೆ ಕರೆಯದಂತೆ ಹೈಕೋರ್ಟ್​ ಸೂಚನೆ, ಜನವರಿ 25ರವರೆಗೆ ವಿಚಾರಣೆಗೆ ಕರೆಯದಂತೆ ಪೊಲೀಸರಿಗೆ ಹೈಕೋರ್ಟ್​ ತಾಕೀತು, ನಟಿ ಕಂಗನಾ ರಣಾವತ್, ನಟಿ ಕಂಗನಾ ರಣಾವತ್ ಪ್ರಕರಣ, ನಟಿ ಕಂಗನಾ ರಣಾವತ್ ಪ್ರಕರಣ ಸುದ್ದಿ,
ಹೈಕೋರ್ಟ್
author img

By

Published : Jan 11, 2021, 1:55 PM IST

ಮುಂಬೈ: ನಟಿ ಕಂಗನಾ ರಣಾವತ್ ವಿರುದ್ಧ ದಾಖಲಾಗಿರುವ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿ ಜನವರಿ 25ರವರೆಗೆ ಯಾವುದೇ ಕಠಿಣ ಕ್ರಮ ಕೈಗೊಳ್ಳದಂತೆ ಮುಂಬೈ ಹೈಕೋರ್ಟ್​ ಪೊಲೀಸರಿಗೆ ಸೂಚಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ಗಳನ್ನು ಹಾಕುವ ಮೂಲಕ ದ್ವೇಷ ಹಾಗೂ ಕೋಮು ಉದ್ವೇಗ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅಕ್ಟೋಬರ್​ನಲ್ಲಿ ದೂರು ದಾಖಲಾದ ಬಳಿಕ ಬಾಂದ್ರಾ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದರು. ಬಾಂದ್ರಾದ ಮ್ಯಾಜಿಸ್ಟ್ರೇಟ್​ ನ್ಯಾಯಾಲಯದ ಆದೇಶದ ಬಳಿಕ ಕಂಗನಾ ರಣಾವತ್​ ಮತ್ತು ಆಕೆಯ ಸೋಹದರಿ ವಿರುದ್ಧ ಪ್ರಥಮ ಎಫ್​ಐಆರ್ ದಾಖಲಾಗಿತ್ತು.

ಕಂಗನಾ ಹಾಗೂ ಆಕೆಯ ಸಹೋದರಿ ಎಫ್​ಐಆರ್​ ರದ್ದುಪಡಿಸುವಂತೆ ಕೋರಿ ಬಾಂಬೆ ಹೈಕೋರ್ಟ್​ನ ಮೊರೆ ಹೋಗಿದ್ದರು. ವಿಚಾರಣೆ ಸಮಯದಲ್ಲಿ ನ್ಯಾಯಧೀಶರಾದ ಎಸ್.ಎಸ್.ಶಿಂಧೆ ಹಾಗೂ ಎಂಎಸ್ ಕಾರ್ನಿಕ್ ಅವರಿದ್ದ ವಿಭಾಗೀಯ ಪೀಠವು ಈ ಪ್ರಕರಣದಲ್ಲಿ ದೇಶದ್ರೋಹದ ಆರೋಪ ಹೊರಿಸಿದ್ದಕ್ಕಾಗಿ ಪೊಲೀಸರನ್ನು ಪ್ರಶ್ನಿಸಿತು. ದೇಶದ್ರೋಹ ಪ್ರಕರಣವನ್ನು ತಪ್ಪಾಗಿ ಹೇರಲಾಗಿದೆ ಎಂದು ಅಭಿಪ್ರಾಯಪಟ್ಟಿತು. ನ್ಯಾಯಾಲಯವು ಜ.11ಕ್ಕೆ ಅರ್ಜಿ ವಿಚಾರಣೆಗೆ ಮುಂದೂಡಿತು.

ಇಂದು ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್​ ಜನವರಿ 25 ರವರೆಗೆ ಯಾವುದೇ ಕಠಿಣ ಕ್ರಮ ಕೈಗೊಳ್ಳದಂತೆ ಮುಂಬೈ ಪೊಲೀಸರಿಗೆ ಸೂಚಿಸಿತು. ಈ ಪ್ರಕರಣದಲ್ಲಿ ಕಂಗನಾ ಕುರಿತು ಹೆಚ್ಚಿನ ತನಿಖೆ ನಡೆಸಬೇಕಿದೆ ಎಂದು ಮುಂಬೈ ಪೊಲೀಸರು ಹೈಕೋರ್ಟ್‌ಗೆ ಮಾಹಿತಿ ನೀಡಿದರು. ಆದ್ರೆ ಮುಂದಿನ ವಿಚಾರಣೆಯವರೆಗೆ ವಿಚಾರಣೆಗೆ ಕರೆಯದಂತೆ ಹೈಕೋರ್ಟ್ ಆದೇಶಿಸಿ ಜ.25ಕ್ಕೆ ವಿಚಾರಣೆ ಮುಂದೂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.