ನವದೆಹಲಿ : ಸದಾ ಒಂದಿಲ್ಲೊಂದು ಕಾರಣವನ್ನಿಟ್ಟುಕೊಂಡು ಭಾರತದೊಂದಿಗೆ ಅರುಣಾಚಲ ಪ್ರದೇಶದ ಗಡಿಯಲ್ಲಿ ಕ್ಯಾತೆ ತೆಗೆಯುವ ಚೀನಾಗೆ ತಿರುಗೇಟು ನೀಡಲು ಭಾರತೀಯ ಸೇನೆ ಸಜ್ಜಾಗಿದೆ. ಅಲ್ಲಿನ ಗಡಿ ಪ್ರದೇಶದ ಉದ್ದಕ್ಕೂ ಇದೀಗ ಬೋಫೋರ್ಸ್ ಫಿರಂಗಿ ನಿಯೋಜಿಸಿದೆ.
ಅರುಣಾಚಲ ಪ್ರದೇಶ ಗಡಿಗೆ ಹೊಂದಿಕೊಂಡಿರುವ ಎಲ್ಎಸಿ(ಗಡಿ ರೇಖೆಯಲ್ಲಿ ಚೀನಾ ಯೋಧರ ಚಟುವಟಿಕೆ ಹೆಚ್ಚಾಗಿರುವ ಬೆನ್ನಲ್ಲೇ ಭಾರತ ಈ ನಿರ್ಧಾರ ಕೈಗೊಂಡಿದೆ. ಬೋಫೋರ್ಸ್ ಫಿರಂಗಿ ನಿಯೋಜನೆ ಮಾಡಿ ಹೆಚ್ಚಿನ ಕಣ್ಗಾವಲು ಇಟ್ಟಿದೆ.
-
Bofors guns deployed in a forward area along the Line of Actual Control (LAC) in Arunachal Pradesh pic.twitter.com/qqbFApYaAa
— ANI (@ANI) October 20, 2021 " class="align-text-top noRightClick twitterSection" data="
">Bofors guns deployed in a forward area along the Line of Actual Control (LAC) in Arunachal Pradesh pic.twitter.com/qqbFApYaAa
— ANI (@ANI) October 20, 2021Bofors guns deployed in a forward area along the Line of Actual Control (LAC) in Arunachal Pradesh pic.twitter.com/qqbFApYaAa
— ANI (@ANI) October 20, 2021
ಇದನ್ನೂ ಓದಿರಿ: ಘಾಘ್ರಾ ನದಿಯಲ್ಲಿ ಮುಳುಗಿದ ದೋಣಿ.. 15 ಮಂದಿ ದುರ್ಮರಣ?
ಕಳೆದ ಕೆಲ ದಿನಗಳ ಹಿಂದೆ ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವುದಕ್ಕೂ ಚೀನಾ ವಿರೋಧ ವ್ಯಕ್ತಪಡಿಸಿತ್ತು. ಇದಾದ ಬಳಿಕ ಗಡಿಯಲ್ಲಿ ಭಾರತ ಹೆಚ್ಚಿನ ಯೋಧರ ನಿಯೋಜನೆ ಮಾಡಿದೆ. ಜೊತೆಗೆ ಯಾವುದೇ ರೀತಿಯ ದುಷ್ಕೃತ್ಯ ಎದುರಿಸಲು ತಯಾರಾಗಿದೆ.
ಕಳೆದ ವರ್ಷ ಭಾರತೀಯ ಹಾಗೂ ಚೀನಾ ಯೋಧರ ನಡುವೆ ಗಾಲ್ವಾನ್ ವ್ಯಾಲಿಯಲ್ಲಿ ಘರ್ಷಣೆ ಉಂಟಾಗಿತ್ತು. ಇದಾದ ಬಳಿಕ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ಯಾವುದೇ ರೀತಿಯ ದಾಳಿ ಕೂಡ ಎದುರಿಸಲು ಭಾರತೀಯ ಸೇನೆ ಇದೀಗ ಸನ್ನದ್ಧಗೊಂಡಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಭಾರತೀಯ ಸೇನೆ ಗಡಿಯಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಯೋಧರ ಜಮಾವಣೆ ಸಹ ಮಾಡಿದೆ.