ETV Bharat / bharat

ಮೆಡಿಕಲ್​ ಕಾಲೇಜಿನಲ್ಲಿ ಎಡವಟ್ಟು : ಕೋವಿಡ್ ಮೃತವ್ಯಕ್ತಿಯ ದೇಹ ಕಣ್ಮರೆ

ಕೋವಿಡ್​ನಿಂದ ಮೃತಪಟ್ಟ ಇಬ್ಬರು ರೋಗಿಗಳ ಶವಗಳನ್ನು ವೈದ್ಯಕೀಯ ಕಾಲೇಜು ಶವಾಗಾರದಲ್ಲಿ ಇರಿಸಲಾಗಿತ್ತು. ಇಬ್ಬರ ಹೆಸರೂ ಪ್ರಸಾದ್ ಆಗಿದ್ದ ಕಾರಣ ಗೊಂದಲ ಉಂಟಾಗಿದೆ..

mortuary
mortuary
author img

By

Published : May 3, 2021, 4:53 PM IST

ಕೇರಳ : ತಿರುವನಂತಪುರಂ ಮೆಡಿಕಲ್​ ಕಾಲೇಜಿನ ಶವಾಗಾರದಿಂದ ಕೋವಿಡ್ ರೋಗಿಯ ಮೃತದೇಹ ಕಾಣೆಯಾಗಿದ್ದು, ಈ ಕುರಿತು ದೂರು ದಾಖಲಾಗಿದೆ.

ನಯತಿಂಕರ ಮೂಲದ ಪ್ರಸಾದ್ ಎಂಬ ವ್ಯಕ್ತಿಯ ಶವ ಕಾಣೆಯಾಗಿದೆ. ಪ್ರಸಾದ್ ಅವರ ಸಂಬಂಧಿಕರು ಕೂಡ ಪೊಲೀಸರಿಗೆ ದೂರು ನೀಡಿದ್ದಾರೆ. ಮೃತ ಪ್ರಸಾದ್ ದೇಹವನ್ನು ಸಂಬಂಧಿಕರಿಗೆ ತೋರಿಸಲು ಮುಂದಾದಾಗ ಅವರ ಶವ ಬದಲಾಗಿರುವುದು ಗಮನಕ್ಕೆ ಬಂದಿದೆ.

ಕೋವಿಡ್​ನಿಂದ ಮೃತಪಟ್ಟ ಇಬ್ಬರು ರೋಗಿಗಳ ಶವಗಳನ್ನು ವೈದ್ಯಕೀಯ ಕಾಲೇಜು ಶವಾಗಾರದಲ್ಲಿ ಇರಿಸಲಾಗಿತ್ತು. ಇಬ್ಬರ ಹೆಸರೂ ಪ್ರಸಾದ್ ಆಗಿದ್ದ ಕಾರಣ ಗೊಂದಲ ಉಂಟಾಗಿದೆ.

ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಶವವನ್ನು ವೆಲ್ಲಾಯಣಿ ಮೂಲದ ಇನ್ನೊಬ್ಬ ಪ್ರಸಾದ್ ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.

ಅವರು ಈಗಾಗಲೇ ಶವಸಂಸ್ಕಾರ ಮಾಡಿ ಮುಗಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ವೈದ್ಯಕೀಯ ಕಾಲೇಜು ಅಧೀಕ್ಷಕರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.