ನಂದಿಗ್ರಾಮ (ಪಶ್ಚಿಮ ಬಂಗಾಳ): ರಾಜ್ಯದಲ್ಲಿಂದು ಎರಡನೇ ಹಂತದ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಹಿಂಸಾಚಾರವೂ ಮುಂದುವರೆದಿದೆ. ಮತದಾನ ಆರಂಭಕ್ಕೂ ಮುನ್ನ ಟಿಎಂಸಿ ಕಾರ್ಯಕರ್ತನ ಕೊಲೆಯಾಗಿದ್ದರೆ, ಇದೀಗ ಬಿಜೆಪಿ ಕಾರ್ಯಕರ್ತನ ಶವವಾಗಿ ಪತ್ತೆಯಾಗಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಸ್ಪರ್ಧಿಸುತ್ತಿರುವ ನಂದಿಗ್ರಾಮ ಕ್ಷೇತ್ರದಲ್ಲಿ ಕೂಡ ಇಂದು 2ನೇ ಹಂತದ ವೋಟಿಂಗ್ ನಡೆಯುತ್ತಿದ್ದು, ನಂದಿಗ್ರಾಮದ ಪೂರ್ವ ಭೆಕುಟಿಯಾ ಪ್ರದೇಶದ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತನ ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿ: 2ನೇ ಹಂತದ ಮತದಾನಕ್ಕೂ ಮುನ್ನ ಟಿಎಂಸಿ ಕಾರ್ಯಕರ್ತನ ಹತ್ಯೆ: 7 ಮಂದಿ ಬಂಧನ
ಸ್ಥಳೀಯ ಟಿಎಂಸಿ ಕಾರ್ಯಕರ್ತರಿಂದ ಬೆದರಿಕೆ ಇತ್ತು ಎಂದು ಮೃತ ಬಿಜೆಪಿ ಕಾರ್ಯಕರ್ತನ ಕುಟುಂಬಸ್ಥರು ಆರೋಪಿಸಿದ್ದಾರೆ.
ಇನ್ನು ಮತ್ತೊಂದೆಡೆ ಟಿಎಂಸಿ ಕಾರ್ಯಕರ್ತನ ಹತ್ಯೆ ನಡೆಸಿದೆ. ಈ ಸಂಬಂಧ ಬಂಗಾಳ ಪೊಲೀಸರು 7 ಮಂದಿ ಬಂಧನ ಮಾಡಿದ್ದಾರೆ. ಚುನಾವಣೆಗೂ ಮುಂಚಿನಿಂದಲೂ ರಾಜಕೀಯ ಹತ್ಯೆಗಳು ವರದಿಯಾಗುತ್ತಲೇ ಇವೆ. ಬಿಜೆಪಿ- ಟಿಎಂಸಿ ನಡುವೆ ಈ ಬಾರಿಯ ಚುನಾವಣೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ.