ಆಂಧ್ರಪ್ರದೇಶ: ಆಂಧ್ರದಲ್ಲಿ ಕೊರೊನಾದಿಂದ ಮೃತಪಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಚಿಕ್ಕಪ್ಪನನ್ನು ಮಗ ಆಸ್ಪತ್ರೆಗೆ ಕರೆತರುತ್ತಿದ್ದಾಗ ಬೈಕ್ನಲ್ಲಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
63 ವರ್ಷದ ವೃದ್ಧ ರಾಮ್ ಬಾಬು ಜ್ವರ ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಕೊರೊನಾ ಟೆಸ್ಟ್ ಮಾಡಿಸಿದ್ದರೂ ವರದಿ ಬಂದಿರಲಿಲ್ಲ. ಈ ಮಧ್ಯೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ನರಸಿಂಹಲು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದ್ದಾರೆ.
ಬೈಕ್ನಲ್ಲಿ ಕೂರಿಸಿಕೊಂಡು ಹೊರಟಾಗ ದಾರಿಯಲ್ಲೇ ರಾಮ್ಬಾಬು ಮೃತಪಟ್ಟಿದ್ದಾರೆ. ಕೊರೊನಾ ಟೆಸ್ಟ್ ಮಾಡಿಸಿದ್ದರೂ ವರದಿ ಬಂದಿಲ್ಲ. ಇದೇ ಸಾವಿಗೆ ಕಾರಣ ಎಂದು ಮಗ ನರಸಿಂಹಲು ದೂರಿದ್ದಾರೆ.