ETV Bharat / bharat

ಮಹಾರಾಷ್ಟ್ರ, ಗುಜರಾತ್ ಕಡಲ ತೀರದಲ್ಲಿ ಎಂಟು ಮೃತದೇಹಗಳು ಪತ್ತೆ - ಕಡಲ ತೀರದಲ್ಲಿ ಎಂಟು ಮೃತದೇಹ ಪತ್ತೆ

ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಹಲವರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಇದೀಗ ಕೆಲವೊಂದು ಮೃತದೇಹಗಳು ಸಮುದ್ರದ ಕಡಲ ತೀರದಲ್ಲಿ ಪತ್ತೆಯಾಗಿವೆ.

Bodies found
Bodies found
author img

By

Published : May 23, 2021, 4:01 PM IST

ಮುಂಬೈ(ಮಹಾರಾಷ್ಟ್ರ): ರಾಯಗಢ ಜಿಲ್ಲೆಯ ಕರಾವಳಿಯ ಮೂರು ವಿವಿಧ ಸ್ಥಳ ಹಾಗೂ ಗುಜರಾತ್​ನ ಕಡಲ ತೀರದಲ್ಲಿ ಕೆಲ ಮೃತದೇಹಗಳು ಪತ್ತೆಯಾಗಿವೆ. ಒಟ್ಟು ಎಂಟು ಶವಗಳು ವಿವಿಧ ಸ್ಥಳದಲ್ಲಿ ಪತ್ತೆಯಾಗಿವೆ.

ಕಳೆದ ಕೆಲ ದಿನಗಳ ಹಿಂದೆ ತೌಕ್ತೆ ಚಂಡಮಾರುತದಿಂದಾಗಿ ಮುಂಬೈ ಅರಬ್ಬೀ ಸಮುದ್ರದಲ್ಲಿ P-305 ಬೋಟ್ ಕೊಚ್ಚಿಹೋಗಿದ್ದು, ಅದರಲ್ಲಿ ಸಾವನ್ನಪ್ಪಿರುವವರ ಮೃತದೇಹಗಳು ಇವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Bodies found
ಕಡತ ತೀರದಲ್ಲಿ ಮೃತದೇಹಗಳು ಪತ್ತೆ

ಇದನ್ನೂ ಓದಿ: ನಿರ್ಮಾಣ ಹಂತದ ಕಟ್ಟಡ ಕುಸಿತ: ಮೂವರು ಸಾವು, 12 ಮಂದಿಗೆ ಗಾಯ

ರಾಯಗಢ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಮಂಡ್ವಾದಲ್ಲಿ ಐದು, ಅಲಿಬಾಗ್​ನಲ್ಲಿ ಎರಡು ಹಾಗೂ ಇನ್ನೊಂದು ಮುರುದ್​​ನಲ್ಲಿ ಸಿಕ್ಕಿದೆ ಎಂದು ಮಾಹಿತಿ ನೀಡಿದ್ದಾರೆ. ಶವಗಳು ಸಿಕ್ಕಿರುವ ಬಗ್ಗೆ ಈಗಾಗಲೇ ಸ್ಥಳೀಯ ಆಡಳಿತ ಹಾಗೂ ರಾಜ್ಯ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ತೌಕ್ತೆ ಚಂಡಮಾರುತದಿಂದಾಗಿ ಬಾರ್ಜ್ ಪಿ -305 ಹಡಗು ಮುಳುಗಿದ್ದು, ಅದರಲ್ಲಿನ 261 ಸಿಬ್ಬಂದಿ ಪೈಕಿ ಈಗಾಗಲೇ 186 ಜನರ ರಕ್ಷಣೆ ಮಾಡಲಾಗಿದೆ. ಅನೇಕ ಸಿಬ್ಬಂದಿ ನಾಪತ್ತೆಯಾಗಿದ್ದು, ಕೆಲವೊಂದು ಮೃತದೇಹಗಳು ಬೇರೆಡೆ ತೇಲಿಹೋಗಿವೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಇಲ್ಲಿಯವರೆಗೆ 66 ಮೃತದೇಹಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ.

ಗುಜರಾತ್​ನ ವಲ್ಸಾದ್ ಜಿಲ್ಲೆಯ ಅರೇಬಿಯನ್​ ಸಮುದ್ರದ ತೀರದಲ್ಲಿ ನಾಲ್ಕು ಶವ ಪತ್ತೆಯಾಗಿದ್ದು, ಮೃತದೇಹಗಳ ಮೇಲೆ ಸಮವಸ್ತ್ರ ಮತ್ತು ಲೈಫ್​ ಜಾಕೆಟ್​ ನೋಡಿದಾಗ ಅವರೆಲ್ಲರೂ ಮುಂಬೈ ಕರಾವಳಿಯಲ್ಲಿ ಮುಳುಗಿದ ಹಡಗಿನ ಸದಸ್ಯರು ಆಗಿರಬಹುದು ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜ್​ದೀಪ್​ ಸಿಂಗ್​​​ ತಿಳಿಸಿದ್ದಾರೆ.

ದಕ್ಷಿಣ ಗುಜರಾತ್​ನ ಡುಂಗ್ರಿ ಗ್ರಾಮದ ಕಡಲ ತೀರದಲ್ಲೂ ಮೂರು ಶವಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದು, ಇದಕ್ಕೆ ಸಂಬಂಧಿಸಿದಂತೆ ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.