ETV Bharat / bharat

ಉತ್ತರಾಖಂಡ ಹಿಮಪಾತ.. ನಾಲ್ವರು ಭಾರತೀಯ ನೌಕಾಪಡೆಯ ಅಧಿಕಾರಿಗಳ ಮೃತದೇಹ ಪತ್ತೆ..

ಭಾರತೀಯ ನೌಕಾಪಡೆಯ ಟ್ವೀಟ್​ ಪ್ರಕಾರ, ಮೃತ ಅಧಿಕಾರಿಗಳನ್ನು ಲೆಫ್ಟಿನೆಂಟ್ ಕಮಾಂಡರ್ ರಜನಿಕಾಂತ್ ಯಾದವ್, ಲೆಫ್ಟಿನೆಂಟ್ ಕಮಾಂಡರ್ ಯೋಗೇಶ್ ತಿವಾರಿ, ಲೆಫ್ಟಿನೆಂಟ್ ಕಮಾಂಡರ್ ಅನಂತ್ ಕುಕ್ರೆಟಿ ಮತ್ತು ಹರಿಯೋಮ್ MCPO II ಎಂದು ಗುರುತಿಸಲಾಗಿದೆ..

ಉತ್ತರಾಖಂಡ ಹಿಮಪಾತ
ಉತ್ತರಾಖಂಡ ಹಿಮಪಾತ
author img

By

Published : Oct 3, 2021, 5:01 PM IST

ಚಮೋಲಿ(ಉತ್ತರಾಖಂಡ) : ಉತ್ತರಾಖಂಡದ ಪಶ್ಚಿಮ ಕುಮಾನ್​ ಪ್ರದೇಶದ ತ್ರಿಶೂಲ್​ ಪರ್ವತದಲ್ಲಿ ಸಂಭವಿಸಿರುವ ದಿಢೀರ್ ಹಿಮಪಾತದಿಂದಾಗಿ ನೌಕಾಪಡೆಯ ಐವರು ಪರ್ವತಾರೋಹಿಗಳು ನಾಪತ್ತೆಯಾಗಿದ್ದರು. ಅದರಲ್ಲಿ ನಾಲ್ವರ ಮೃತದೇಹ ಪತ್ತೆಯಾಗಿವೆ.

ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯ ತ್ರಿಶೂಲ್ ಶಿಖರದಲ್ಲಿ ಉಂಟಾದ ಹಿಮಪಾತದಲ್ಲಿ ಭಾರತೀಯ ನೌಕಾಪಡೆಯ ಹತ್ತು ಪರ್ವತಾರೋಹಿಗಳ ತಂಡದಲ್ಲಿ ಐವರ ರಕ್ಷಣೆ ಮಾಡಲಾಗಿತ್ತು. ಐವರು ನಾಪತ್ತೆಯಾಗಿದ್ದರೂ ಅದರಲ್ಲಿ ನಾಲ್ವರು ಭಾರತೀಯ ನೌಕಾಪಡೆಯ ಅಧಿಕಾರಿಗಳ ಮೃತ ದೇಹಗಳನ್ನು ಶನಿವಾರ ಪತ್ತೆ ಮಾಡಲಾಗಿದೆ.

ಭಾರತೀಯ ನೌಕಾಪಡೆಯ ಟ್ವೀಟ್​ ಪ್ರಕಾರ, ಮೃತ ಅಧಿಕಾರಿಗಳನ್ನು ಲೆಫ್ಟಿನೆಂಟ್ ಕಮಾಂಡರ್ ರಜನಿಕಾಂತ್ ಯಾದವ್, ಲೆಫ್ಟಿನೆಂಟ್ ಕಮಾಂಡರ್ ಯೋಗೇಶ್ ತಿವಾರಿ, ಲೆಫ್ಟಿನೆಂಟ್ ಕಮಾಂಡರ್ ಅನಂತ್ ಕುಕ್ರೆಟಿ ಮತ್ತು ಹರಿಯೋಮ್ MCPO II ಎಂದು ಗುರುತಿಸಲಾಗಿದೆ.

ಈ ಬಗ್ಗೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಟ್ವಿಟರ್​ನಲ್ಲಿ ಬೇಸರ ವ್ಯಕ್ತಪಡಿಸಿದ್ದು, "ಮೌಂಟ್ ತ್ರಿಶೂಲ್‌ಗೆ ಭಾರತೀಯ ನೌಕಾಪಡೆಯ ಪರ್ವತಾರೋಹಣ ಯಾತ್ರೆಯ ಭಾಗವಾಗಿದ್ದ ನಾಲ್ಕು ನೌಕಾಪಡೆಯ ಸಿಬ್ಬಂದಿಯ ದುರಂತ ಸಾವಿನಿಂದ ತೀವ್ರವಾಗಿ ನೊಂದಿದ್ದೇನೆ. ರಾಷ್ಟ್ರವು ಅಮೂಲ್ಯವಾದ ಯುವ ಜೀವಗಳನ್ನು ಮಾತ್ರವಲ್ಲದೆ ಧೈರ್ಯಶಾಲಿ ಸೈನಿಕರನ್ನೂ ಕಳೆದುಕೊಂಡಿದೆ." ಎಂದಿದ್ದಾರೆ.

ಓದಿ: ಹಿಮಪಾತ : ಭಾರತೀಯ ನೌಕಾಪಡೆಯ ಐವರು ಪರ್ವತಾರೋಹಿಗಳು ನಾಪತ್ತೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.