ETV Bharat / bharat

ಹಣಕಾಸಿನ ತೊಂದರೆ.. ಹೆಂಡ್ತಿ, ಇಬ್ಬರು ಮಕ್ಕಳ ಕೊಲೆಗೈದು, ನೇಣಿಗೆ ಶರಣಾದ ಗಂಡ.. - ನೇಣಿಗೆ ಶರಣಾದ ಕುಟುಂಬದ ನಾಲ್ವರು

ಗುರುವಾರ ರಾತ್ರಿ ಆಹಾರ ಪದಾರ್ಥದಲ್ಲಿ ನಿದ್ರೆ ಮಾತ್ರೆ ಬೆರೆಸಿರುವ ದೀನ್​ದಯಾಳ್​ ಪತ್ನಿ ಸೇರಿ ಇಬ್ಬರು ಮಕ್ಕಳಿಗೆ ನೀಡಿದ್ದಾನೆ. ಅದರ ಸೇವನೆ ಮಾಡಿರುವ ಹೆಣ್ಣು ಮಕ್ಕಳು ಮೂರ್ಛೆ ಹೋಗುತ್ತಿದ್ದಂತೆ ಅವರ ಕತ್ತು ಹಿಸುಕಿ ಕೊಲೆ ಮಾಡಿದ್ದು, ತದ ನಂತರ ರೂಂನಲ್ಲಿ ನೇಣು ಬಿಗಿದಿದ್ದಾನೆ..

Bodies of 4 family members found at flat

author img

By

Published : Oct 2, 2021, 7:49 PM IST

Updated : Oct 3, 2021, 10:29 AM IST

ಜೋಧಪುರ್​​​(ರಾಜಸ್ಥಾನ): ಇಲ್ಲಿನ ಸರ್ಕ್ಯೂಟ್​ ಹೌಸ್​​ ರಸ್ತೆಯಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಹಣಕಾಸಿನ ತೊಂದರೆಯಿಂದಾಗಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರಲ್ಲಿ ಇಬ್ಬರು ಹೆಣ್ಣು ಮಕ್ಕಳು ಸೇರಿಕೊಂಡಿವೆ.

ಶುಕ್ರವಾರ ಈ ಘಟನೆ ನಡೆದಿದೆ. ನಾಲ್ವರ ಮೃತದೇಹಗಳನ್ನ ಮರಣೋತ್ತರ ಪರೀಕ್ಷೆ ನಂತರ ಸಂಬಂಧಿಕರಿಗೆ ಹಸ್ತಾಂತರ ಮಾಡಲಾಗಿದೆ. ಮೃತರನ್ನ ದೀನದಯಾಳ್​, ಪತ್ನಿ ಸರೋಜ್​ ಹಾಗೂ ಪುತ್ರಿಯರಾದ ತನ್ವಿ, ಹೀರಾಲ್​ ಎಂದು ಗುರುತಿಸಲಾಗಿದೆ. ಬಟ್ಟೆ ವ್ಯಾಪಾರ ನಡೆಸುತ್ತಿದ್ದ ದೀನದಯಾಳ್​ ಹಣಕಾಸಿನ ತೊಂದರೆಗೊಳಗಾಗಿದ್ದರು ಎನ್ನಲಾಗಿದೆ. ಜೊತೆಗೆ 25 ಲಕ್ಷ ರೂ. ಸಾಲ ಮಾಡಿಕೊಂಡಿದ್ದರಂತೆ.

Bodies of 4 family members found at flat
ಮೃತ ಹೆಣ್ಣು ಮಕ್ಕಳು ತನ್ವಿ, ಹೀರಾಲ್​

ಕೋವಿಡ್​ನಿಂದಾಗಿ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದ ಕುಟುಂಬ ನಾಲ್ಕು ದಿನಗಳ ಹಿಂದೆ ಕಿರಿಯ ಮಗಳ ಹುಟ್ಟುಹಬ್ಬ ಸಹ ಆಚರಣೆ ಮಾಡಲು ಆಗಿರಲಿಲ್ವಂತೆ. ಮೇಲಿಂದ ಮೇಲೆ ಪತ್ನಿ ಅನಾರೋಗ್ಯಕ್ಕೀಡಾಗುತ್ತಿದ್ದ ಕಾರಣ ಮತ್ತಷ್ಟು ಸಮಸ್ಯೆಗೊಳಗಾಗಿದ್ದರು ಎನ್ನಲಾಗಿದೆ.

ಇದನ್ನೂ ಓದಿರಿ: ಅಧಿಕಾರವನ್ನ ಅಭಿವೃದ್ಧಿಗೆ ಹೇಗೆ ಬಳಸಿಕೊಳ್ಳಬೇಕೆಂಬುದನ್ನ ಗಡ್ಕರಿ ತೋರಿಸಿದ್ದಾರೆ.. ಶರದ್​ ಪವಾರ್​ ಗುಣಗಾನ

ಗುರುವಾರ ರಾತ್ರಿ ಆಹಾರ ಪದಾರ್ಥದಲ್ಲಿ ನಿದ್ರೆ ಮಾತ್ರೆ ಬೆರೆಸಿರುವ ದೀನ್​ದಯಾಳ್​ ಪತ್ನಿ ಸೇರಿ ಇಬ್ಬರು ಮಕ್ಕಳಿಗೆ ನೀಡಿದ್ದಾನೆ. ಅದರ ಸೇವನೆ ಮಾಡಿರುವ ಹೆಣ್ಣು ಮಕ್ಕಳು ಮೂರ್ಛೆ ಹೋಗುತ್ತಿದ್ದಂತೆ ಅವರ ಕತ್ತು ಹಿಸುಕಿ ಕೊಲೆ ಮಾಡಿದ್ದು, ತದ ನಂತರ ರೂಂನಲ್ಲಿ ನೇಣು ಬಿಗಿದಿದ್ದಾನೆ.

ಇದರ ಬೆನ್ನಲ್ಲೇ ಪತ್ನಿ ಸರೋಜ್​ ಕತ್ತು ಹಿಸುಕಲು ಮುಂದಾದಾಗ ಪ್ರಜ್ಞೆ ಬಂದಿರುವ ಕಾರಣ ವಿರೋಧ ವ್ಯಕ್ತಪಡಿಸಿದ್ದಾಳೆ. ಆದರೆ, ಕತ್ತು ಹಿಸುಕಿ ಕೊಲೆ ಮಾಡುವಲ್ಲಿ ಯಶಸ್ವಿಯಾಗಿರುವ ಗಂಡ, ಆಕೆಯ ಮೃತದೇಹವನ್ನ ರೂಂನಲ್ಲಿ ನೇಣು ಹಾಕಿದ್ದಾನೆ.

ಕೊನೆಯದಾಗಿ ನೇಣು ಬಿಗಿದುಕೊಂಡಿರುವ ದೀನ್​ದಯಾಳ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ವೇಳೆ ಡೆತ್​ನೋಟ್​ ಬರೆದಿಟ್ಟಿರುವುದಾಗಿ ತಿಳಿದು ಬಂದಿದೆ. ಅದರಲ್ಲಿ ಸ್ವ-ಇಚ್ಛೆಯಿಂದ ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ತಿಳಿಸಿದ್ದಾನೆಂದು ಪೊಲೀಸರು ಹೇಳಿದ್ದಾರೆ.

Last Updated : Oct 3, 2021, 10:29 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.