ಪಾಟ್ನಾ(ಬಿಹಾರ): 55 ಜನರನ್ನು ಹೊತ್ತು ಸಾಗುತ್ತಿದ್ದ ದೋಣಿಯೊಂದು ಬಿಹಾರದಲ್ಲಿ ಹರಿಯುವ ಗಂಗಾ ನದಿಯಲ್ಲಿ ಮಗುಚಿದ್ದು, 10 ಜನರು ನಾಪತ್ತೆಯಾಗಿದ್ದಾರೆ. ದಾನಾಪುರ ಶಹಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೌದ್ಪುರ ಪ್ರದೇಶದಲ್ಲಿ ಜಾನುವಾರುಗಳಿಗೆ ಮೇವು ತರಲೆಂದು ಜನರು ತೆರಳಿದ್ದರು. ಆದರೆ, ವಾಪಸ್ ಬರುವಾಗ ದುರ್ಘಟನೆ ನಡೆದಿದೆ.
ಕೆಲವರು ಈಜಿ ದಡ ಸೇರಿದ್ದಾರೆ. ದುರ್ಘಟನೆಯಲ್ಲಿ ಸಿಲುಕಿದ ಜನರು ದೌದ್ಪುರ ನಿವಾಸಿಗಳೆಂದು ತಿಳಿದು ಬಂದಿದೆ. ಚಿಕ್ಕ ದೋಣಿಯಲ್ಲಿ ಹೆಚ್ಚು ಮಂದಿ ತೆರಳಿದ್ದೇ ಅವಘಡಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
-
Bihar | A boat carrying 55 people sank in the Ganga river near the Shahpur PS area in Danapur
— ANI (@ANI) September 5, 2022 " class="align-text-top noRightClick twitterSection" data="
Around 50-54 persons were on the boat. 10 people were reported missing and a search operation was launched to find the missing persons: SDM Danapur (04.09) pic.twitter.com/Q9sbiCup9l
">Bihar | A boat carrying 55 people sank in the Ganga river near the Shahpur PS area in Danapur
— ANI (@ANI) September 5, 2022
Around 50-54 persons were on the boat. 10 people were reported missing and a search operation was launched to find the missing persons: SDM Danapur (04.09) pic.twitter.com/Q9sbiCup9lBihar | A boat carrying 55 people sank in the Ganga river near the Shahpur PS area in Danapur
— ANI (@ANI) September 5, 2022
Around 50-54 persons were on the boat. 10 people were reported missing and a search operation was launched to find the missing persons: SDM Danapur (04.09) pic.twitter.com/Q9sbiCup9l
ಇದನ್ನೂ ಓದಿ: ಯಮುನಾ ನದಿಯಲ್ಲಿ ಮುಳುಗಿದ ದೋಣಿ.. 11 ಮೃತದೇಹ ಪತ್ತೆ, ಮುಂದುವರೆದ ರಕ್ಷಣಾ ಕಾರ್ಯಾಚರಣೆ
ಕುಂಕುಮ್, ಪ್ರೀತಿ, ಆರತಿ, ಛತ್ತು ರೈ ಅವರ ಪುತ್ರಿ ವಾಸುದೇವ್ ರೈ ಹಾಗೂ ಪೂಜಾ ಸೇರಿದಂತೆ ಅನೇಕರು ನಾಪತ್ತೆಯಾಗಿದ್ದಾರೆ. ಇವರೆಲ್ಲರೂ ಗಂಗಾಹರಾಕ್ಕೆ ತೆರಳಿದ್ದು ಅಲ್ಲಿಂದ ಹುಲ್ಲು, ತರಕಾರಿ ತೆಗೆದುಕೊಂಡು ಹಿಂತಿರುಗುತ್ತಿದ್ದರು. ಈ ಸಂದರ್ಭದಲ್ಲಿ ನದಿ ಮಧ್ಯೆ ಇದ್ದಕ್ಕಿದ್ದಂತೆ ದೋಣಿ ಮಗುಚಿದೆ. ದೋಣಿಗಳ ಸಹಾಯದಿಂದ ರಾತ್ರಿಯಿಡೀ ರಕ್ಷಣಾ ಸಿಬ್ಬಂದಿ ಶೋಧ ನಡೆಸಿದ್ದು, ಜನರ ಸುಳಿವು ಸಿಕ್ಕಿಲ್ಲ. ಹೀಗಾಗಿ, ಕೆಲವರು ಸಾವನ್ನಪ್ಪಿರುವ ಶಂಕೆಯಿದೆ.