ETV Bharat / bharat

30 ಮಕ್ಕಳನ್ನು ಹೊತ್ತು ಸಾಗುತ್ತಿದ್ದ ದೋಣಿ ಮುಳುಗಡೆ : 20 ಮಕ್ಕಳ ರಕ್ಷಣೆ.. ಶೋಧ ಕಾರ್ಯ ಮುಂದುವರಿಕೆ - 20 rescued

30 ಮಕ್ಕಳನ್ನು ಹೊತ್ತು ಸಾಗುತ್ತಿದ್ದ ದೋಣಿ ಮುಳಗಡೆಯಾಗಿರುವ ಘಟನೆ ಬಿಹಾರದ ಬಾಗಮತಿ ನದಿಯಲ್ಲಿ ನಡೆದಿದೆ. 20 ಮಕ್ಕಳನ್ನು ಈಗಾಗಲೇ ರಕ್ಷಿಸಲಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

Etv Bharat
Etv Bharat
author img

By ETV Bharat Karnataka Team

Published : Sep 14, 2023, 3:07 PM IST

Updated : Sep 14, 2023, 4:42 PM IST

30 ಮಕ್ಕಳನ್ನು ಹೊತ್ತು ಸಾಗುತ್ತಿದ್ದ ದೋಣಿ ಮುಳುಗಡೆ

ಪಾಟ್ನಾ(ಬಿಹಾರ) : ಮಕ್ಕಳು ಪ್ರಯಾಣಿಸುತ್ತಿದ್ದ ದೋಣಿ ಮುಳುಗಡೆಯಾಗಿರುವ ಘಟನೆ ಬಿಹಾರದ ಮುಜಾಫರ್​ ಜಿಲ್ಲೆಯ ಬಾಗಮತಿ ನದಿಯಲ್ಲಿ ಇಂದು ನಡೆದಿದೆ. ಸುಮಾರು 30 ಮಕ್ಕಳು ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. ಇದುವರೆಗೂ 20 ಮಕ್ಕಳನ್ನು ರಕ್ಷಣೆ ಮಾಡಲಾಗಿದ್ದು, ಉಳಿದ ಮಕ್ಕಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಮಕ್ಕಳನ್ನು ಸಾಗಿಸುತ್ತಿದ್ದ ದೋಣಿ ಮುಳುಗಡೆ : ಇಲ್ಲಿನ ಮುಜಾಫರ್​ನಗರದ ಬೆನೀವಾದ್​ ವ್ಯಾಪ್ತಿಯ ಮಧುರಪಟ್ಟಿ ಘಾಟ್​ನಲ್ಲಿ ದೋಣಿ ಮುಳುಗಡೆಯಾಗಿದೆ. ಈ ದೋಣಿಯಲ್ಲಿ ಶಾಲಾ ಮಕ್ಕಳು ಮಾತ್ರ ಇದ್ದರು. ದೋಣಿ ಅಪಘಾತದ ಸುದ್ದಿ ತಿಳಿದು ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ದೋಣಿಯಲ್ಲಿದ್ದ ಕೆಲ ಮಕ್ಕಳು ಈಜಿ ದಡವನ್ನು ಸೇರಿದ್ದಾರೆ. ಆದರೆ 10 ಮಕ್ಕಳು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಸ್ಥಳದಲ್ಲಿ ಬೆನೀವಾದ್​ ಪೊಲೀಸರು, ಎಸ್​ಡಿಆರ್​ಎಫ್​ ಮತ್ತು ಎನ್​ಡಿಆರ್​ಎಫ್​​ ತಂಡಗಳು ಆಗಮಿಸಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಅಲ್ಲದೆ ಸ್ಥಳಕ್ಕೆ ಮುಳುಗುತಜ್ಞರು ಆಗಮಿಸಿದ್ದಾರೆ.

ತನಿಖೆಗೆ ಆದೇಶಿಸಿದ ಸಿಎಂ ನಿತೀಶ್​ ಕುಮಾರ್​ : ಪ್ರಕರಣದ ಬಗ್ಗೆ ತನಿಖೆ ನಡೆಸಲು ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಜಿಲ್ಲಾ ಮ್ಯಾಜಿಸ್ಟ್ರೇಟ್​ಗೆ ಸೂಚಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಿತೀಶ್ ಕುಮಾರ್​, ಮುಜಾಫರ್​ ದೋಣಿ ಅಪಘಾತ ಸಂಬಂಧ ತನಿಖೆ ನಡೆಸಲು ಜಿಲ್ಲಾ ಮ್ಯಾಜಿಸ್ಟ್ರೇಟ್​ಗೆ ಆದೇಶ ನೀಡಿದ್ದೇನೆ. ಅವರು ಈ ಸಂಬಂಧ ಪರಿಶೀಲನೆ ನಡೆಸುತ್ತಾರೆ. ಸಂತ್ರಸ್ತ ಕುಟುಂಬಕ್ಕೆ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ.

ದೋಣಿಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರ ಪ್ರಯಾಣ ? : ದೋಣಿಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ತುಂಬಿದ್ದೇ ಅಪಘಾತಕ್ಕೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ. ಇಲ್ಲಿ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ದೋಣಿಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ತುಂಬಿಕೊಂಡು ಪ್ರಯಾಣ ಮಾಡಿಲಾಗುತ್ತದೆ. ಇದರಿಂದಲೂ ದೋಣಿ ಅಪಘಾತಕ್ಕೀಡಾಗಿರಬಹುದು ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಅಪಘಾತ ಸಂಭವಿಸಿದ್ದು, ಹೇಗೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ತುಂಬಿ ಹರಿಯುತ್ತಿರುವ ಬಾಗಮತಿ : ಕಳೆದ ಕೆಲವು ದಿನಗಳಿಂದ ಬಿಹಾರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ನದಿಗಳು ಉಕ್ಕಿ ಹರಿಯುತ್ತಿದೆ. ಇದರ ಜೊತೆಗೆ ಬಾಗಮತಿ ನದಿಯಲ್ಲೂ ನೀರು ಉಕ್ಕಿ ಹರಿಯುತ್ತಿದೆ. ಇದರಿಂದಾಗಿಯೂ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಮಕ್ಕಳ ಪೋಷಕರು ಆರೋಪಿಸಿದ್ದಾರೆ.

ನೇಪಾಳದಿಂದ ಬಿಡುಗಡೆಯಾದ ನೀರಿನಿಂದ ಬಾಗಮತಿ ನದಿ ನೀರಿನ ಮಟ್ಟ ಹೆಚ್ಚಾಗಿದೆ. ಅಲ್ಲದೇ ಅಪಾಯದ ಮಟ್ಟವನ್ನೂ ಮೀರಿ ಹರಿಯುತ್ತಿದೆ. ಇದರ ನಡುವೆಯೇ ಶಾಲಾ ಮಕ್ಕಳನ್ನು ನದಿಯಲ್ಲಿ ಕರೆದುಕೊಂಡು ಹೋಗಲಾಗಿದೆ. ಬಿಹಾರದ ಕೆಲವು ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಪ್ರಾಣವನ್ನು ಪಣಕ್ಕಿಟ್ಟು ಶಾಲೆಗೆ ತೆರಳುವ ಪರಿಸ್ಥಿತಿ ಇದೆ.

ಇದನ್ನೂ ಓದಿ : ಜಾನುವಾರು ಮೇಯಿಸುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗುಂಡಿನ ಚಕಮಕಿ: 5 ಸಾವು, 8 ಮಂದಿ ಗಾಯ

Last Updated : Sep 14, 2023, 4:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.