ETV Bharat / bharat

ನಿರ್ಬಂಧಿಸಲಾದ ಆ್ಯಪ್​ಗಳ ರೀತಿಯಲ್ಲೇ ಕಾರ್ಯನಿರ್ವಹಿಸುವ ಅಪ್ಲಿಕೇಶನ್‌ಗಳು ಮತ್ತೆ ಕಾಣಿಸಿಕೊಳ್ಳುತ್ತಿವೆ: ರಾಜೀವ್ ಚಂದ್ರಶೇಖರ್

author img

By

Published : Jul 22, 2022, 10:29 PM IST

ನಿರ್ಬಂಧಿಸಲಾದ ಅಪ್ಲಿಕೇಶನ್‌ಗಳ ರೀತಿಯಲ್ಲೇ ಕಾರ್ಯ ನಿರ್ವಹಿಸುವ ಬೇರೆ ಹೆಸರಿನ ಆ್ಯಪ್​ಗಳು ಕಾರ್ಯನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ರಾಜ್ಯಸಭೆಯಲ್ಲಿ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.

Rajeev Chandrasekhar
ರಾಜೀವ್ ಚಂದ್ರಶೇಖರ್

ನವದೆಹಲಿ: ದೇಶದಲ್ಲಿ ನಿಷೇಧಕ್ಕೊಳಗಾಗಿರುವ ಆ್ಯಪ್‌ಗಳ ರೀತಿಯಲ್ಲೇ ಇರುವ ಅದೇ ಹೆಸರು ಮತ್ತು ಅದೇ ರೀತಿ ಕಾರ್ಯನಿರ್ವಹಿಸುವ ತಂತ್ರಾಂಶಗಳು ಕಾಣಿಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿ) ವರದಿ ಸ್ವೀಕರಿಸಿದೆ ಎಂದು ಸಚಿವ ರಾಜೀವ್ ಚಂದ್ರಶೇಖರ್ ರಾಜ್ಯಸಭೆಯಲ್ಲಿ ಇಂದು ತಿಳಿಸಿದರು.

ಲಿಖಿತ ಉತ್ತರದಲ್ಲಿ ಕೇಂದ್ರ ಸಚಿವರು ಈ ವರದಿಗಳನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ರವಾನಿಸಲಾಗಿದೆ ಎಂದಿದ್ದಾರೆ. 'ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿ)ಸ್ವೀಕರಿಸಿದ ವಿವಿಧ ವರದಿಗಳ ಪ್ರಕಾರ ನಿರ್ಬಂಧಿಸಲಾದ ಅಪ್ಲಿಕೇಶನ್‌ಗಳು ಸ್ವಲ್ಪ ಹೆಸರನ್ನು ಬದಲಾಯಿಸಿಕೊಂಡು ಅದೇ ರೀತಿ ಕಾರ್ಯ ನಿರ್ವಹಿಸುವ ಅಥವಾ ಹೊಸ ರೂಪದಲ್ಲಿ ಕಾಣಿಸಿಕೊಳ್ಳುತ್ತಿವೆ' ಎಂದಿದ್ದಾರೆ.

2009 ರ ಮಾಹಿತಿ ತಂತ್ರಜ್ಞಾನ ನಿಯಮಗಳ ಅನುಸಾರ ಎಂಇಐಟಿ ಕೆಲವು ಆ್ಯಪ್‌ಗಳನ್ನು ನಿರ್ಬಂಧಿಸಿತ್ತು. ಆದರೆ ಇತ್ತಿಚೆಗೆ ಒಂದು ಮಾಧ್ಯಮ ವರದಿಯಲ್ಲಿ ಪಬ್ಜಿ ಗೇಮಿಂಗ್​ಗಾಗಿ ತಾಯಿಯನ್ನು ಕೊಂದ ಸುದ್ದಿ ಪ್ರಸಾರವಾಗಿತ್ತು. ಇದರ ಬಗ್ಗೆ ತನಿಖೆಯನ್ನೂ ಕೈಗೊಳ್ಳಲಾಗಿದೆ. ಆದರೆ, ಪಬ್ಜಿ ಗೇಮಿಂಗ್ ಅಪ್ಲಿಕೇಶನ್ ಅನ್ನು 2020 ರಲ್ಲಿ ಎಂಇಐಟಿ ನಿರ್ಬಂಧಿಸಿದೆ ಮತ್ತು ಅಂದಿನಿಂದ ಪಬ್ಜಿ ಗೇಮ್ ಭಾರತದಲ್ಲಿ ಲಭ್ಯವಿಲ್ಲ ಎಂದು ಚಂದ್ರಶೇಖರ್ ಹೇಳಿದ್ದಾರೆ.

ಐಟಿ ಕಾಯಿದೆ 2000 ರ ಸೆಕ್ಷನ್ 69A ಅಡಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿರುವ ಬಗ್ಗೆ ಗೂಗಲ್​ ಪ್ಲೇ ಸ್ಟೋರ್​ ಮತ್ತು ಆ್ಯಪಲ್​ ಸ್ಟೋರ್​ ಸೇರಿದಂತೆ ಹಲವು ಅಪ್ಲಿಕೇಶನ್ ಸ್ಟೋರ್‌ಗಳಿಗೆ ನಿರ್ಬಂಧಿಸುವ ನಿರ್ದೇಶನಗಳನ್ನು ಸಹ ನೀಡಲಾಯಿತು. ಇದಲ್ಲದೇ, ನಿಷೇಧಿಸಲಾದ ಅಪ್ಲಿಕೇಶನ್‌ಗಳು ಸಂವಹನ ನಡೆಸುತ್ತಿರುವ ಸಂಬಂಧಿತ ಡೊಮೇನ್‌ಗಳು ಮತ್ತು ಐಪಿಗಳನ್ನು ನಿರ್ಬಂಧಿಸಲು ದೂರಸಂಪರ್ಕ ಇಲಾಖೆ ಮೂಲಕ ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ನಿರ್ಬಂಧಿಸುವ ನಿರ್ದೇಶನಗಳನ್ನು ಸಹ ನೀಡಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ : ವಿಶ್ವಬ್ಯಾಂಕ್​​​ನಿಂದ ರೈಲ್ವೆ ಇಲಾಖೆ ₹12,000 ಕೋಟಿ ಸಾಲ ಪಡೆದಿದೆ: ಅಶ್ವಿನಿ ವೈಷ್ಣವ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.