ಹೈದರಾಬಾದ್(ತೆಲಂಗಾಣ): ಹೈದರಾಬಾದ್ನಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಪಾಕಿಸ್ತಾನದಲ್ಲಿ ಸಂಚು ನಡೆಸಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಗ್ರೆನೇಡ್‌ಗಳನ್ನು ಪಾಕಿಸ್ತಾನದಿಂದ ಕಾಶ್ಮೀರದೊಳಕ್ಕೆ ರಹಸ್ಯವಾಗಿ ಸಾಗಿಸಿ ಅಲ್ಲಿಂದ ಹೈದರಾಬಾದ್ಗೆ ಕಳುಹಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೈದರಾಬಾದ್ನ ಮುಸಾರಾಂಭಾಗ್ ಪ್ರದೇಶದ ಅಬ್ದುಲ್ ಜಾಹೆದ್ ಎಂಬಾತ ಯುವಕರನ್ನು ಸೇರಿಸಿ ಅವರಿಗೆ ಹಣಕಾಸು ಸಹಾಯ ನೀಡುವುದಾಗಿ ಹೇಳಿ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗುವಂತೆ ಪ್ರೇರೇಪಿಸುತ್ತಿದ್ದ. ಅಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕವೂ ಯುವಕರಿಗೆ ಪ್ರಚೋದನೆ ನೀಡುತ್ತಿದ್ದ. ಮಹಾನಗರದಲ್ಲಿ ಇತ್ತೀಚೆಗೆ ನಡೆದ ಕೋಮು ಗಲಭೆ ಘಟನಾವಳಿಗಳನ್ನು ಉಪಯೋಗಿಸಿಕೊಂಡು ಮತ್ತಷ್ಟು ಕೋಮು ದ್ವೇಷ ಹುಟ್ಟಿಸುವಂತೆ ಜಾಹೆದ್ನಿಗೆ ಪಾಕಿಸ್ತಾನದಿಂದ ಸ್ಪಷ್ಟ ಸಂದೇಶ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ದುಷ್ಕೃತ್ಯದ ಭಾಗವಾಗಿ ದಸರಾ ಹಬ್ಬದ ಸಮಯದಲ್ಲಿ ಬಾಂಬ್ ಬ್ಲಾಸ್ಟ್ ಮಾಡಲು ಸಂಚು ರೂಪಿಸಲಾಗಿತ್ತು ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಪಡೆಗಳ ಮೇಲೆ ಉಗ್ರರು ನೀಲಿ ಗ್ರೆನೇಡ್‌ಗಳಿಂದ ದಾಳಿ ಮಾಡಿದ್ದರು. ಈ ಗ್ರೆನೇಡ್‌ಗಳು ಚೀನಾದಲ್ಲಿ ತಯಾರಾಗಿರುವುದು ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಜಾಹೆದ್ ತಂಡದ ಬಳಿ ಪತ್ತೆಯಾದ ಗ್ರೆನೇಡ್‌ಗಳು ಕೂಡ ನೀಲಿ ಬಣ್ಣದ್ದಾಗಿರುವುದರಿಂದ, ಅವು ಚೀನಾದಲ್ಲಿ ತಯಾರಿಸಲ್ಪಟ್ಟಿವೆ ಎಂದು ಶಂಕಿಸಲಾಗಿದೆ. ಈ ಗ್ರೆನೇಡ್‌ಗಳು ಎರಡು ತಿಂಗಳ ಹಿಂದೆ ಪಾಕಿಸ್ತಾನದಿಂದ ಕಾಶ್ಮೀರ ತಲುಪಿದ್ದವು. ನಗರದ ಹೊರವಲಯದಲ್ಲಿ ಒಂದು ತಿಂಗಳ ಹಿಂದೆ ಮಿನಿವ್ಯಾನ್‌ನಲ್ಲಿ ಬಂದಿದ್ದ ಗ್ರೆನೇಡ್ ಬಾಕ್ಸ್ ಒಂದನ್ನು ಜಾಹೆದ್ ಪಡೆದುಕೊಂಡಿದ್ದ ಎಂದು ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ.
ಮೊದಲ ಗ್ರೆನೇಡ್ ದಾಳಿ 2006 ರಲ್ಲಿ RTC ಕ್ರಾಸ್‌ರೋಡ್ಸ್‌ನಲ್ಲಿರುವ ಓಡಿಯನ್ ಥಿಯೇಟರ್‌ನಲ್ಲಿ ನಡೆದಿತ್ತು. ಆಗ ಎನ್ಎಸ್ಐಸಿ ಪರೀಕ್ಷೆಯಲ್ಲಿ ಈ ಬಾಂಬ್ ಚೀನಾದಲ್ಲಿ ತಯಾರಿಸಿರುವುದು ಪತ್ತೆಯಾಗಿತ್ತು.
ಗ್ರೆನೇಡ್‌ಗಳನ್ನು ಪಡೆದ ನಂತರ, ಆರೋಪಿಯು ಒಂದು ತಿಂಗಳಿನಿಂದ ಪಾಕಿಸ್ತಾನದಿಂದ ಮುಂದಿನ ಆದೇಶಕ್ಕಾಗಿ ಕಾಯುತ್ತಿದ್ದ. ಕ್ರಿಮಿನಲ್‌ಗಳು ಮತ್ತು ಶಂಕಿತರ ಚಲನವಲನಗಳ ಮೇಲೆ ನಿಗಾ ಇರಿಸಿರುವ ಎಸ್‌ಐಟಿ, ಸಿಸಿಎಸ್, ಎಸ್‌ಬಿ ಮತ್ತು ಟಾಸ್ಕ್ ಫೋರ್ಸ್ ತಂಡಗಳು ಭಯೋತ್ಪಾದಕ ದಾಳಿಯ ಬಗ್ಗೆ ಮಾಹಿತಿ ಪಡೆದ ನಂತರ ಎಚ್ಚರಿಕೆ ನೀಡಲಾಗಿತ್ತು. ನಂತರ ನಗರ ಪೊಲೀಸ್ ಕಮಿಷನರ್ ಸಿ.ವಿ.ಆನಂದ್ ಅವರ ನೇತೃತ್ವದಲ್ಲಿ ಅತ್ಯಂತ ಗೌಪ್ಯವಾಗಿ ಮುಸಾರಾಂಭಾಗ್ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
ಇದನ್ನೂ ಓದಿ: 'ಮಿಷನ್ 2047' ಉಗ್ರ ಚಟುವಟಿಕೆ: ಏಳು ಜನರ ಸೆರೆ, ಪಾಕ್-ಬಾಂಗ್ಲಾಕ್ಕೆ ಶಂಕಿತರ ವಾಟ್ಸ್ಆ್ಯಪ್ ಕಾಲ್!