ಕೋಲ್ಕತಾ (ಪಶ್ಚಿಮ ಬಂಗಾಳ): ತನ್ನ ಬ್ಯಾಗ್ನಲ್ಲಿ ಕೊಕೇನ್ ಹೊಂದಿದ್ದ ಆರೋಪದ ಮೇಲೆ ಬಿಜೆಪಿ ಯುವ ನಾಯಕಿಯೊಬ್ಬಳನ್ನು ಬಂಧಿಸಲಾಗಿದೆ ಎಂದು ಪೊಲೀಸರ ಮಾಹಿತಿ ನೀಡಿದ್ದಾರೆ.
ಪಮೇಲಾ ಗೋಸ್ವಾಮಿ ಬಂಧಿತೆಯಾಗಿದ್ದು, ಆಕೆಯ ಸ್ನೇಹಿತ ಪ್ರಬೀರ್ ಕುಮಾರ್ ಡೇ ಅನ್ನು ನೂರು ಗ್ರಾಮ್ ಕೊಕೇನ್ ಹೊಂದಿದ್ದ ನ್ಯೂ ಅಲಿಪೋರ್ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿಗೆ ನನ್ನ ಬೆಂಬಲವಿದೆ : ಡಿಸಿಎಂ ಸವದಿ ಸ್ಪಷ್ಟೀಕರಣ
ಪೊಲೀಸ್ ಮೂಲಗಳ ಪ್ರಕಾರ, ಗೋಸ್ವಾಮಿ ಬಿಜೆವೈಎಂನ ಹೂಗ್ಲಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದು, ಪಶ್ಚಿಮ ಬಂಗಾಳದ ಉನ್ನತ ಬಿಜೆಪಿ ಮುಖಂಡರು ಮತ್ತು ಸಂಸದರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿದೆ.
ಪಮೇಲಾ ಗೋಸ್ವಾಮಿ ಕೊಕೇನ್ ಪೂರೈಸುವ ಜಾಲದಲ್ಲಿದ್ದರೆಂದು ಈ ಮೊದಲೇ ಮಾಹಿತಿ ಇದ್ದು, ಇಂದು ನಿಖರ ಮಾಹಿತಿ ಮೇರೆಗೆ ಕೊಕೇನ್ ಅನ್ನು ಗಿರಾಕಿಗಳಿಗೆ ಪೂರೈಸುವಾಗ ದಾಳಿ ಮಾಡಿ ರೆಡ್ಹ್ಯಾಂಡಾಗಿ ಬಂಧಿಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.