ETV Bharat / bharat

ಮಣಿಪುರದಲ್ಲಿ ಸುಗಮವಾಗಿರಲಿಲ್ಲ ಬಿಜೆಪಿ ಗೆಲುವಿನ ಹಾದಿ

ಮಣಿಪುರದಲ್ಲಿ ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರ ನೀಡಿರುವ ಕಾಯ್ದೆಯನ್ನು ವಿರೋಧಿಸಿ ಈ ಮೊದಲಿನಿಂದಲೂ ಅಲ್ಲಿನ ಜನರು ಪ್ರತಿಭಟನೆಗಳನ್ನು ನಡೆಸುತ್ತಿದ್ದರು. ಆ ಪ್ರತಿಭಟನೆ ನೇರವಾಗಿ ಕೇಂದ್ರ ಬಿಜೆಪಿ ಸರ್ಕಾರದ ಮೇಲೆ ವ್ಯಕ್ತವಾಗುತ್ತಿತ್ತು. ಇದು ಮತದಾನದ ಮೇಲೆ ಪರಿಣಾಮ ಬೀರುಲಿದೆ ಎನ್ನಲಾಗಿತ್ತು.

bjp wins Manipur state, new chief minister and  regional parties and allies
Manipura Result: ಗೆಲುವಿಗೆ ಸುಗಮವಾಗಿರಲಿಲ್ಲ ಬಿಜೆಪಿ ಹಾದಿ..
author img

By

Published : Mar 10, 2022, 8:21 PM IST

'ಸೆವೆನ್ ಸಿಸ್ಟರ್ಸ್'​ ಎಂದು ಕರೆಯುವ ಈಶಾನ್ಯ ಭಾರತದ ಮಣಿಪುರದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲಿದೆ. ಬುಡಕಟ್ಟು ಸಮುದಾಯಗಳ ಪ್ರಾಬಲ್ಯವಿರುವ ಪುಟ್ಟ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯುವುದು ಕಷ್ಟ ಎಂದೇ ಹೇಳಲಾಗುತ್ತಿತ್ತು. ಆದರೂ ಪ್ರಾದೇಶಿಕ ಪಕ್ಷಗಳು ಬಲಿಷ್ಟವಾಗಿರುವ ಈ ರಾಜ್ಯದಲ್ಲಿ ಕಮಲ ಗೆಲುವಿನ ನಗೆ ಬೀರಿದೆ.

bjp wins Manipur state, new chief minister and  regional parties and allies
ಮಣಿಪುರದಲ್ಲಿ ಪಕ್ಷಗಳ ಬಲಾಬಲ

ಮಣಿಪುರದಲ್ಲಿ ಒಟ್ಟು 60 ವಿಧಾನಸಭಾ ಕ್ಷೇತ್ರಗಳಿದ್ದು, 31 ಸ್ಥಾನಗಳು ಅಧಿಕಾರ ಹಿಡಿಯಲು ಅನಿವಾರ್ಯವಾಗಿದೆ. ಈಗ ಬಹುಮತದ ಸಮೀಪದಲ್ಲಿಯೇ ಭಾರತೀಯ ಜನತಾ ಪಕ್ಷ ಸುಳಿದಾಡುತ್ತಿದೆ.

ಹಿಂದಿನ ಬಾರಿ ಅಂದರೆ 2017ರ ವಿಧಾನಸಭಾ ಚುನಾವಣೆಯಲ್ಲಿ 21 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಅಧಿಕಾರ ಹಿಡಿಯುವ ಸಲುವಾಗಿ ಪ್ರಾದೇಶಿಕ ಪಕ್ಷವನ್ನು ಅವಲಂಬಿಸಿತ್ತು. 2022ರ ವಿಧಾನಸಭೆಯ ಚುನಾವಣೆಯನ್ನು ನೋಡಿದರೆ, ಬೇರೆ ಪಕ್ಷಗಳನ್ನು ಅವಲಂಬಿಸುವ ಅನಿವಾರ್ಯತೆ ಕಡಿಮೆ ಇದ್ದಂತೆ ತೋರುತ್ತಿದೆ. ಬಿಜೆಪಿ ಈ ಬಾರಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲುವುದು ಖಾತ್ರಿಯಾಗಿದೆ.

ಮಣಿಪುರ ಮುಖ್ಯಮಂತ್ರಿಯಾದ ಬಿಜೆಪಿ ಪಕ್ಷದ ಎನ್.ಬಿರೇನ್ ಸಿಂಗ್ ಅವರು ಹಿಂಗಾಂಗ್ ಕ್ಷೇತ್ರದಿಂದ ಸುಮಾರು 18 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿರೇನ್ ಸಿಂಗ್ ಅವರ ವಿರುದ್ಧ ಕಾಂಗ್ರೆಸ್​ನ ಪಿ.ಶರತ್ಚಂದ್ರ ಅವರು ಸ್ಪರ್ಧಿಸಿದ್ದರು.

ಮಣಿಪುರದ ಮಾಜಿ ಮುಖ್ಯಮಂತ್ರಿ ಒಕ್ರಂ ಇಬೋಬಿ ಸಿಂಗ್ ತೌಬಾಲ್ ವಿಧಾನಸಭಾ ಕ್ಷೇತ್ರದಿಂದ ಜಯಶಾಲಿಯಾಗಿದ್ದಾರೆ. ಮಣಿಪುರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದ ಟಿ.ಸತ್ಯಬ್ರತಾ ಅವರು ಯೈಸ್ಕುಲ್ ಕ್ಷೇತ್ರದಿಂದ ಜಯಶಾಲಿಯಾಗಿದ್ದಾರೆ.

ಉರಿಪೋಕ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆಹೆಚ್ ರಘುಮಣಿ ಗೆಲುವು ಸಾಧಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿದ್ದ ನಿಶಿಕಾಂತ್ ಸಪಂ ಅವರು ಕೈಷಮ್​ಥಿಂಗ್ ವಿಧಾನಸಭಾ ಕ್ಷೇತ್ರದಿಂದ ಜಯಭೇರಿ ಬಾರಿಸಿದ್ದಾರೆ. ವಗ್ಬೈ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಉಶಂ ದೆಬೆನ್ ಕೇವಲ 50 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದ್ದಾರೆ. ಬಿಜೆಪಿ ಹಿಂದಿನ ಬಾರಿಗಿಂತ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೂ, ಗೆಲುವಿನ ಹಾದಿ ಸುಗಮವಾಗಿರಲಿಲ್ಲ ಎಂಬುದು ತಿಳಿದುಕೊಳ್ಳಬೇಕಾದ ವಿಚಾರ.. ಏಕೆ ಗೊತ್ತಾ?

ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ ಕಂಟಕ: ಮಣಿಪುರದಲ್ಲಿ ಮಾತ್ರವಲ್ಲದೇ ಈಶಾನ್ಯ ರಾಜ್ಯಗಳಲ್ಲಿ ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರ ನೀಡಲಾಗಿದೆ. ಈ ಕಾಯ್ದೆಯನ್ನು ವಿರೋಧಿಸಿ, ಈ ಮೊದಲಿನಿಂದಲೂ ಅಲ್ಲಿನ ಪ್ರತಿಭಟನೆಗಳನ್ನು ನಡೆಸುತ್ತಿದ್ದರು. ಆ ಪ್ರತಿಭಟನೆ ನೇರವಾಗಿ ಕೇಂದ್ರ ಸರ್ಕಾರದ ಮೇಲೆ ಮತ್ತು ಕೇಂದ್ರ ಬಿಜೆಪಿ ಸರ್ಕಾರದ ಮೇಲೆ ವ್ಯಕ್ತವಾಗುತ್ತಿತ್ತು. ಮಣಿಪುರದಲ್ಲಿಯೂ ಬಿಜೆಪಿ ಸರ್ಕಾರ ಇದ್ದು, ಪಕ್ಷದ ಮೇಲೆ ಮತ್ತು ಮತಗಳ ಮೇಲೆ ದುಷ್ಪರಿಣಾಮ ಉಂಟಾಗಬಹುದು ಎನ್ನಲಾಗುತ್ತಿತ್ತು. ಆದರೆ, ಅದೆಲ್ಲವನ್ನೂ ಮತದಾರ ಕಡೆಗಣಿಸಿದ್ದು, ಬಿಜೆಪಿಗೆ ಮತ್ತಷ್ಟು ಬಲ ನೀಡಿದ್ದಾನೆ.

2021ರ ಡಿಸೆಂಬರ್ 4ರಂದು ನಾಗಾಲ್ಯಾಂಡ್‌ನಲ್ಲಿ ನಾಗರಿಕರ ಹತ್ಯೆ ನಡೆದ ನಂತರ, ಮಣಿಪುರದಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯ ವಿರುದ್ಧ ವಿರೋಧ ಕೇಳಿಬಂದಿತ್ತು. ಇದನ್ನು ಅಲ್ಲಿನ ಪ್ರಾದೇಶಿಕ ಪಕ್ಷಗಳು ಬಳಸಿಕೊಂಡವಾದರೂ, ಬಿಜೆಪಿಯಿಂದ ಮತಗಳನ್ನು ಕಸಿದುಕೊಳ್ಳಲು ವಿಫಲವಾಗಿವೆ.

ಕಾಂಗ್ರೆಸ್ ಪರಿಸ್ಥಿತಿ ದಾರುಣ: 2002ರಿಂದ 2007ರವರೆಗೆ ಮಣಿಪುರದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿತ್ತು. ಈ ವೇಳೆ ಒಕ್ರಂ ಇಬೋಬಿ ಸಿಂಗ್ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಇಷ್ಟು ವರ್ಷಗಳ ಕಾಲ ಆಳ್ವಿಕೆ ಮಾಡಿದರೂ, 2017ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಬೇಕಾಗಿತ್ತು. 2017ರಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬಂದ ನಂತರ ಹಂತಹಂತವಾಗಿ ತನ್ನ ಪ್ರಾಬಲ್ಯ ಕಳೆದುಕೊಂಡ ಕಾಂಗ್ರೆಸ್ ಪಕ್ಷ ವಿವಿಧ ಪ್ರಾದೇಶಿಕ ಪಕ್ಷಗಳ ಮುಂದೆಯೂ ದುರ್ಬಲವಾಗಿದೆ.

ಇದನ್ನೂ ಓದಿ: ಉತ್ತರಾಖಂಡದಲ್ಲಿ 2ನೇ ಬಾರಿ ಕಮಲ ಅರಳಿದ್ದು ಹೇಗೆ?: ಕಾಂಗ್ರೆಸ್ ವೈಫಲ್ಯಕ್ಕೆ ಕಾರಣಗಳಿವು..

ಅಂದಹಾಗೆ ಮಣಿಪುರದಲ್ಲಿ ಸಂಯುಕ್ತ ಜನತಾದಳ, ಕುಕಿ ಪೀಪಲ್ಸ್ ಅಲೈಯನ್ಸ್, ನಾಗಾ ಪೀಪಲ್ಸ್ ಫ್ರಂಟ್, ನ್ಯಾಷನಲ್ ಪೀಪಲ್ಸ್ ಪಾರ್ಟಿ ಹೆಸರಿನ ಪ್ರಾದೇಶಿಕ ಪಕ್ಷಗಳು ಅಸ್ತಿತ್ವದಲ್ಲಿದ್ದು, ಈ ಪಕ್ಷಗಳೂ ಬಿಜೆಪಿಗೆ ಪ್ರಬಲ ಸ್ಪರ್ಧೆಯನ್ನು ಒಡ್ಡಿದ್ದವು. ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದ ಗುಂಪುಗಾರಿಕೆಯು ಪಕ್ಷವನ್ನು ದಾರುಣ ಸ್ಥಿತಿಗೆ ತಂದು ನಿಲ್ಲಿಸಿದೆ ಎಂದು ಹೇಳಲಾಗುತ್ತಿದೆ. ಈಗಲೂ ಒಕ್ರಂ ಇಬೋಬಿ ಸಿಂಗ್ ಕಾಂಗ್ರೆಸ್​ ನಾಯಕರಾಗಿದ್ದು, ಹೊಸ ನಾಯಕರನ್ನು ಹುಡುಕಿಕೊಳ್ಳುವಲ್ಲಿ ಕಾಂಗ್ರೆಸ್ ಸೋತಿದೆ.

ಬಿರೇನ್ ವಿರುದ್ಧ ತಿರುಗಿಬಿದ್ದಿದ್ದ ಮಿತ್ರಪಕ್ಷಗಳು: ಕಳೆದ ಬಾರಿ ಚುನಾವಣೆ ನಡೆದಾಗ ಎನ್‌ಪಿಎಫ್‌ ಮತ್ತು ಎನ್​ಪಿಪಿ ಪಕ್ಷಗಳು ಬಿಜೆಪಿಗೆ ಬೆಂಬಲ ನೀಡಿದ್ದವು. 2020ರಲ್ಲಿ ಸಿಎಂ ಬಿರೇನ್ ವಿರುದ್ಧ ತಿರುಗಿ ಬಿದ್ದಿದ್ದ ಎನ್​ಪಿಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿತ್ತು. ಈ ವೇಳೆ ಸರ್ಕಾರವನ್ನು ರಚಿಸುವ ಅವಕಾಶವನ್ನು ಕಾಂಗ್ರೆಸ್ ಉಪಯೋಗಿಸಿಕೊಂಡಿರಲಿಲ್ಲ.

ಈಗ ನಡೆಯುತ್ತಿರುವ ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿಗೆ ಬಹುಮತ ಬಾರದೆ ಇದ್ದ ಪಕ್ಷದಲ್ಲಿ ಎನ್​ಪಿಎಫ್​ ಬೆಂಬಲ ನೀಡಲಿದೆ ಎನ್ನಲಾಗಿದೆ. ಬಿಜೆಪಿ ಜೊತೆಗೆ ಉತ್ತಮ ಸಂಬಂಧವನ್ನು ಎನ್​ಪಿಎಫ್ ಹೊಂದಿದ್ದು, ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿಲ್ಲ. ಏಕಾಂಗಿಯಾಗಿಯೇ ಹೋರಾಡುವ ನಿರ್ಣಯವನ್ನು ಬಿಜೆಪಿ ಚುನಾವಣೆಗೆ ಮೊದಲು ಪ್ರಕಟಿಸಿತ್ತು ಎಂಬುದು ಗಮನಿಸಬೇಕಾದ ವಿಚಾರ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.