ETV Bharat / bharat

ಉತ್ತರ ಪ್ರದೇಶ ಎಂಎಲ್​ಸಿ ಚುನಾವಣೆ: ನಾಲ್ಕು ಕ್ಷೇತ್ರ ಬಿಜೆಪಿ ಪಾಲು, ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು - ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ

ಯುಪಿ ವಿಧಾನ ಪರಿಷತ್​ ಚುನಾವಣೆ - ನಾಲ್ಕು ಕ್ಷೇತ್ರಗಳಲ್ಲಿ ಅರಳಿದ ಕಮಲ - ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗೆ ಜಯ

ಉತ್ತರ ಪ್ರದೇಶ ಎಂಎಲ್​ಸಿ ಚುನಾವಣೆ
ಉತ್ತರ ಪ್ರದೇಶ ಎಂಎಲ್​ಸಿ ಚುನಾವಣೆ
author img

By

Published : Feb 4, 2023, 6:56 AM IST

ಲಕ್ನೋ(ಉತ್ತರ ಪ್ರದೇಶ) : ಉತ್ತರ ಪ್ರದೇಶದ ವಿಧಾನ ಪರಿಷತ್ತಿನ ಐದು ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಗೆದ್ದಿದೆ. ಈ ಚುನಾವಣೆಯಲ್ಲಿ ಪ್ರಮುಖ ವಿರೋಧ ಪಕ್ಷ ಸಮಾಜವಾದಿ ಪಕ್ಷ (ಎಸ್‌ಪಿ) ಹೀನಾಯ ಸೋಲು ಕಂಡಿದೆ.

ಗೋರಖ್‌ಪುರ-ಫೈಜಾಬಾದ್ ವಿಭಾಗ, ಕಾನ್ಪುರ ವಿಭಾಗ, ಬರೇಲಿ-ಮೊರಾದಾಬಾದ್ ವಿಭಾಗ, ಅಲಹಾಬಾದ್-ಝಾನ್ಸಿ ವಿಭಾಗದ ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಈ ಸ್ಥಾನಗಳಿಗೆ ಎಸ್‌ಪಿ ವಿರುದ್ಧ ಬಿಜೆಪಿ ಸ್ಪರ್ಧಿಸಿತ್ತು. ಜನವರಿ 30 ರಂದು ಮೂರು ಪದವೀದರ ಕ್ಷೇತ್ರ ಹಾಗೂ ಎರಡು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆದಿತ್ತು.

ಪದವೀದರ ವಿಭಾಗ.. ಜೈಪಾಲ್ ಸಿಂಗ್ ( ಬರೇಲಿ-ಮೊರಾದಾಬಾದ್ ವಿಭಾಗ), ಅರುಣ್ ಪಾಠಕ್ ( ಉನ್ನಾವ್​- ಕಾನ್ಪುರ ವಿಭಾಗ) ಮತ್ತು ದೇವೇಂದ್ರ ಪ್ರತಾಪ್ (ಗೋರಖ್‌ಪುರ-ಫೈಜಾಬಾದ್) ಗೆಲುವು ಸಾಧಿಸಿದ್ದಾರೆ.

ಚುನಾವಣಾ ಆಯೋಗದಿಂದ ಪಡೆದ ಮಾಹಿತಿಯ ಪ್ರಕಾರ, ಬಿಜೆಪಿ ಅಭ್ಯರ್ಥಿ ವ್ಯಾಸ್ಟ್ ಅವರು ವಿಧಾನ ಪರಿಷತ್ತಿನ ಬರೇಲಿ-ಮೊರಾದಾಬಾದ್ ವಿಭಾಗದಲ್ಲಿ ದೊಡ್ಡ ಅಂತರದೊಂದಿಗೆ ಸತತ ಮೂರನೇ ಗೆಲುವು ದಾಖಲಿಸಿದ್ದಾರೆ. ಅವರು ಎಸ್‌ಪಿಯ ಶಿವಪ್ರತಾಪ್ ಸಿಂಗ್ ಅವರನ್ನು 51,257 ಮತಗಳಿಂದ ಸೋಲಿಸಿದ್ದಾರೆ. ಇದು 1986 ರಿಂದ ಅಜೇಯ ಸ್ಥಾನದಲ್ಲಿದ್ದ ಬಿಜೆಪಿಯ ಎಂಟನೇ ಗೆಲುವನ್ನು ಸೂಚಿಸುತ್ತದೆ.

ದೇವೇಂದ್ರ ಪ್ರತಾಪ್ ಸಿಂಗ್ 17,455 ಮತಗಳಿಂದ, ಅರುಣ್ ಪಾಠಕ್ 53,285 ಹಾಗೂ ಜೈಪಾಲ್ ಸಿಂಗ್ 51,257 ಮತಗಳಿಂದ ಜಯಗಳಿಸಿದ್ದಾರೆ. ಬಾಬುಲಾಲ್ ತಿವಾರಿ ಅವರು ಪ್ರಯಾಗರಾಜ್-ಝಾನ್ಸಿ ಶಿಕ್ಷಕರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಪರವಾಗಿ ಮೊದಲ ಬಾರಿಗೆ ಸ್ಪರ್ಧಿಸುವ ಮೂಲಕ ಮೂರು ಬಾರಿ ಎಂಎಲ್ಸಿ ಸುರೇಶ್ ಕುಮಾರ್ ತ್ರಿಪಾಠಿ ಅವರನ್ನು 1403 ಮತಗಳಿಂದ ಸೋಲಿಸಿದ್ದಾರೆ. ಆದರೆ, ಕಾನ್ಪುರ ವಿಭಾಗದ ಶಿಕ್ಷಕರ ಕ್ಷೇತ್ರದಲ್ಲಿ ಅಭ್ಯರ್ಥಿ ರಾಜ್ ಬಹುದ್ದೂರ್​ ಚಂದೇಲ್ ಅವರ ವಿರುದ್ಧ ಬಿಜೆಪಿ ಸೋಲು ಅನುಭವಿಸಿದೆ.

ತಿವಾರಿ 10,205 ಮತಗಳನ್ನು ಪಡೆದರೆ, ತ್ರಿಪಾಠಿ 8,802 ಮತಗಳನ್ನು ಪಡೆದರು. ಗೋರಖ್‌ಪುರ-ಫೈಜಾಬಾದ್ ಪದವೀಧರ ಕ್ಷೇತ್ರವು ಯೋಗಿ ಆದಿತ್ಯನಾಥ್ ಅವರ ಕ್ಷೇತ್ರವಾಗಿದೆ. ಈ ಸ್ಥಾನಕ್ಕೆ ಬಿಜೆಪಿಯಿಂದ ದೇವೇಂದ್ರ ಪ್ರತಾಪ್ ಸಿಂಗ್ ಮತ್ತು ಎಸ್‌ಪಿಯಿಂದ ಕರುಣಾಕಾಂತ್ ಮೌರ್ಯ ಸ್ಪರ್ಧಿಸಿದ್ದರು. ಸಿಂಗ್ 51,699 ಮತ್ತು ಮೌರ್ಯ 34,244 ಮತಗಳನ್ನು ಪಡೆದರು.

ಮಹಾರಾಷ್ಟ್ರ ಎಂಎಲ್​ಸಿ ಚುನಾವಣೆ: ಎಂವಿಎ ಗೆ 3 ಸ್ಥಾನ, ಬಿಎಸ್​ಎಸ್​-ಬಿಜೆಪಿಗೆ ತಲಾ 1 ಸ್ಥಾನ: ಪರಿಷತ್​ನ ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ) ಮೂರು ಸ್ಥಾನಗಳನ್ನು ಗೆದ್ದರೆ, ಆಡಳಿತಾರೂಢ ಬಾಳಾಸಾಹೆಬಂಚಿ ಶಿವಸೇನೆ-ಭಾರತೀಯ ಜನತಾ ಪಕ್ಷ (ಬಿಎಸ್‌ಎಸ್-ಬಿಜೆಪಿ) ಮತ್ತು ಬಿಜೆಪಿ ಬೆಂಬಲಿತ ಸ್ವತಂತ್ರ ತಲಾ ಒಂದು ಸ್ಥಾನವನ್ನು ಗಳಿಸಿತು. ಐದು ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ನಾಗ್ಪುರ (ಶಿಕ್ಷಕರ ವಿಭಾಗ) ಮತ್ತು ಔರಂಗಾಬಾದ್ (ಶಿಕ್ಷಕರ ವಿಭಾಗ) ಮತ್ತು ಅಮರಾವತಿ ಪದವೀಧರ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಕಾಂಗ್ರೆಸ್-ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ-ಶಿವಸೇನೆ (ಯುಬಿಟಿ) ಯ ಎಂವಿಎ 'ಆಟೋ-ರಿಕ್ಷಾ' ಮೈತ್ರಿಯು 'ಡಬಲ್-ಇಂಜಿನ್' ಬಿಎಸ್‌ಎಸ್-ಬಿಜೆಪಿಯನ್ನು ಸೋಲಿಸಿದೆ.

ಇದನ್ನೂ ಓದಿ : ರಾಜಕೀಯ ಪಕ್ಷಗಳ ಹಣಕಾಸು ನಿಯಂತ್ರಿಸುವ ಪ್ರಸ್ತಾವನೆ ಇಲ್ಲ: ಕೇಂದ್ರದ ಸ್ಪಷ್ಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.