ETV Bharat / bharat

ಕೋವಿಡ್‌ ನಿಯಮ ಗಾಳಿಗೆ ತೂರಿ ಸಮಾಜವಾದಿ ಪಕ್ಷದಿಂದ ಬೃಹತ್‌ ಪಕ್ಷ ಸೇರ್ಪಡೆ ಕಾರ್ಯಕ್ರಮ - ಉತ್ತರ ಪ್ರದೇಶ ಎಲೆಕ್ಷನ್​ 2022

ಉತ್ತರ ಪ್ರದೇಶದ ಚುನಾವಣಾ ಕಣ ರಂಗೇರುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಬಿಜೆಪಿ ತೊರೆದ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಸೇರಿದಂತೆ ಅನೇಕರು ಇಂದು ಸಮಾಜವಾದಿ ಪಕ್ಷ ಸೇರಿಕೊಂಡಿದ್ದಾರೆ.

UP Assembly polls
UP Assembly polls
author img

By

Published : Jan 14, 2022, 3:38 PM IST

ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಘೋಷಣೆಯಾದಾಗಿನಿಂದಲೂ ಆಡಳಿತ ಪಕ್ಷ ಬಿಜೆಪಿಗೆ ಒಂದರ ಹಿಂದೆ ಒಂದರಂತೆ ಹೊಡೆತ ಬೀಳುತ್ತಿದೆ. ಕೆಲವು ಸಚಿವರೂ ಸೇರಿದಂತೆ ಶಾಸಕರು ಕಮಲ ಪಕ್ಷ ತೊರೆದಿದ್ದಾರೆ. ಇದರಲ್ಲಿ ಬಹುತೇಕರು ಸಮಾಜವಾದಿ ಪಕ್ಷ ಸೇರ್ಪಡೆಯಾಗ್ತಿದ್ದು ಇಂದು ಬೃಹತ್ ಸಮಾರಂಭ ಆಯೋಜಿಸಲಾಗಿತ್ತು.

ಬಿಜೆಪಿಯಿಂದ ಹೊರಬಂದಿರುವ ಸ್ವಾಮಿ ಪ್ರಸಾದ್​ ಮೌರ್ಯ, ಧರಂ ಸಿಂಗ್​ ಸೈನಿ, ಭಗವತಿ ಸಾಗರ್​, ವಿನಯ್​ ಶಕ್ಯ ಸೇರಿದಂತೆ ಅನೇಕರು ಅಖಿಲೇಶ್​ ಯಾದವ್​ ಸಮ್ಮುಖದಲ್ಲಿಂದು ಸಮಾಜವಾದಿ ಪಕ್ಷ ಸೇರಿಕೊಂಡರು.

ಈ ವೇಳೆ ಮಾತನಾಡಿರುವ ಅಖಿಲೇಶ್ ಯಾದವ್​, ಉತ್ತರ ಪ್ರದೇಶದಲ್ಲಿ ಬಿಜೆಪಿಯ ವಿಕೆಟ್​ಗಳು ಒಂದರ ಹಿಂದೆ ಒಂದರಂತೆ ಬೀಳುತ್ತಿವೆ, ಆದರೂ ನಮ್ಮ ಸಿಎಂಗೆ ಕ್ರಿಕೆಟ್​ ಆಡುವುದು ಗೊತ್ತಿಲ್ಲ. ಸ್ವಾಮಿ ಪ್ರಸಾದ್​ ಮೌರ್ಯ ಅವರು ಹೋದಲ್ಲೆಲ್ಲಾ ಸರ್ಕಾರ ರಚನೆಯಾಗಿದೆ. ಈ ಬಾರಿಯೂ ತಮ್ಮೊಂದಿಗೆ ಅಪಾರ ನಾಯಕರನ್ನು ಕರೆತಂದಿದ್ದಾರೆ ಎಂದರು.

ಡಿಜಿಟಲ್​ ಇಂಡಿಯಾ ದೋಷ ಮರೆಯಲು ಯಾರಿಂದಲೂ ಸಾಧ್ಯವಿಲ್ಲ. ಕಾನ್ಪುರದ ಐಟಿ ದಾಳಿ ಬೇರೆ ಕಡೆ ನಡೆಯಬೇಕಿತ್ತು. ಆದರೆ, ಮಿಸ್​ ಆಗಿ ಅವರ ಮನೆಯಲ್ಲೇ ನಡೆದಿದೆ ಎಂದರು.

ಸಮಾಜವಾದಿ ಪಕ್ಷದಿಂದ ಆಯೋಜನೆಗೊಂಡಿದ್ದ ಸಮಾರಂಭದಲ್ಲಿ ಬಿಎಸ್‌ಪಿ ಮಾಜಿ ಶಾಸಕ ನೀರಜ್ ಕುಶಾವಾಹ ಮೌರ್ಯ, ಬಿಜೆಪಿ ಮಾಜಿ ಎಂಎಲ್‌ಸಿ ಹರ್ಪಾಲ್ ಸೈನಿ, ಬಿಎಸ್‌ಪಿ ಮಾಜಿ ಶಾಸಕ ಬಲರಾಮ್ ಸೈನಿ, ಬಿಜೆಪಿ ಮಾಜಿ ಶಾಸಕ ರಾಜೇಂದ್ರ ಪ್ರತಾಪ್ ಸಿಂಗ್, ಮಾಜಿ ರಾಜ್ಯ ಸಚಿವ ವಿದ್ರೋಹಿ ಮೌರ್ಯ, ಮಾಜಿ ಮುಖ್ಯ ಭದ್ರತಾ ಅಧಿಕಾರಿ ಪದಮ್ ಸಿಂಗ್ ಮತ್ತು ಕಾಂಗ್ರೆಸ್ ಮಾಜಿ ಶಾಸಕ ಬನ್ಸಿ ಸಿಂಗ್ ಪಹಾಡಿಯಾ ಎಸ್‌ಪಿಗೆ ಸೇರ್ಪಡೆಯಾದರು.

  • Former BSP MLA Neeraj Kushawaha Maurya, former BJP MLC Harpal Saini, former BSP MLA Balram Saini, former BJP MLA Rajendra Pratap Singh, former Minister of State Vidrohi Maurya, former Chief Security Officer Padam Singh and former Congress MLA Bansi Singh Pahadiya joins SP today pic.twitter.com/ap6t9E58nz

    — ANI UP/Uttarakhand (@ANINewsUP) January 14, 2022 " class="align-text-top noRightClick twitterSection" data=" ">

ಇದನ್ನೂ ಓದಿ: ಡಿಆರ್​​ಎಸ್​ ವಿವಾದ: ಟೀಂ ಇಂಡಿಯಾ ಹತಾಶೆ & ಒತ್ತಡದಲ್ಲಿದೆ ಎಂದ ಲುಂಗಿ ಎಂಗಿಡಿ

ಕೋವಿಡ್ ನಿಯಮ ಮಂಗಮಾಯ:

ಸಮಾಜವಾದಿ ಪಕ್ಷ ಸೇರ್ಪಡೆ ಕಾರ್ಯಕ್ರಮದ ವೇಳೆ ಕೋವಿಡ್ ನಿಯಮ ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ. ಸಮಾರಂಭದಲ್ಲಿ ಸಾವಿರಾರು ಜನರು ಭಾಗಿಯಾಗಿದ್ದು, ಈ ವೇಳೆ ಯಾವುದೇ ರೀತಿಯ ಕೊರೊನಾ ಮಾರ್ಗಸೂಚಿ ಪಾಲನೆ ಮಾಡಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.