ETV Bharat / bharat

ಹೊಸ ಸಂಸತ್ ಕಟ್ಟಡ ಉದ್ಘಾಟನೆ ವಿವಾದ: ಪ್ರಧಾನಿಯೇ ಸರ್ಕಾರದ ಮುಖ್ಯಸ್ಥರು- ಬಿಜೆಪಿ ಸಮರ್ಥನೆ - ನೂತನ ಸಂಸತ್ ಕಟ್ಟಡ ಉದ್ಘಾಟನೆ ವಿವಾದ

ಹೊಸ ಸಂಸತ್ ಕಟ್ಟಡ ಉದ್ಘಾಟನೆ ವಿಚಾರ ಕೇಂದ್ರ ಸರಕಾರ ಹಾಗೂ ವಿಪಕ್ಷಗಳ ನಡುವೆ ಕಿತ್ತಾಟಕ್ಕೆ ಕಾರಣವಾಗಿದೆ.

PM Modi
ನೂತನ ಸಂಸತ್ ಕಟ್ಟಡ ಉದ್ಘಾಟನೆ ಮಾಡಲಿರುವ ಪ್ರಧಾನಿ ಮೋದಿ
author img

By

Published : May 23, 2023, 11:28 AM IST

ನವಹೆದಲಿ: ನೂತನ ಸಂಸತ್ ಭವನ ಉದ್ಘಾಟನೆಯ ವಿಚಾರವಾಗಿ ಆಡಳಿತಾರೂಢ ಬಿಜೆಪಿ ಹಾಗೂ ವಿರೋಧ ಪಕ್ಷಗಳ ನಡುವಿನ ಜಟಾಪಟಿ ತಾರಕಕ್ಕೇರಿದೆ. ಪ್ರಧಾನಿ ಮೋದಿ ಅವರು ಮೇ 28 ರಂದು ವಿ.ಡಿ.ಸಾವರ್ಕರ್ ಅವರ ಜನ್ಮದಿನದಂದು ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಭವ್ಯ ಕಟ್ಟಡದ ಉದ್ಘಾಟನೆಗೆ ರಾಷ್ಟ್ರಪತಿಯನ್ನು ಆಹ್ವಾನಿಸದೆಯೇ ಮೋದಿ ಅವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವ ಕೇಂದ್ರ ಸರ್ಕಾರದ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಂಸತ್ ಭವನವನ್ನು ಸಂವಿಧಾನದ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿ ಉದ್ಘಾಟಿಸಬೇಕಿತ್ತು. ಆದರೆ ಅವರಿಗೆ ಆಹ್ವಾನವನ್ನೇ ನೀಡಿಲ್ಲ ಎಂದು ಪ್ರತಿಪಕ್ಷಗಳು ಕಿಡಿಕಾರಿವೆ.

ಬಿಜೆಪಿ ನಾಯಕರಿಂದ ತಿರುಗೇಟು: "ಅಸ್ತಿತ್ವದಲ್ಲಿಯೇ ಇಲ್ಲದ ವಿಷಯಗಳ ಬಗ್ಗೆ ವಿವಾದ ಸೃಷ್ಟಿಸುವ ಹವ್ಯಾಸವನ್ನು ಕಾಂಗ್ರೆಸ್ ಹೊಂದಿದೆ. ರಾಷ್ಟ್ರಪತಿ ದೇಶದ ಮುಖ್ಯಸ್ಥರಾದರೆ, ಪ್ರಧಾನಿ ಸರ್ಕಾರದ ಮುಖ್ಯಸ್ಥರು. ಅವರು ಸರ್ಕಾರದ ಪರವಾಗಿ ಸಂಸತ್ ಮುನ್ನಡೆಸುತ್ತಾರೆ. ಅವರ ನೀತಿಗಳು ಕಾನೂನುಗಳ ಅಡಿಯಲ್ಲಿ ರೂಪುಗೊಂಡಿವೆ. ರಾಷ್ಟ್ರಪತಿ ಯಾವುದೇ ಸದನದ (ಲೋಕಸಭೆ/ರಾಜ್ಯಸಭೆ) ಸದಸ್ಯರಲ್ಲ" ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

  • From criticising the New Parliament Building & questioning its very necessity despite many of them advocating for it before but not executing it, Congress President & other worthies are now shifting the goalpost by generously misquoting an article a day from the Constitution! pic.twitter.com/GUwexamcZy

    — Hardeep Singh Puri (@HardeepSPuri) May 23, 2023 " class="align-text-top noRightClick twitterSection" data=" ">

"ಚಾರಿತ್ರಿಕ ಘಟನೆಗೆ ದೇಶ ಸಾಕ್ಷಿಯಾಗುವ ಸಂದರ್ಭದಲ್ಲಿ ತಗಾದೆ ತೆಗೆಯುವ ಮೂಲಕ ಕಾಂಗ್ರೆಸ್‌ ನಾಯಕರು ಅಪಶಕುನದ ಮಾತನಾಡುತ್ತಿದ್ದಾರೆ. ನೂತನ ಸಂಸತ್‌ ಭವನದ ಉದ್ಘಾಟನೆಗೂ ವೀರ್ ಸಾವರ್ಕರ್‌ ಜನ್ಮದಿನದ ವಿಚಾರಕ್ಕೂ ತಳುಕು ಹಾಕುವುದು ಅಸಂಬದ್ಧ. ವೀರ್ ಸಾವರ್ಕರ್ ಅವರು ಪ್ರತಿ ಭಾರತೀಯನ ಹೆಮ್ಮೆ. ಉದ್ಘಾಟನೆ ದಿನಾಂಕವನ್ನು ಪ್ರಶ್ನಿಸುತ್ತಿರುವವರಿಗೆ ಇದು ಕ್ಷುಲ್ಲಕ ಎಂದು ಹೇಳಿ. ಈ ಟೀಕೆ ಮಾಡುತ್ತಿರುವವರು ಸಾವರ್ಕರ್ ಪಾದಕ್ಕೂ ಸಮನರಲ್ಲ" ಎಂದು ಬಿಜೆಪಿ ವಕ್ತಾರ ಗೌರವ್‌ ಭಾಟಿಯಾ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ವಿಪಕ್ಷಗಳ ವಾದವೇನು?: ಮೇ 28 ರಂದು ನೂತನ ಸಂಸತ್‌ ಭವನ ಉದ್ಘಾಟನೆ ಕಾರ್ಯಕ್ರಮಕ್ಕೆ ದೇಶದ ಮೊದಲ ಪ್ರಜೆ ರಾಷ್ಟ್ರಪತಿಯನ್ನು ಕರೆಯದೆ ಅವಮಾನಿಸಲಾಗಿದೆ. ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಗೂ ಸರ್ಕಾರ ಆಹ್ವಾನ ನೀಡದೇ ದಲಿತರು, ಗಿರಿಜನರನ್ನು ಚುನಾವಣೆ ಸಂದರ್ಭದಲ್ಲಿ ಮತಬ್ಯಾಂಕ್‌ ರೀತಿ ಬಳಸಿಕೊಂಡು ಬಿಸಾಕಿದೆ'' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಣಿ ಟ್ವೀಟ್‌ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಖರ್ಗೆ, ''ಸಂಸತ್‌ ಈ ದೇಶದ ಸರ್ವೋಚ್ಚ ಶಾಸನಸಭೆ. ರಾಷ್ಟ್ರಪತಿ ಸರ್ಕಾರ, ಪ್ರತಿಪಕ್ಷಗಳು ಹಾಗೂ ಜನರ ಪ್ರತಿನಿಧಿ. ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೇ ಸಂವಿಧಾನಕ್ಕೆ ಅವಮಾನಿಸಲಾಗಿದೆ'' ಎಂದು ದೂರಿದ್ದಾರೆ.

  • It looks like the Modi Govt has ensured election of President of India from the Dalit and the Tribal communities only for electoral reasons.

    While Former President, Shri Kovind was not invited for the New Parliament foundation laying ceremony…

    1/4

    — Mallikarjun Kharge (@kharge) May 22, 2023 " class="align-text-top noRightClick twitterSection" data=" ">

ಶಂಕುಸ್ಥಾಪನೆಗೂ ಆಹ್ವಾನವಿರಲಿಲ್ಲ: ಚುನಾವಣೆ ಬಂದಾಗ ಮೋದಿಗೆ ದಲಿತರು, ಗಿರಿ ಜನರು ನೆನಪಾಗುತ್ತಾರೆ. ಅವರನ್ನು ಮುನ್ನೆಲೆಗೆ ತಂದು ಮತ ಪಡೆಯುತ್ತಾರೆ. ಬಳಿಕ ಅವರಿಗೆ ಅವಮಾನ ಮಾಡುತ್ತಾರೆ. ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರನ್ನು ನೂತನ ಸಂಸತ್‌ ಭವನದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಕೂಡ ಆಹ್ವಾನಿಸದೆ ಅವಮಾನಿಸಿತ್ತು ಎಂದು ಖರ್ಗೆ ಹೇಳಿದ್ದಾರೆ.

"ದೇಶದ ಸಾಂವಿಧಾನಿಕ ಸ್ವತ್ತಾಗಿರುವ ಸಂಸತ್‌ ಭವನವನ್ನು ರಾಷ್ಟ್ರಪತಿ ಅವರೇ ಉದ್ಘಾಟಿಸಬೇಕು. ಸರ್ಕಾರಕ್ಕೆ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ರಕ್ಷಿಸುವ ಉದ್ದೇಶ ಹೊಂದಿದ್ದರೆ ದ್ರೌಪದಿ ಮುರ್ಮು ಅವರಿಂದಲೇ ಲೋಕಾರ್ಪಣೆ ಮಾಡಿಸಲಿ" ಎಂದು ಆಗ್ರಹಿಸಿದ್ದಾರೆ.

ಭಾನುವಾರ ಹೇಳಿಕೆ ನೀಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ''ಹೊಸ ಸಂಸತ್‌ ಭವವನನ್ನು ಪ್ರಧಾನಿ ಮೋದಿ ಬದಲಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟನೆ ಮಾಡುವುದು ಉತ್ತಮ'' ಎಂದು ಹೇಳಿದ್ದರು.

ಇದನ್ನೂ ಓದಿ: ಪ್ರಧಾನಿಯಲ್ಲ, ರಾಷ್ಟ್ರಪತಿಗಳು ಹೊಸ ಸಂಸತ್​ ಕಟ್ಟಡ ಉದ್ಘಾಟಿಸಲಿ: ರಾಹುಲ್​ ಗಾಂಧಿ ಒತ್ತಾಯ

"ಹೊಸ ಸಂಸತ್​ ಭವನದ ಉದ್ಘಾಟನೆಯನ್ನು ಪ್ರಧಾನಿ ಬದಲಿಗೆ ಲೋಕಸಭೆ ಸ್ಪೀಕರ್‌ ಅಥವಾ ರಾಜ್ಯಸಭಾ ಸಭಾಪತಿ ಉದ್ಘಾಟನೆ ಮಾಡಲಿ" ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಸಲಹೆ ನೀಡಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಟಿಎಂಸಿ ಪಕ್ಷ ವೀರ್ ಸಾವರ್ಕರ್‌ ಜನ್ಮದಿನದಂದೇ ಹೊಸ ಸಂಸತ್‌ ಭವನದ ಲೋಕಾರ್ಪಣೆ ಮಾಡುವುದರ ಔಚಿತ್ಯವೇನು" ಎಂದು ಪ್ರಶ್ನಿಸಿದೆ.

"ಸಾವರ್ಕರ್‌ ಜನ್ಮದಿನದಂದೇ ಉದ್ಘಾಟನೆ ಮಾಡುವ ಮೂಲಕ ದೇಶಕ್ಕಾಗಿ ಹೋರಾಟ ಮಾಡಿದ ಗಾಂಧಿ, ನೆಹರು, ಪಟೇಲ್‌, ಬೋಸ್‌ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೂ ಅವಮಾನಿಸಲಾಗುತ್ತಿದೆ" ಎಂದು ಕಾಂಗ್ರೆಸ್‌ ವಕ್ತಾರ ಜೈರಾಮ್‌ ರಮೇಶ್‌ ಆರೋಪಿಸಿದ್ದಾರೆ.

ಇದನ್ನೂ ಓದಿ: ನೂತನ ಸಂಸತ್ ಭವನಕ್ಕೆ ದಿಢೀರ್ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಪ್ರಧಾನಿ ಮೋದಿ

ಕಾಂಗ್ರೆಸ್ ನಾಯಕ ಶಶಿ ತರೂರ್​ ಅವರು ಹೊಸ ಸಂಸತ್ತಿನ ಕಟ್ಟಡದ ಶಿಲಾನ್ಯಾಸ ಸಮಾರಂಭವನ್ನು ಪ್ರಧಾನ ಮಂತ್ರಿಯವರು ನೆರವೇರಿಸಿದಾಗ ಅದು ವಿಚಿತ್ರವಾಗಿದೆ ಎಂದು ಹೇಳಿದರು. ಭಾರತದ ಸಂವಿಧಾನದ 60 ಮತ್ತು 111 ನೇ ವಿಧಿಗಳು ರಾಷ್ಟ್ರಪತಿಗಳು ಸಂಸತ್ತಿನ ಮುಖ್ಯಸ್ಥರು ಎಂದು ಸ್ಪಷ್ಟಪಡಿಸುತ್ತವೆ. ನಿರ್ಮಾಣ ಪ್ರಾರಂಭವಾದಾಗ ಪ್ರಧಾನ ಮಂತ್ರಿಯವರು ಭೂಮಿ ಪೂಜೆ ಮತ್ತು ಪೂಜೆ ನೆರವೇರಿಸಿದ್ದು ವಿಲಕ್ಷಣವಾಗಿದೆ. ಈಗ ಕಟ್ಟಡ ಉದ್ಘಾಟಿಸಬೇಕಾಗಿರುವುದು ರಾಷ್ಟ್ರಪತಿಗಳೇ ಹೊರತು ಪ್ರಧಾನಿಯಲ್ಲ ಎಂದಿದ್ದಾರೆ. ಇದಕ್ಕೆ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ರಾಷ್ಟ್ರಪತಿಗಳು ಲೋಕಸಭೆ ಅಥವಾ ರಾಜ್ಯಸಭೆಯ ಸದಸ್ಯರಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಹೊಸ ಸಂಸತ್ ಭವನದಲ್ಲಿ ಕೇಂದ್ರ ಬಜೆಟ್ ಮಂಡನೆ ಸಾಧ್ಯತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.