ಚೆನ್ನೈ, ತಮಿಳುನಾಡು : ವಿಧಾನಸಭಾ ಚುನಾವಣೆ ಹಿನ್ನೆಲೆ ತಮಿಳುನಾಡು ರಾಜಕೀಯ ಅಖಾಡ ರಂಗೇರಿದೆ. ಅಲ್ಲಿನ ಜಾಲತಾಣಗಳೂ ಜನರನ್ನು ತಲುಪಲು ವಿವಿಧ ತಂತ್ರಗಳನ್ನು ಹೂಡುತ್ತಿವೆ. ಈಗ ತಮಿಳು ಬಿಜೆಪಿಯ ಅಧಿಕೃತ ಟ್ವಿಟರ್ ಖಾತೆ ಅವಾಂತರ ಸೃಷ್ಟಿಸಿದೆ.
ಕಾಂಗ್ರೆಸ್ ನಾಯಕ ಮತ್ತು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ಸೊಸೆ ಶ್ರೀನಿಧಿ ಕಾರ್ತಿ ಚಿದಂಬರಂ ಅವರ ಭರತನಾಟ್ಯದ ವಿಡಿಯೋದಲ್ಲಿನ ಫೋಟೋವನ್ನ ತಮಿಳುನಾಡು ಬಿಜೆಪಿ ತನ್ನ ಪ್ರಮೋಷನಲ್ ವಿಡಿಯೋದಲ್ಲಿ ಬಳಸಿಕೊಂಡಿದೆ. ಆ ವಿಡಿಯೋವನ್ನು ಆಧರಿಸಿ 'ರಾಜ್ಯದಲ್ಲಿ ಕಮಲ ಅರಳುತ್ತಿದೆ' ಎಂದು ತಲೆಬರಹ ನೀಡಿದೆ.
-
Dear @BJP4TamilNadu, we understand 'consent' is a difficult concept for you to understand, but you cannot use Mrs Srinidhi Karti Chidambaram's image without her permission. All you've done is prove that your campaign is full of lies & propaganda. pic.twitter.com/CTYSK9S9Qw
— Tamil Nadu Congress Committee (@INCTamilNadu) March 30, 2021 " class="align-text-top noRightClick twitterSection" data="
">Dear @BJP4TamilNadu, we understand 'consent' is a difficult concept for you to understand, but you cannot use Mrs Srinidhi Karti Chidambaram's image without her permission. All you've done is prove that your campaign is full of lies & propaganda. pic.twitter.com/CTYSK9S9Qw
— Tamil Nadu Congress Committee (@INCTamilNadu) March 30, 2021Dear @BJP4TamilNadu, we understand 'consent' is a difficult concept for you to understand, but you cannot use Mrs Srinidhi Karti Chidambaram's image without her permission. All you've done is prove that your campaign is full of lies & propaganda. pic.twitter.com/CTYSK9S9Qw
— Tamil Nadu Congress Committee (@INCTamilNadu) March 30, 2021
ಇದಕ್ಕೆ ಟ್ವಿಟರ್ನಲ್ಲೇ ಪ್ರತಿಕ್ರಿಯೆ ನೀಡಿರುವ ಶ್ರೀನಿಧಿ ಚಿದಂಬರಂ, ಬಿಜೆಪಿ ತನ್ನ ಚುನಾವಣೆಯಲ್ಲಿ ಬಳಕೆ ಮಾಡಿಕೊಂಡಿರುವ ಭಾವಚಿತ್ರ ನನ್ನದು ಎಂದಿದ್ದಾರೆ. ತಮಿಳುನಾಡಿನಲ್ಲಿ ಕಮಲ ಅರಳುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇದನ್ನು ಓದಿ: ವಾಂತಿ ಮಾಡಲೆಂದು ಬಸ್ ಕಿಟಕಿಯಿಂದ ತಲೆ ಹೊರಹಾಕಿದ ಬಾಲಕಿ: ಮುಂದಾಗಿದ್ದು ದೊಡ್ಡ ಅನಾಹುತ!
ತಮಿಳುನಾಡು ಕಾಂಗ್ರೆಸ್ ಕೂಡ ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿದೆ. ಪ್ರೀತಿಯ ಬಿಜೆಪಿಗರೇ, ಶ್ರೀನಿಧಿ ಕಾರ್ತಿ ಚಿದಂಬರಂ ಅವರ ಭಾವಚಿತ್ರವನ್ನು ಅವರ ಅನುಮತಿ ಇಲ್ಲದೇ ಬಳಕೆ ಮಾಡಬಾರದಾಗಿತ್ತು. ಬೇರೆಯವರ ಫೋಟೋಗಳನ್ನು ಬಳಸಿಕೊಳ್ಳುವ ಮೂಲಕ ಕೇವಲ ಸುಳ್ಳುಗಳನ್ನೇ ಜನರಿಗೆ ಹೇಳಲು ಮುಂದಾಗಿದ್ದೀರಿ ಎಂದಿದ್ದಾರೆ.
'ಒಪ್ಪಿಗೆ' ಪಡೆದುಕೊಳ್ಳುವುದು ನಿಮಗೆ ಕಷ್ಟ ಎಂಬುದನ್ನು ನಾವು ಅರಿತಿದ್ದೇವೆ ಎಂದು ಪರೋಕ್ಷವಾಗಿ ತಮಿಳುನಾಡಿನಲ್ಲಿ ಬಿಜೆಪಿನ ಗೆಲ್ಲಲು ಸಾಧ್ಯವಿಲ್ಲ ಎಂದಿದೆ. ಸರಣಿ ಟ್ವೀಟ್ಗಳು ಬಿಜೆಪಿ ಟ್ವೀಟ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಟ್ವೀಟ್ ಡಿಲೀಟ್ ಮಾಡಲಾಗಿದೆ.