ಹರಿದ್ವಾರ: ಬಿಜೆಪಿ ವಿರುದ್ಧ ಮತ್ತೊಮ್ಮೆ ತೀವ್ರ ವಾಗ್ದಾಳಿ ನಡೆಸಿದ ಭಾರತೀಯ ಕಿಸಾನ್ ಒಕ್ಕೂಟದ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್, ಚುನಾವಣೆಯ ನಂತರ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಪಕ್ಷವು 'ದಂಗಾ ಮಂತ್ರಿ' (ಹಿಂಸಾಚಾರ ಸಚಿವ) ಹುದ್ದೆಯನ್ನು ಸೃಷ್ಟಿಸಲಿದೆ ಎಂದು ಹೇಳಿದ್ದಾರೆ.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಆ ರೀತಿಯ ಮಂತ್ರಿ ಹುದ್ದೆ ರಚಿಸಲಾಗುವುದು ಎಂಬ ಬಗ್ಗೆ ಈಗಾಗಲೇ ನಾಗ್ಪುರದಿಂದ ಆದೇಶ ಬಂದಿದೆ. ಮುಂಬರುವ ದಿನಗಳಲ್ಲಿ ಅವರು (ದಂಗಾ ಮಂತ್ರಿ) ಸಿಎಂ ಅಡಿಯಲ್ಲಿ ಕೆಲಸ ಮಾಡುತ್ತಾರೆ. ಪರಿಣಾಮ ಗೃಹ ಸಚಿವರನ್ನು ಮೂರನೇ ಸ್ಥಾನಕ್ಕೆ ದೂಡಲಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ : ಪಂಜಾಬ್, ಉತ್ತರಪ್ರದೇಶದಲ್ಲಿ ಚುನಾವಣೆ: ಎಲ್ಲೆಲ್ಲಿ, ಎಷ್ಟು ಮತದಾನ?
ರಾಕೇಶ್ ಟಿಕಾಯತ್ ಅವರು ಚುನಾವಣಾ ಸಂದರ್ಭದಲ್ಲಿ ಸಾರ್ವಜನಿಕರನ್ನು ಎಚ್ಚರಿಸುತ್ತಾ, ಸುಳ್ಳು ಭರವಸೆಗಳಿಗೆ ಸಿಲುಕಿಕೊಳ್ಳಬೇಡಿ ಎಂದು ಹೇಳಿದರು. ಹಿಂದೂ-ಮುಸ್ಲಿಂ, ಜಿನ್ನಾ, ಪಾಕಿಸ್ತಾನ ಎಂಬ ಪದಗಳು ಎರಡೂವರೆ ತಿಂಗಳು ಪೆರೋಲ್ ಮೇಲೆ ಬರುತ್ತವೆ. ಜನರು ಈ ವಿಷಯಗಳಲ್ಲಿ ಹೆಚ್ಚು ಸಿಕ್ಕಿಹಾಕಿಕೊಳ್ಳಬಾರದು. ಅವರು ಉದ್ಯೋಗಾವಕಾಶಗಳು, ಕೊರೊನಾ ಸಮಯದಲ್ಲಿ ಕಾರ್ಮಿಕರ ಸ್ಥಿತಿ, ಆರೋಗ್ಯ ಸೌಲಭ್ಯಗಳಂತಹ ಪ್ರಶ್ನೆಗಳನ್ನು ಅಭ್ಯರ್ಥಿಗಳು ಮತ ಕೇಳಲು ಬಂದಾಗ ಅವರ ಮುಂದೆ ಎತ್ತಬೇಕು ಎಂದು ಸೂಚಿಸಿದರು.