ನವದೆಹಲಿ: ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಸ್ಥಾಪನೆ ದಿನ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಸಿದ್ಧಾಂತ ಬಿಜೆಪಿ-ಆರ್ಎಸ್ಎಸ್ಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದರು.
ಬಿಜೆಪಿ ಮತ್ತು ಆರ್‌ಎಸ್‌ಎಸ್ ನಕಲಿ ಹಿಂದೂಗಳು. ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಧರ್ಮ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಆರ್‌ಎಸ್‌ಎಸ್ ಯಾವುದೇ ಮಹಿಳೆಯನ್ನು ದೇಶದ ಪ್ರಧಾನಿಯನ್ನಾಗಿ ಮಾಡಿಲ್ಲ. ಆದರೆ ಕಾಂಗ್ರೆಸ್ ಆ ಕೆಲಸ ಮಾಡಿದೆ ಎಂದು ಹೇಳಿದರು.
ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಚಿತ್ರವನ್ನು ನೋಡಿದರೆ ಅವರ ಸುತ್ತಲೂ 2-3 ಮಹಿಳೆಯರು ಇರುವುದನ್ನು ನಾವು ಕಾಣುತ್ತೇವೆ. ಆದರೆ ಮೋಹನ್ ಭಾಗವತ್ ಅವರ ಚಿತ್ರದಲ್ಲಿ ಈ ರೀತಿಯಾಗಿ ನೋಡಿದ್ದೀರಾ? ಎಂದು ಪ್ರಶ್ನಿಸಿರುವ ರಾಹುಲ್, ಆರ್‌ಎಸ್‌ಎಸ್ ಸಂಘಟನೆ ಮಹಿಳೆಯರನ್ನು ಶೋಷಣೆ ಮಾಡಿದೆ. ನಮ್ಮ ಸಂಘಟನೆ ಮಹಿಳೆಯರಿಗೆ ವೇದಿಕೆ ಕಲ್ಪಿಸಿದೆ ಎಂದರು.
-
BJP-RSS people say they're Hindu party. In the last 100-200 years, Mahatma Gandhi is the person who understood the Hindu religion & practised it. We recognise it & so do BJP & RSS' people: Congress leader Rahul Gandhi pic.twitter.com/I8kvaHYBnO
— ANI (@ANI) September 15, 2021 " class="align-text-top noRightClick twitterSection" data="
">BJP-RSS people say they're Hindu party. In the last 100-200 years, Mahatma Gandhi is the person who understood the Hindu religion & practised it. We recognise it & so do BJP & RSS' people: Congress leader Rahul Gandhi pic.twitter.com/I8kvaHYBnO
— ANI (@ANI) September 15, 2021BJP-RSS people say they're Hindu party. In the last 100-200 years, Mahatma Gandhi is the person who understood the Hindu religion & practised it. We recognise it & so do BJP & RSS' people: Congress leader Rahul Gandhi pic.twitter.com/I8kvaHYBnO
— ANI (@ANI) September 15, 2021
ಅಖಿಲ ಭಾರತ ಮಹಿಳಾ ಕಾಂಗ್ರೆಸ್ 38ನೇ ಸ್ಥಾಪನಾ ದಿನ ಆಚರಣೆ ಮಾಡುತ್ತಿದ್ದು, ರಾಹುಲ್ ಗಾಂಧಿ ಭಾಗಿಯಾಗಿ ಮಾತನಾಡಿದರು.