ETV Bharat / bharat

ಕೇರಳ ಕದನ ಕಣ: 'ಲವ್ ಜಿಹಾದ್', 'ಶಬರಿಮಲೆ ವಿವಾದ'ವೇ ಬಿಜೆಪಿಗೆ ಚುನಾವಣಾ ಅಸ್ತ್ರ - K Surendran, BJP state president

ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿ ಕೇರಳದಲ್ಲಿ ಎನ್‌ಡಿಎ 'ಲವ್ ಜಿಹಾದ್' ವಿರುದ್ಧ ಕಾನೂನು ತರುವ ಭರವಸೆಯನ್ನು ನೀಡಿದೆ. ಶಬರಿಮಲೆ ದೇವಾಲಯ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ ನೀಡುವ ತೀರ್ಪನ್ನು ಬಿಜೆಪಿ ವಿರೋಧಿಸಿದೆ.

Kerala Assembly elections April 2021
ಚುನಾವಣಾ ಅಸ್ತ್ರ
author img

By

Published : Mar 29, 2021, 5:12 PM IST

ಕಾಸರಗೋಡು (ಕೇರಳ): ವಿಧಾನಸಭೆ ಚುನಾವಣೆಯಲ್ಲಿ ಇತಿಹಾಸ ಬರೆಯಲು ಬಿಜೆಪಿ ಪಣತೊಟ್ಟಿದ್ದು, ಲವ್ ಜಿಹಾದ್ ಹಾಗೂ ಶಬರಿಮಲೆ ವಿವಾದವನ್ನೇ ಪ್ರಚಾರದ ಅಸ್ತ್ರಗಳನ್ನಾಗಿ ಬಳಸಿಕೊಂಡಿದೆ.

ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ (ಎನ್‌ಡಿಎ) ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿ 'ಲವ್ ಜಿಹಾದ್' ವಿರುದ್ಧ ಕಾನೂನು ತರುವ ಭರವಸೆಯನ್ನು ನೀಡಿದೆ. ಶಬರಿಮಲೆ ದೇವಾಲಯ ಪ್ರವೇಶಿಸಲು ಮಹಿಳೆಯರಿಗೆ ಅನುಮತಿ ನೀಡುವ ಸುಪ್ರೀಂ ಕೋರ್ಟ್ ತೀರ್ಪನ್ನು ಬಿಜೆಪಿ ವಿರೋಧಿಸಿದೆ.

ಶಬರಿಮಲೆ ದೇವಾಲಯವಿರುವ ಕೊನ್ನಿ ಕ್ಷೇತ್ರ ಸೇರಿದಂತೆ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರು ಈ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಜನರ ಮನಗೆಲ್ಲಲು ಯತ್ನಿಸುತ್ತಿದ್ದಾರೆ

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶದ ವಿಚಾರದಲ್ಲಿ ಸಿಪಿಎಂ ಮುಖ್ಯಸ್ಥ, ಸಿಎಂ ಪಿಣರಾಯಿ ವಿಜಯನ್​ ಅವರು ಪ್ರಚೋದನಕಾರಿ ನಿಲುವನ್ನು ತೆಗೆದುಕೊಳ್ಳುತ್ತಿದ್ದಾರೆ. 'ಎಡ ಸರ್ಕಾರ' ಅಧಿಕಾರದಲ್ಲಿರುವವರೆಗೂ ಶಬರಿಮಲೆ ಸ್ಥಳ ಸುರಕ್ಷಿತವಲ್ಲ. ಪಿಣರಾಯಿ ವಿಜಯನ್ ಶಬರಿಮಲೆಯ 'ವಿಧ್ವಂಸಕ' ಆಗುತ್ತಿದ್ದಾರೆ ಮತ್ತು ಅವರು ಈ ಪವಿತ್ರ ಸ್ಥಳವನ್ನು ಮತ್ತೊಮ್ಮೆ ಯುದ್ಧಭೂಮಿಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸುರೇಂದ್ರನ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿನ ರಾಜಕೀಯ ಹಿಂಸಾಚಾರಕ್ಕೆ ಬಿಜೆಪಿ ಅಂತ್ಯ ಹಾಡಲಿದೆ: ರಾಜನಾಥ್ ಸಿಂಗ್

ಸಿಎಂ ಪಿಣರಾಯಿ ವಿಜಯನ್ ಸೇರಿದಂತೆ ಸಿಪಿಎಂ ನಾಯಕರು ಲವ್ ಜಿಹಾದ್ ಬಗ್ಗೆ ತಮ್ಮ ನಿಲುವನ್ನು ಬಹಿರಂಗಪಡಿಸಬೇಕು. ಜೋಸ್ ಕೆ ಮಣಿ ಅವರು ಲವ್ ಜಿಹಾದ್ ಸಿದ್ಧಾಂತವನ್ನು ಒಪ್ಪಿದ್ದರು. ರಾಜ್ಯ ಸರ್ಕಾರವು ರಾಷ್ಟ್ರ ವಿರೋಧಿ ಶಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಐದು ವರ್ಷಗಳ ಆಡಳಿತವನ್ನು ಪೂರ್ಣಗೊಳಿಸಿದೆ. ವಂಚಕರ ಗುಂಪಿನೊಂದಿಗೆ ಲವ್ ಜಿಹಾದ್​ ವಿಚಾರವನ್ನು ಚರ್ಚಿಸುವುದು ದೊಡ್ಡ ತಪ್ಪು ಎಂದು ಸುರೇಂದ್ರನ್ ಹೇಳಿದ್ದಾರೆ.

ನಿನ್ನೆಯಷ್ಟೇ ಟಿವಿ ಕಾರ್ಯಕ್ರಮವೊಂದರಲ್ಲಿ ಸಂಸದ ಜೋಸ್ ಕೆ ಮಣಿ ಅವರು ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿತ್ತು. ಲವ್ ಜಿಹಾದ್ ಬಗ್ಗೆ ಕಾಳಜಿ ಇದ್ದರೆ ಅದನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಬೇಕು ಎಂದು ಕ್ರಿಶ್ಚಿಯನ್ ಮತದಾರರನ್ನು ಸೆಳೆಯುವ ಭರದಲ್ಲಿ ಹೇಳಿದ್ದರು. ಇವರ ಈ ಹೇಳಿಕೆ ವಿರುದ್ಧ ಎಡ ಪಕ್ಷದ ನಾಯಕರು ತೀವ್ರವಾಗಿ ಖಂಡಿಸುತ್ತಿದ್ದಂತೆಯೇ ಜೋಸ್ ಹೇಳಿಕೆಯನ್ನು ಇಂದು ಹಿಂಪಡೆದಿದ್ದಾರೆ.

ಕೇರಳದಲ್ಲಿ ಏಪ್ರಿಲ್​ 6ರಂದು ಒಂದೇ ಹಂತದಲ್ಲಿ 140 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. 140ರ ಪೈಕಿ 115 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.