ETV Bharat / bharat

ಗುಜರಾತ್​ನಲ್ಲಿ 2036ರ ಒಲಿಂಪಿಕ್​, 20 ಲಕ್ಷ ಉದ್ಯೋಗ ಸೃಷ್ಟಿ..ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಬ್ರಹ್ಮಾಸ್ತ್ರ

author img

By

Published : Nov 26, 2022, 8:56 PM IST

Updated : Nov 26, 2022, 9:13 PM IST

ಗುಜರಾತ್​ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಮತ್ತು ಆಮ್​ ಆದ್ಮಿ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದ ಬಳಿಕ ಆಡಳಿತಾರೂಢ ಬಿಜೆಪಿ ಇಂದು ಹಲವು ಪ್ರಮುಖ ಭರವಸೆಗಳುಳ್ಳ ಪ್ರಣಾಳಿಕೆಯನ್ನು ಜನರ ಮುಂದಿಟ್ಟಿದೆ.

bjp-promises
ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಬ್ರಹ್ಮಾಸ್ತ್ರ

ಗಾಂಧಿನಗರ(ಗುಜರಾತ್​): ರಾಜ್ಯದಲ್ಲಿ 2036ರ ಒಲಿಂಪಿಕ್ ಕ್ರೀಡಾಕೂಟ ಆಯೋಜನೆ, 20 ಲಕ್ಷ ಉದ್ಯೋಗ ಸೃಷ್ಟಿ, ಏಕರೀತಿಯ ನಾಗರಿಕ ಸಂಹಿತೆ ಜಾರಿ, ಕಾಲೇಜು ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್​ ಸ್ಕೂಟರ್​, ಶಾಲಾ ಮಕ್ಕಳಿಗೆ ಸೈಕಲ್​ ಉಚಿತ..!

ಇವು ಬಿಜೆಪಿ ಪ್ರಣಾಳಿಕೆಯ ಪ್ರಮುಖ ಭರವಸೆಗಳು. ಮುಂದಿನ ತಿಂಗಳು ನಡೆಯುವ ಗುಜರಾತ್​ ವಿಧಾನಸಭೆ ಚುನಾವಣೆ ಹಿನ್ನೆಲೆ ಕೇಸರಿ ಪಡೆ ಬಹುಪ್ರಮುಖವಾದ ಭರವಸೆಗಳನ್ನು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಗಾಂಧಿನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಪ್ರಣಾಳಿಕೆಯನ್ನು ಶನಿವಾರ ಅನಾವರಣ ಮಾಡಿದರು.

ದೇಶ ವಿರೋಧಿ ಚಟುವಟಿಕೆ ನಿಯಂತ್ರಣ ಸೆಲ್​: 2036 ರಲ್ಲಿ ನಡೆಯುವ ವಿಶ್ವದ ಅತಿದೊಡ್ಡ ಕ್ರೀಡಾಕೂಟವಾದ ಒಲಂಪಿಕ್​ ಅನ್ನು ಗುಜರಾತ್​ನಲ್ಲಿ ಆಯೋಜಿಸಲಾಗುವುದು. ಭಯೋತ್ಪಾದಕ ಸಂಘಟನೆಗಳು ಮತ್ತು ಭಾರತ ವಿರೋಧಿ ಚಟುವಟಿಕೆಗಳು, ಸ್ಲೀಪರ್ ಸೆಲ್‌ಗಳನ್ನು ಗುರುತಿಸಿ ಅವುಗಳನ್ನು ಮಟ್ಟಹಾಕಲು "ದೇಶ ವಿರೋಧಿ ಚಟುವಟಿಕೆಗಳ ನಿಯಂತ್ರಣ ಸೆಲ್​" ರಚನೆ ಮಾಡುವುದಾಗಿ ನಡ್ಡಾ ತಿಳಿಸಿದರು.

ವಕ್ಫ್ ಮಂಡಳಿಯ ಆಸ್ತಿಗಳು ಮತ್ತು ಹಣಕಾಸು ವ್ಯವಹಾರದ ಮೇಲೆ ನಿಗಾ, ಮದರಸಾ ಶಿಕ್ಷಣದ ಪಠ್ಯಕ್ರಮ ಮತ್ತು ಮದರಸಾಗಳ ಸಮೀಕ್ಷೆ ನಡೆಸಲು ಕಾರ್ಯಪಡೆ ರಚನೆ. ಧಾರ್ಮಿಕ ಸ್ವಾತಂತ್ರ್ಯದ ಕಾಯ್ದೆಯಡಿ ಬಲವಂತದ ಮತಾಂತರಗಳಿಗೆ ದಂಡದ ಜೊತೆಗೆ ಕಠಿಣ ಜೈಲು ಶಿಕ್ಷೆ ವಿಧಿಸುವುದನ್ನೂ ಪ್ರಣಾಳಿಕೆಯ ಭರವಸೆಯಾಗಿ ನೀಡಲಾಗಿದೆ.

ಪ್ರತಿಭಟನೆ, ರ್ಯಾಲಿ, ದೊಂಬಿ, ಗಲಭೆಯ ವೇಳೆ ಆಗುವ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳ ಹಾನಿಯ ನಷ್ಟವನ್ನು ಭರಿಸಲು ಗುಜರಾತ್ ವಸೂಲಾತಿ ಕಾಯ್ದೆಯನ್ನು ಜಾರಿಗೆ ತರಲಾಗುವುದು. ಪ್ರಮುಖವಾಗಿ ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನಕ್ಕಾಗಿ ಖಚಿತ ಭರವಸೆ ನೀಡಲಾಗಿದೆ.

ಉಚಿತ ಭರವಸೆಗಳು: ಸುಪ್ರೀಂಕೋರ್ಟ್​ ಹೇಳಿಕೆಯ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ರಾಜಕೀಯ ಪಕ್ಷಗಳು, ಸರ್ಕಾರಗಳು ಉಚಿತ ಕೊಡುಗೆಗಳನ್ನು ಘೋಷಿಸುವ ಮುನ್ನ ರಾಜ್ಯದ ಬೊಕ್ಕಸದ ಬಗ್ಗೆ ಯೋಚಿಸಬೇಕು ಎಂದು ಹೇಳಿಕೆ ನೀಡಿದ್ದರು. ಆದರೂ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ ಹಲವು ಬಗೆಯ ಉಚಿತ ಯೋಜನೆಗಳನ್ನು ಘೋಷಿಸಿದೆ.

ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ನ್ಯಾಪ್ಕಿನ್ ವಿತರಣೆ, ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಗರ್ಭಿಣಿಯರಿಗೆ ಉಚಿತವಾಗಿ ಮಾಸಿಕ ಪೌಷ್ಟಿಕಾಂಶಗಳ ಪೂರೈಕೆ, ಪ್ರತಿ ವರ್ಷ 2 ಎಲ್​ಪಿಜಿ ಸಿಲಿಂಡರ್ ಮತ್ತು ಹಿರಿಯ ಮಹಿಳಾ ನಾಗರಿಕರಿಗೆ ಉಚಿತ ಬಸ್ ಪ್ರಯಾಣವನ್ನು ಉಚಿತವಾಗಿ ನೀಡುವ ಆಶ್ವಾಸನೆ ನೀಡಿದೆ.

ಇದಲ್ಲದೇ, ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬದ ಪ್ರತಿಭಾವಂತ ಕಾಲೇಜು ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್​ ಸ್ಕೂಟರ್​ಗಳು, 9-12 ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸೈಕಲ್ ವಿತರಣೆ ಮಾಡುವುದಾಗಿ ಬಿಜೆಪಿ ಹೇಳಿದೆ.

182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಮತದಾನವನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ಡಿಸೆಂಬರ್​ 8 ರಂದು ಮತಎಣಿಕೆ ನಡೆಯಲಿದೆ.

ಓದಿ: ಗುಜರಾತ್​ ವಿಧಾನಸಭೆ ಚುನಾವಣೆ: ರಾಜಕೀಯ ಪಕ್ಷಗಳ ಭರಪೂರ 'ಉಚಿತ' ಭರವಸೆ

Last Updated : Nov 26, 2022, 9:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.