ಮಣಿಪುರ : ಕೆಲವೇ ಗಂಟೆಗಳಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬೀಳಲಿದ್ದು ಮಣಿಪುರದಲ್ಲಿ ಭಾರತೀಯ ಜನತಾ ಪಾರ್ಟಿ ಮುನ್ನಡೆ ಕಾಯ್ದುಕೊಂಡಿದೆ.
ಮತ ಎಣಿಕೆ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಆಡಳಿತಾರೂಢ ಬಿಜೆಪಿ ಇದೀಗ 23 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ - 11 , ಎನ್ಪಿಪಿ - 11 ಮಂದಿ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ಅಚ್ಚರಿ ಅಂದ್ರೆ, ಜೆಡಿಯು ಭಾರೀ ಹಿನ್ನಡೆ ಕಾಯ್ದುಕೊಂಡು ಮುಖಭಂಗ ಅನಭವಿಸುತ್ತಿದೆ.
60 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಮಣಿಪುರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಬಿಸುರುಗೊಂಡಿದ್ದು, ಪೊಲೀಸ್ ಬಿಗಿ ಭದ್ರತೆ ಮತ್ತು ಕೋವಿಡ್-19 ಮಾರ್ಗಸೂಚಿಗನುಗುಣವಾಗಿ ಮತ ಎಣಿಕೆ ನಡೆಸಲಾಗುತ್ತಿದೆ.