ETV Bharat / bharat

ದೇಶದಲ್ಲೇ 'ಭಾರತೀಯ ಜನತಾ ಪಾರ್ಟಿ' ಅತ್ಯಂತ ಶ್ರೀಮಂತ ಪಕ್ಷ.. ಕಾಂಗ್ರೆಸ್​​​ ಆದಾಯ ಎಷ್ಟು?

ಭಾರತೀಯ ಜನತಾ ಪಕ್ಷ(ಬಿಜೆಪಿ) ದೇಶದ ಅತ್ಯಂತ ಶ್ರೀಮಂತ ಪಕ್ಷವಾಗಿದೆ. ಬಹುಜನ ಸಮಾಜ ಪಕ್ಷ(ಬಿಎಸ್​​ಪಿ) ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ 3ನೇ ಸ್ಥಾನದಲ್ಲಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
author img

By

Published : Jan 29, 2022, 11:48 AM IST

ಹೈದರಾಬಾದ್: ಬಿಜೆಪಿ ದೇಶದ ಅತ್ಯಂತ ಶ್ರೀಮಂತ ರಾಜಕೀಯ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ನ ವರದಿ ಪ್ರಕಾರ, 2019-20 ರ ಹಣಕಾಸು ವರ್ಷದಲ್ಲಿ ಬಿಜೆಪಿ 4,847.78 ಕೋಟಿ ರೂ. ಮೌಲ್ಯದ ಆಸ್ತಿ ಘೋಷಿಸಿದೆ. ಇದು ಎಲ್ಲ ರಾಜಕೀಯ ಪಕ್ಷಗಳಿಗಿಂತ ಅತ್ಯಧಿಕವಾಗಿದೆ.

ಬಹುಜನ ಸಮಾಜ ಪಕ್ಷ (ಬಿಎಸ್​ಪಿ) ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ 3ನೇ ಸ್ಥಾನದಲ್ಲಿದೆ. ವರದಿ ಪ್ರಕಾರ, ಬಿಎಸ್​ಪಿ 698.33 ಕೋಟಿ ರೂ. ಕಾಂಗ್ರೆಸ್ 588.16 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿದೆ. 2019-20ರಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ರಾಜಕೀಯ ಪಕ್ಷಗಳ ಆಸ್ತಿ ಮತ್ತು ಹೊಣೆಗಾರಿಕೆಗಳ ವಿಶ್ಲೇಷಣೆ ಆಧಾರದ ಮೇಲೆ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಈ ವರದಿ ಸಿದ್ಧಪಡಿಸಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

4847.78 ಕೋಟಿ ರೂ. ಆಸ್ತಿ ಘೋಷಣೆ ಮಾಡಿರುವ ಬಿಜೆಪಿ: ವರದಿಯ ಪ್ರಕಾರ, 2019-20ರ ಆರ್ಥಿಕ ವರ್ಷದಲ್ಲಿ 7 ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯ 6,988.57 ಕೋಟಿ ರೂ ಆಗಿದ್ದರೆ, 44 ಪ್ರಾದೇಶಿಕ ಪಕ್ಷಗಳು ಘೋಷಿಸಿದ ಒಟ್ಟು ಆಸ್ತಿ, 2,129.38 ಕೋಟಿ ರೂ.ಗಳಾಗಿವೆ. ಏಳು ರಾಷ್ಟ್ರೀಯ ಪಕ್ಷಗಳ ಪೈಕಿ ಬಿಜೆಪಿ 4847.78 ಕೋಟಿ ರೂ.ಆಸ್ತಿಯನ್ನು ಹೊಂದಿದೆ ಎಂದು ವರದಿಯಲ್ಲಿ ಹೇಳಿದೆ.

ಅಲ್ಲದೇ ಉಲ್ಲೇಖಿಸಲಾದ ಹಣಕಾಸು ವರ್ಷದಲ್ಲಿ ಬಿಜೆಪಿಯ ಒಟ್ಟು ಆಸ್ತಿ ಶೇ 69.37 ಆಗಿದ್ದರೆ, ಬಿಎಸ್​ಪಿ ಒಟ್ಟು ಆಸ್ತಿ 698.33 ಕೋಟಿ ರೂ. ಅಂದರೆ ಶೇ. 9.99 ಆಗಿದೆ. ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಕಾಂಗ್ರೆಸ್​​​​ನ ಒಟ್ಟು ಆಸ್ತಿ 588.16 ಕೋಟಿ ರೂ.

ಪ್ರಾದೇಶಿಕ ಪಕ್ಷಗಳ ಪೈಕಿ ಎಸ್​ಪಿ ಶ್ರೀಮಂತ ಪಕ್ಷ: ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಪ್ರಕಾರ, 44 ಪ್ರಾದೇಶಿಕ ಪಕ್ಷಗಳ ಪೈಕಿ, ಅಗ್ರ 10 ಪಕ್ಷಗಳ ಆಸ್ತಿ 2028.715 ಕೋಟಿ ರೂ. ಅಂದರೆ ಘೋಷಿತ ಒಟ್ಟು ಆಸ್ತಿಯಲ್ಲಿ ಶೇ. 95.27 ರಷ್ಟು. 2019-20ರ ಆರ್ಥಿಕ ವರ್ಷದಲ್ಲಿ, ಸಮಾಜವಾದಿ ಪಕ್ಷ ಪ್ರಾದೇಶಿಕ ಪಕ್ಷಗಳಲ್ಲಿ ಗರಿಷ್ಠ ಆಸ್ತಿ 563.47 ಕೋಟಿ (26.46%) ಎಂದು ಘೋಷಿಸಿದೆ. ಇದಾದ ನಂತರ ಟಿಆರ್‌ಎಸ್ 301.47 ಕೋಟಿ ಹಾಗೂ ಎಐಎಡಿಎಂಕೆ 267.61 ಕೋಟಿ ಆಸ್ತಿ ಘೋಷಿಸಿದೆ.

2019-20ರ ಹಣಕಾಸು ವರ್ಷದಲ್ಲಿ ಪ್ರಾದೇಶಿಕ ಪಕ್ಷಗಳು ಘೋಷಿಸಿದ ಒಟ್ಟು ಆಸ್ತಿಯಲ್ಲಿ ಸ್ಥಿರ ಠೇವಣಿ, ಎಫ್‌ಡಿಆರ್‌ಗಳ ಪಾಲು ಗರಿಷ್ಠ 1,639.51 ಕೋಟಿ ರೂ. (76.99%). ಹಣಕಾಸು ವರ್ಷಕ್ಕೆ ಎಫ್‌ಡಿಆರ್, ನಿಶ್ಚಿತ ಠೇವಣಿ ವರ್ಗದ ಅಡಿ, ಬಿಜೆಪಿ ಮತ್ತು ಬಿಎಸ್‌ಪಿ ಕ್ರಮವಾಗಿ 3,253.00 ಕೋಟಿ ರೂ. ಮತ್ತು 618.86 ಕೋಟಿ ರೂ. ಘೋಷಿಸಿವೆ. ಕಾಂಗ್ರೆಸ್ 240.90 ಕೋಟಿ ರೂ. ಎಂದು ಘೋಷಿಸಿದೆ.

ಪ್ರಾದೇಶಿಕ ಪಕ್ಷಗಳ ಆಸ್ತಿ ವಿವರ:

  • ಸಮಾಜವಾದಿ ಪಕ್ಷ ರೂ. 434.219 ಕೋಟಿ
  • ಟಿಆರ್‌ಎಸ್ ರೂ 256.01 ಕೋಟಿ
  • ಎಐಎಡಿಎಂಕೆ ರೂ. 246.90 ಕೋಟಿ
  • ಡಿಎಂಕೆ ರೂ. 162.425 ಕೋಟಿ
  • ಶಿವಸೇನೆ ರೂ. 148.46 ಕೋಟಿ
  • ಬಿಜೆಡಿ ರೂ. 25.18 ಕೋಟಿ

2019-20ರ ಆರ್ಥಿಕ ವರ್ಷದಲ್ಲಿ ಏಳು ರಾಷ್ಟ್ರೀಯ ಮತ್ತು 44 ಪ್ರಾದೇಶಿಕ ಪಕ್ಷಗಳು ಘೋಷಿಸಿದ ಒಟ್ಟು ಹೊಣೆಗಾರಿಕೆ 134.93 ಕೋಟಿ ರೂ. ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಪ್ರಕಾರ, "2019-20ನೇ ಹಣಕಾಸು ವರ್ಷದಲ್ಲಿ ರಾಷ್ಟ್ರೀಯ ಪಕ್ಷಗಳು ಒಟ್ಟು 74.27 ಕೋಟಿ ರೂ.ಗಳ ಹೊಣೆಗಾರಿಕೆಯನ್ನು ಘೋಷಿಸಿವೆ.

ರಾಷ್ಟ್ರೀಯ ಪಕ್ಷಗಳು ಸಾಲದ ಅಡಿಯಲ್ಲಿ 4.26 ಕೋಟಿ ರೂ. ಮತ್ತು ಇತರ ಹೊಣೆಗಾರಿಕೆಗಳ ಅಡಿಯಲ್ಲಿ 70.01 ಕೋಟಿ ರೂ. 2019-20 ರಲ್ಲಿ ಕಾಂಗ್ರೆಸ್ 49.55 ಕೋಟಿ (66.72%) ಗರಿಷ್ಠ ಒಟ್ಟು ಹೊಣೆಗಾರಿಕೆಗಳನ್ನು ಘೋಷಿಸಿವೆ.

2019-20ನೇ ಹಣಕಾಸು ವರ್ಷದಲ್ಲಿ ಪ್ರಾದೇಶಿಕ ಪಕ್ಷಗಳ ಸಾಲ 30.29 ಕೋಟಿ ರೂ ಮತ್ತು ಇತರ ಹೊಣೆಗಾರಿಕೆಗಳ ಅಡಿ 30.37 ಕೋಟಿ ರೂ.ಗಳನ್ನು ಘೋಷಿಸಿವೆ. ಟಿಡಿಪಿ ಗರಿಷ್ಠ ಒಟ್ಟು ಹೊಣೆಗಾರಿಕೆ 30.342 ಕೋಟಿ ರೂ. (50.02%) ಎಂದು ಘೋಷಿಸಿದೆ. ಡಿಎಂಕೆ ರೂ 8.05 ಕೋಟಿ (13.27%) ಹೊಣೆಗಾರಿಕೆಯನ್ನು ಘೋಷಿಸಿಕೊಂಡಿದೆ.

ಇದನ್ನೂ ಓದಿ: Punjab Polls: ಪಂಜಾಜ್ ಚುನಾವಣೆಯಲ್ಲಿ ಇದೊಂದು ಭಾಗದಲ್ಲಿ ಗೆದ್ದರೆ ಅಧಿಕಾರ ಶತಸಿದ್ಧ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.