ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಅವರ ಮಗ ಅಮಿತ್ ಠಾಕ್ರೆ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಪ್ರಸ್ತಾವನೆಯೊಂದನ್ನು ಬಿಜೆಪಿಯು ರಾಜ್ ಠಾಕ್ರೆ ಅವರ ಮುಂದಿಟ್ಟಿದೆ ಎನ್ನಲಾಗಿದೆ. ಆದರೆ ಪ್ರಸಕ್ತ ಅಮಿತ್ ಠಾಕ್ರೆ ಶಾಸಕರಲ್ಲ ಎಂಬುದು ಇಲ್ಲಿ ಗಮನಾರ್ಹ. ಹೀಗಾಗಿ ಬಿಜೆಪಿಯ ಈ ಪ್ರಸ್ತಾವನೆಯನ್ನು ರಾಜಕೀಯ ತಂತ್ರಗಾರಿಕೆ ಎಂದು ಹೇಳಲಾಗಿದೆ.
ಉದ್ಧವ್ ಠಾಕ್ರೆ ಫ್ಯಾಮಿಲಿಗೆ ಶಾಕ್ ನೀಡುವ ಸಲುವಾಗಿಯೇ ಬಿಜೆಪಿ ಇಂಥದೊಂದು ಆಟ ಆಡಿರಬಹುದು. ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಅವರನ್ನು ಭವಿಷ್ಯದ ಶಿವಸೇನೆಯ ನಾಯಕನೆಂದು ಕಳೆದ ಹಲವಾರು ವರ್ಷಗಳಿಂದ ಬಿಂಬಿಸಿ ಪಕ್ಷದಲ್ಲಿ ಮುಂಚೂಣಿಗೆ ತರಲಾಗಿತ್ತು. ಈಗ ಅಮಿತ್ನನ್ನು ಕ್ಯಾಬಿನೆಟ್ಗೆ ಸೇರಿಸಿಕೊಳ್ಳುವ ಪ್ರಯತ್ನಗಳ ಮೂಲಕ ಬಿಜೆಪಿ ನೇರವಾಗಿ ಆದಿತ್ಯಗೆ ಸವಾಲು ಹಾಕುತ್ತಿದೆ. ಆದಿತ್ಯ ಹಾಗೂ ಅಮಿತ್ ಯುವನಾಯಕರೆಂದು ಎರಡೂ ಬಣಗಳು ಹೇಳಿಕೊಂಡು ಬಂದಿವೆ.
ಇಂಥದೊಂದು ಬೆಳವಣಿಗೆ ನಡೆದ ಬಗ್ಗೆ ತನಗೆ ಗೊತ್ತಿಲ್ಲ ಎನ್ನುತ್ತಿದೆ ಎಂಎನ್ಎಸ್ ಪಕ್ಷ. ಈ ಬಗ್ಗೆ ಬಿಜೆಪಿ ನಾಯಕರು ಸಹ ತುಟಿ ಪಿಟಕ್ಕೆನ್ನುತ್ತಿಲ್ಲ. ಆದಾಗ್ಯೂ ರಾಜ್ ಠಾಕ್ರೆ ಬಿಜೆಪಿ ಆಫರ್ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಆದರೆ, ಇದರ ಬಗ್ಗೆ ಕೂಡ ನಿಖರ ಮಾಹಿತಿ ಸಿಕ್ಕಿಲ್ಲ.
ಅಮಿತ್ ಠಾಕ್ರೆಯನ್ನು ಕ್ಯಾಬಿನೆಟ್ಗೆ ಸೇರಿಸಿಕೊಳ್ಳುವ ಗೇಮ್ ಪ್ಲಾನ್ ದೇವೇಂದ್ರ ಫಡಣವೀಸ್ ಅವರದಾಗಿದೆ ಎಂದು ತಿಳಿದು ಬಂದಿದೆ. ಸಿಎಂ ಫಡಣವೀಸ್ ಅವರು ರಾಜ್ ಠಾಕ್ರೆ ಅವರನ್ನು ಬುಧವಾರ ಭೇಟಿ ಆಗಬೇಕಿತ್ತು. ಆದರೆ ಈ ಭೇಟಿಯನ್ನು ಮುಂದೂಡಲಾಗಿದೆ.
ಇದನ್ನು ಓದಿ:ಓ ಪನ್ನೀರಸೆಲ್ವಂ ಪುತ್ರರು ಸೇರಿದಂತೆ 18 ಜನ ಎಐಎಡಿಎಂಕೆಯಿಂದ ವಜಾ