ETV Bharat / bharat

ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್​ಗೆ ಕೊಲೆ ಬೆದರಿಕೆ ಕರೆ : ಆಡಿಯೋ ವೈರಲ್ - ಸಂಸದೆಗೆ ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆ

ಒಂದೂವರೆ ನಿಮಿಷದ ಆಡಿಯೋ ಕ್ಲಿಪ್‌ನಲ್ಲಿ ಪ್ರಜ್ಞಾ ಠಾಕೂರ್ ತಮ್ಮನ್ನು ಏಕೆ ಹತ್ಯೆ ಮಾಡುತ್ತೀರಿ ಎಂದು ಹಲವರು ಬಾರಿ ಕೇಳಿರುವುದು ದಾಖಲಾಗಿದೆ. ಆಗ ಕರೆ ಮಾಡಿದವರು ಇದನ್ನು ನೀವೇ ಶೀಘ್ರದಲ್ಲೇ ತಿಳಿದುಕೊಳ್ಳುತ್ತೀರಿ ಎಂದಿದ್ದಾರೆ..

Pragya Thakur received death threats
ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್​ಗೆ ಕೊಲೆ ಬೆದರಿಕೆ ಕರೆ
author img

By

Published : Jun 18, 2022, 4:19 PM IST

ಭೋಪಾಲ್(ಮಧ್ಯಪ್ರದೇಶ) : ಭೋಪಾಲ್‌ನ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಕೊಲೆ ಬೆದರಿಕೆ ಕರೆ ಬಂದಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹೋದರ ಇಕ್ಬಾಲ್ ಕಸ್ಕರ್ ಸಹಚರನ ಹೆಸರಲ್ಲಿ ಈ ಜೀವ ಬೆದರಿಕೆ ಹಾಕಲಾಗಿದೆ ಎಂದು ಸಂಸದೆ ಹೇಳಿದ್ದಾರೆ.

ಸಂಸದೆ ಠಾಕೂರ್ ಅವರಿಗೆ ಕೊಲೆ ಬೆದರಿಕೆ ಹಾಕಿದ ಅಪರಿಚಿತ ಮಾತನಾಡುತ್ತಿರುವ ಆಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ. ಈ ಸಂಭಾಷಣೆಯ ಸಮಯದಲ್ಲಿ ಕರೆ ಮಾಡಿದ ವ್ಯಕ್ತಿ ಠಾಕೂರ್ ಮುಸ್ಲಿಮರನ್ನು ಟಾರ್ಗೆಟ್​​ ಮಾಡುತ್ತಿದ್ದಾರೆ. ಹೀಗಾಗಿ, ಹತ್ಯೆ ಮಾಡುವುದಾಗಿ ಹೇಳಿದ್ದಾರೆ.

ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್​ಗೆ ಕೊಲೆ ಬೆದರಿಕೆ ಕರೆ..

ಒಂದೂವರೆ ನಿಮಿಷದ ಈ ಆಡಿಯೋ ಕ್ಲಿಪ್‌ನಲ್ಲಿ ಪ್ರಜ್ಞಾ ಠಾಕೂರ್ ತಮ್ಮನ್ನು ಏಕೆ ಹತ್ಯೆ ಮಾಡುತ್ತೀರಿ ಎಂದು ಹಲವಾರು ಬಾರಿ ಕೇಳಿರುವುದು ದಾಖಲಾಗಿದೆ. 'ಸರಿ, ನೀವು ನನ್ನನ್ನು ಕೊಲ್ಲಲು ಬಯಸುತ್ತೀರಿ. ಆದರೆ, ಏಕೆ ಎಂಬುವುದನ್ನು ನನಗೆ ತಿಳಿಸಿ ಎಂದು ಠಾಕೂರ್ ಹೇಳಿದ್ದಾರೆ.

ಆಗ ಕರೆ ಮಾಡಿದವರು ಇದನ್ನು ನೀವೇ ಶೀಘ್ರದಲ್ಲೇ ತಿಳಿದುಕೊಳ್ಳುತ್ತೀರಿ ಎಂದಿದ್ದಾರೆ. ಈ ವೇಳೆ ಠಾಕೂರ್ ಏಕೆ ಕೊಲ್ಲುತ್ತಾರೆ ಎಂಬ ಪ್ರಶ್ನೆಯನ್ನು ಮತ್ತೆ ಕೇಳುತ್ತಾರೆ. ಅದಕ್ಕೆ ನಿಮಗೆ ನಾನು ಮುಂಚಿತವಾಗಿ ತಿಳಿಸುತ್ತಿದ್ದೇನೆ ಮತ್ತು ಶೀಘ್ರದಲ್ಲೇ ಅದು ನಿಮಗೆ ತಿಳಿಯುತ್ತದೆ. ಅಲ್ಲದೇ, ನಾವು ನಿನ್ನನ್ನು ಬಿಡುವುದಿಲ್ಲ. ಕೊಲೆ ಮಾಡುವಾಗ ಆ ವ್ಯಕ್ತಿ ಏಕೆ ಎಂಬುವುದನ್ನು ಹೇಳುತ್ತಾನೆ ಎಂದಿದ್ದಾರೆ. ಇದರಿಂದ ನಿಮಗೆ ಧೈರ್ಯವಿದ್ದರೆ ಬನ್ನಿ, ನನ್ನನ್ನು ಕೊಂದು ಬಿಡಿ ಎಂದು ಸಂಸದೆ ಠಾಕೂರ್ ಹೇಳಿದ್ದಾರೆ.

ಸದ್ಯ ಜೀವ ಬೆದರಿಕೆ ಕರೆ ಸಂಬಂಧ ಅಪರಿಚಿತರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಸ್ಯಾಂಡಲ್​ವುಡ್​ ಯುವ ನಟನ ಬರ್ಬರ ಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.