ETV Bharat / bharat

ಪ್ರಧಾನಿ ವಿರುದ್ಧ ಗಂಭೀರ ಆರೋಪ: ರಾಹುಲ್​ ಗಾಂಧಿಗೆ ಬಿಜೆಪಿಯಿಂದ ಹಕ್ಕುಚ್ಯುತಿ ನೋಟಿಸ್ - ರಾಹುಲ್​ ಗಾಂಧಿ ವಿರುದ್ಧ ಹಕ್ಕುಚ್ಯುತಿ ನೋಟಿಸ್​​ ಜಾರಿ

ಪ್ರಧಾನಿ ವಿರುದ್ಧ ರಾಹುಲ್​ ಗಂಭೀರ ಆರೋಪ- ಆರೋಪ ಸಾಬೀತಿಗೆ ಸೂಚಿಸಿ ರಾಹುಲ್​ಗೆ ಬಿಜೆಪಿ ನೋಟಿಸ್​- ಬಿಜೆಪಿ ಸಂಸದ ನಿಶಿಕಾಂತ್ ದುಬೆಯಿಂದ ನೋಟಿಸ್​- ರಾಹುಲ್​ ಗಾಂಧಿ ವಿರುದ್ಧ ಹಕ್ಕುಚ್ಯುತಿ ನೋಟಿಸ್​​ ಜಾರಿ

privilege notice against Congress MP Rahul Gandhi
ರಾಹುಲ್​ ಗಾಂಧಿಗೆ ಬಿಜೆಪಿಯಿಂದ ಹಕ್ಕುಚ್ಯುತಿ ನೋಟಿಸ್
author img

By

Published : Feb 8, 2023, 1:38 PM IST

ನವದೆಹಲಿ: ಗೌತಮ್​ ಅದಾನಿ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿ ಬೆಳೆಯುವುದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲವಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಿರುದ್ಧ ಬಿಜೆಪಿ ಮುಗಿಬಿದ್ದಿದೆ. ಆಧಾರರಹಿತ, ಪರಿಶೀಲಿಸದೇ ದೋಷಾರೋಪ, ಮಾನನಷ್ಟ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದೆ. ಅಲ್ಲದೇ, ಕಲಾಪಗಳ ನಿಯಮಾನುಸಾರ ಅವರು ದಾಖಲೆ ನೀಡದೇ ಆರೋಪಿಸಿದ್ದಕ್ಕೆ ರಾಹುಲ್​ ಹೇಳಿಕೆ ವಜಾಗೊಳಿಸಿ, ಹಕ್ಕುಚ್ಯುತಿ ನೋಟಿಸ್​​ ಜಾರಿ ಮಾಡಲಾಗಿದೆ.

ಲೋಕಸಭೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಆಧಾರರಹಿತ ದೋಷಾರೋಪಣೆ ಮತ್ತು ಮಾನನಷ್ಟ ಹೇಳಿಕೆ ನೀಡಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ವಿಶೇಷ ಹಕ್ಕು ನೋಟಿಸ್ ನೀಡಿದ್ದಾರೆ. ಸಂಸತ್ತಿನ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಸಂಸದ, ರಾಹುಲ್ ಗಾಂಧಿ ಅವರು ಪ್ರಧಾನಿ ವಿರುದ್ಧ ಮಾಡಿರುವ ಆರೋಪಗಳಿಗೆ ಸಾಕ್ಷ್ಯಗಳನ್ನು ನೀಡಬೇಕು. ಸಂಸದರಿಗೆ ಹಕ್ಕುಗಳಿದ್ದಂತೆ, ಕರ್ತವ್ಯಗಳಿರುತ್ತವೆ. ನಾವು ಟೀಕಿಸುವ ಸದನದಲ್ಲಿ ಇಲ್ಲದಿದ್ದರೆ ಅವರ ಹೆಸರನ್ನು ತೆಗೆದುಕೊಳ್ಳಬಾರದು ಎಂದು ಹೇಳಿದರು.

ಆರೋಪ ಸಾಬೀತು ಮಾಡಲು ಆಗ್ರಹ: ಈಗ ರಾಹುಲ್ ಗಾಂಧಿ ಎಲ್ಲಾ ಸಾಕ್ಷ್ಯಗಳನ್ನು ನೀಡಬೇಕು. ಇಲ್ಲದಿದ್ದರೆ ವಿಶೇಷಾಧಿಕಾರದ ನೋಟಿಸ್ ಅಡಿಯಲ್ಲಿ ಅವರು ತಮ್ಮ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ. ಮೋದಿ ಪ್ರಧಾನಿಯಾದ ನಂತರ ಅದಾನಿ ಅವರ ವಿಮಾನವನ್ನು ಬಳಸಲೇ ಇಲ್ಲ. ಯಾರಾದರೂ ಅದನ್ನು ಸಾಬೀತುಪಡಿಸಿದರೆ ನಾನು ನನ್ನ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ಪ್ರಧಾನಿ ವಿರುದ್ಧ ಆರೋಪಿಸುತ್ತಿರುವ ಕುಟುಂಬವು ಯಾವ ಉದ್ಯಮಿಯಿಂದ, ಯಾವ ರೀತಿಯ ಪ್ರಯೋಜನಗಳನ್ನು ಪಡೆದುಕೊಂಡಿದೆ ಎಂಬುದು ನನಗೆ ತಿಳಿದಿದೆ ಎಂದು ಬಿಜೆಪಿ ಸಂಸದ ಹೇಳಿದರು.

ಬುಡಕಟ್ಟು ಸಮುದಾಯದ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಮಾಡಿದ ಮೊದಲ ಭಾಷಣದ ಬಗ್ಗೆ ಚರ್ಚೆ ನಡೆಸದೆ, ಪ್ರಧಾನಿಗಳ ವಿರುದ್ಧ ವೈಯಕ್ತಿಕ ದಾಳಿ ನಡೆಸಲಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಕೆಲವೇ ಜನರಿಗೆ ಲೈಸೆನ್ಸ್​ ಪರ್ಮಿಟ್​ ಸಿಕ್ಕಿದೆ. ಅವರೆಲ್ಲರೂ ಶ್ರೀಮಂತರಾಗಿದ್ದಾರೆ ಎಂದು ಆರೋಪಿಸಿದರು.

ರಾಹುಲ್​ ವಿರುದ್ಧ ಕ್ರಮಕ್ಕೆ ಆಗ್ರಹ: ನಿಶಿಕಾಂತ್ ದುಬೆ ಅವರು ತಮ್ಮ ವಿಶೇಷಾಧಿಕಾರದ ನೋಟಿಸ್‌ನಲ್ಲಿ ಪ್ರಧಾನಿ ವಿರುದ್ಧ ಅವಹೇಳನಕಾರಿ ಮತ್ತು ಮಾನನಷ್ಟ ಹೇಳಿಕೆಗಳನ್ನು ನೀಡಿದ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಅಧ್ಯಕ್ಷರ ಭಾಷಣಕ್ಕೆ ಕೃತಜ್ಞತೆ ಸಲ್ಲಿಸುವ ಸಂದರ್ಭದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಕಾಂಗ್ರೆಸ್ ನಾಯಕ ಗಂಭೀರ ಆರೋಪಗಳನ್ನು ಮಾಡಿದ್ದು ನಿಯಮಬಾಹಿರ ಎಂದು ಬಿಜೆಪಿ ಸಂಸದ ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ತಾವು ನೀಡಿದ ಹೇಳಿಕೆಗಳನ್ನು ರುಜುವಾತುಪಡಿಸಲು ಯಾವುದೇ ಸಾಕ್ಷ್ಯಗಳನ್ನು ನೀಡಿಲ್ಲ. ಪ್ರಧಾನಿ ವಿರುದ್ಧ ಆಧಾರರಹಿತ ಆರೋಪಗಳನ್ನು ಹೊರಿಸುವ ಮೂಲಕ ಲೋಕಸಭೆಯನ್ನು ದಾರಿ ತಪ್ಪಿಸಿದ್ದಾರೆ. ಪ್ರಧಾನಿ ವಿರುದ್ಧದ ಆರೋಪಗಳಿಗೆ ದೃಢೀಕೃತ ದಾಖಲೆಗಳನ್ನು ಸದನದ ಮುಂದೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ರಾಹುಲ್​ ವಿರುದ್ಧ ಪ್ರಲ್ಹಾದ್​ ಜೋಶಿ ಕಿಡಿ: ಇನ್ನೊಂದೆಡೆ ಸದನದಲ್ಲಿ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್​ ಜೋಶಿ ಅವರು, ಸಂಸತ್ತಿನ ನಿಯಮಗಳ ಪ್ರಕಾರ ಯಾವುದೇ ವ್ಯಕ್ತಿಯ ವಿರುದ್ಧ ಆರೋಪ ಮಾಡುವ ಮೊದಲು ಅವರಿಗೆ ಪೂರ್ವ ಸೂಚನೆ ನೀಡಬೇಕು. ಆದರೆ, ರಾಹುಲ್​ ಗಾಂಧಿ ಅವರು ಸದನದಲ್ಲಿ ಇರದ ವ್ಯಕ್ತಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದು ನಿಯಮಬಾಹಿರ. ಆಧಾರ ರಹಿತ ಆರೋಪ ಇದಾಗಿದ್ದು, ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದು ಹೇಳಿದರು.

ಓದಿ: ಇದು ಮೋದಿ-ಅದಾನಿ ಸಂಬಂಧ ಎಂದು ಫೋಟೋ ತೋರಿಸಿದ ರಾಹುಲ್​: ಸ್ಪೀಕರ್ ಎಚ್ಚರಿಕೆ ಹೀಗಿತ್ತು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.