ಅಮರಾವತಿ(ಮಹಾರಾಷ್ಟ್ರ): ಅನ್ಯ ಧರ್ಮದ ಯುವಕನೊಬ್ಬ ಯುವತಿಯನ್ನು ಅಪಹರಿಸಿ ಲವ್ ಜಿಹಾದ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತು ಬಿಜೆಪಿ ಸಂಸದೆ ನವನೀತ್ ರಾಣಾ ಅವರ ಮಧ್ಯೆ ಭಾರೀ ವಾಗ್ವಾದ ನಡೆದಿದೆ. ಯುವಕನನ್ನು ಬಂಧಿಸಿದ್ದರೂ, ಯುವತಿ ಪತ್ತೆಯಾಗದ್ದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸ್ ಠಾಣೆಯಲ್ಲಿ ವಾಗ್ವಾದಕ್ಕೆ ಕಾರಣವಾಗಿದೆ.
ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿಲು ಸಂಸದೆ ರಾಣಾ ಅವರು ಯುವತಿಯ ಕುಟುಂಬಸ್ಥರೊಂದಿಗೆ ಪೊಲೀಸ್ ಠಾಣೆಗೆ ಹೋಗಿದ್ದರು. ಯುವಕ-ಯುವತಿಯನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಿಕೊಳ್ಳಲಾಗಿದೆ ಎಂದು ಪೋಷಕರು ತಿಳಿಸಿದ್ದಾರೆ. ಯುವತಿಯನ್ನು ಕೂಡಲೇ ಕುಟುಂಬಸ್ಥರಿಗೆ ಒಪ್ಪಿಸಿ ಎಂದು ನವನೀತ್ ರಾಣಾ ಒತ್ತಾಯಿಸಿದರು.
ಅಲ್ಲದೇ, ಈ ಬಗ್ಗೆ ಕರೆ ಮಾಡಿ ಮಾಹಿತಿ ಕೇಳಿದಾಗ ನನ್ನ ಮಾತನ್ನು ರೆಕಾರ್ಡ್ ಮಾಡಲಾಗಿದೆ. ರೆಕಾರ್ಡ್ ಮಾಡುವ ಅಗತ್ಯವೇನಿತ್ತು. ಅಲ್ಲದೇ, ಆ ಅಧಿಕಾರವನ್ನು ನಿಮಗೆ ಯಾರು ನೀಡಿದರು ಎಂದೆಲ್ಲಾ ಸಂಸದೆ ದಬಾಯಿಸಿದ್ದಾರೆ.
ಇದು ಪೊಲೀಸ್ ಮತ್ತು ಸಂಸದರ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿದೆ. ಬಳಿಕ ಪೊಲೀಸರ ವಿರುದ್ಧ ಹರಿಹಾಯ್ದ ಸಂಸದೆ ಅಮರಾವತಿ ಲವ್ ಜಿಹಾದ್ ಪ್ರಕರಣದಲ್ಲಿ ಯುವಕನನ್ನು ಬಂಧಿಸಲಾಗಿದೆ. ಯುವತಿ ಇನ್ನೂ ಪತ್ತೆಯಾಗಿಲ್ಲ. ಶೀಘ್ರವೇ ಅಕೆಯನ್ನು ಕುಟುಂಬಸ್ಥರ ಮುಂದೆ ಹಾಜರುಪಡಿಸಿ. ಯುವಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.