ಡೆಹ್ರಾಡೂನ್(ಉತ್ತರಾಖಂಡ): ಕಳೆದ ನಾಲ್ಕು ತಿಂಗಳ ಹಿಂದೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದ ತಿರಥ್ ಸಿಂಗ್ ರಾವತ್ ನಿನ್ನೆ ದಿಢೀರ್ ಆಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ತೆರವಾಗಿದ್ದ ಸ್ಥಾನಕ್ಕೆ ಇದೀಗ ಹೊಸ ಸಾರಥಿ ಆಯ್ಕೆ ಮಾಡಲಾಗಿದೆ.
-
Bharatiya Janta Party names Pushkar Singh Dhami as the next Uttarakhand Chief Minister pic.twitter.com/aqAHUNQB5u
— ANI (@ANI) July 3, 2021 " class="align-text-top noRightClick twitterSection" data="
">Bharatiya Janta Party names Pushkar Singh Dhami as the next Uttarakhand Chief Minister pic.twitter.com/aqAHUNQB5u
— ANI (@ANI) July 3, 2021Bharatiya Janta Party names Pushkar Singh Dhami as the next Uttarakhand Chief Minister pic.twitter.com/aqAHUNQB5u
— ANI (@ANI) July 3, 2021
ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಮಿ ಆಯ್ಕೆಯಾಗಿದ್ದು, ಇಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಹೆಸರು ಅಂತಿಮಗೊಳಿಸಲಾಗಿದೆ. ಕಳೆದ ಮಾರ್ಚ್ 10ರಂದು ಮುಖ್ಯಮಂತ್ರಿಯಾಗಿ ತಿರಥ್ ಸಿಂಗ್ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಇದಾದ ಬಳಿಕ ರಾಜ್ಯ ಬಿಜೆಪಿಯಲ್ಲಿ ನಡೆದ ಕೆಲವೊಂದು ಭಿನ್ನಾಭಿಪ್ರಾಯಗಳಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿರಿ: Uttarakhand Politics: ವರ್ಷದಲ್ಲೇ ಮೂವರು ಸಿಎಂ ಕಂಡ ಉತ್ತರಾಖಂಡ!
ಉತ್ತರಾಖಂಡ ಬಿಜೆಪಿಯಲ್ಲಿ ಕಳೆದ ಕೆಲ ತಿಂಗಳಿಂದ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆಯುತ್ತಿರುವ ಕಾರಣ ಕಳೆದ ನಾಲ್ಕೇ ತಿಂಗಳಲ್ಲಿ ಮೂರನೇ ಮುಖ್ಯಮಂತ್ರಿಯನ್ನ ಕಂಡಿದೆ. ಸದ್ಯ ಉತ್ತರಾಖಂಡದ 11ನೇ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಮಿ ಆಯ್ಕೆಯಾಗಿದ್ದಾರೆ.
-
Pushkar Singh Dhami appointed as Uttarakhand BJP legislature party leader pic.twitter.com/X7fgZaBadb
— ANI (@ANI) July 3, 2021 " class="align-text-top noRightClick twitterSection" data="
">Pushkar Singh Dhami appointed as Uttarakhand BJP legislature party leader pic.twitter.com/X7fgZaBadb
— ANI (@ANI) July 3, 2021Pushkar Singh Dhami appointed as Uttarakhand BJP legislature party leader pic.twitter.com/X7fgZaBadb
— ANI (@ANI) July 3, 2021
ಸಂಸದರಾಗಿದ್ದ ತಿರಥ್ ಸಿಂಗ್ ರಾವತ್, ಸೆಪ್ಟೆಂಬರ್ 10ರೊಳಗಾಗೊ ಶಾಸಕರಾಗಿ ಆಯ್ಕೆಯಾಗಬೇಕಾಗಿತ್ತು. ಆದರೆ ಅದು ಸಾಧ್ಯವಾಗದಿರುವ ಕಾರಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ಉತ್ತರಾಖಂಡ ಬಿಜೆಪಿಯ 57 ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು. ಕೇಂದ್ರದಿಂದ ವೀಕ್ಷಕರಾಗಿ ನರೇಂದ್ರ ಸಿಂಗ್ ತೋಮರ್ ಆಗಮಿಸಿದ್ದರು. ಈ ಸಭೆಯಲ್ಲಿ ಪುಷ್ಕರ್ ಸಿಂಗ್ ಧಮಿ ಅವರನ್ನ ಸಿಎಂ ಅಭ್ಯರ್ಥಿಯಾಗಿ ನೇಮಕ ಮಾಡಲಾಗಿದೆ. 45 ವರ್ಷದ ಧಮಿ ಖಾತಿಮಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಎರಡನೇ ಬಾರಿಗೆ ಶಾಸಕರಾಗಿದ್ದಾರೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಆಪ್ತರೆಂದು ಗುರುತಿಸಿಕೊಂಡಿದ್ದಾರೆ.
ಇಂದು ಸಂಜೆ ನಡೆಯಲಿರುವ ಸರಳ ಕಾರ್ಯಕ್ರಮದಲ್ಲಿ ಉತ್ತರಾಖಂಡ್ನ 11ನೇ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ. ಇನ್ನು ಉತ್ತರಾಖಂಡ್ ವಿಧಾನಸಭೆಗೆ ಒಂದೇ ವರ್ಷದಲ್ಲಿ ಚುನಾವಣೆ ನಡೆಯಲಿದೆ.