ETV Bharat / bharat

ಕೇರಳದಲ್ಲಿ ಬಿಜೆಪಿ ಬಹುಮತ ಗಳಿಸುವ ನಿರೀಕ್ಷೆಯಿದೆ: ಮೆಟ್ರೊಮ್ಯಾನ್​  ಇ. ಶ್ರೀಧರನ್ ವಿಶ್ವಾಸ - ತಂತ್ರಜ್ಞ ಮೆಟ್ರೊಮನ್ ಇ. ಶ್ರೀಧರನ್

ಬಿಜೆಪಿ ಕೇರಳದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಗಳಿವೆ. ಇದು ಸಂಪೂರ್ಣ ಬಹುಮತವಾಗಿರಬಹುದು ಅಥವಾ ವಿಧಾನಸಭೆ ಪ್ರವೇಶಿಸಬಹುದಾದ ಸಂಖ್ಯೆಯನ್ನು ಹೊಂದಿರಬಹುದು. ಈ ಮೂಲಕ ಬಿಜೆಪಿ ಕಿಂಗ್ ಮೇಕರ್ ಆಗುತ್ತದೆ ಎಂದು ಮೆಟ್ರೊಮ್ಯಾನ್​ ಇ. ಶ್ರೀಧರನ್ ಹೇಳಿದರು.

Metroman E Sreedharan
ಮೆಟ್ರೊಮನ್ ಇ. ಶ್ರೀಧರನ್
author img

By

Published : Mar 25, 2021, 8:02 AM IST

ಪಾಲಕ್ಕಾಡ್ (ಕೇರಳ): ಮೆಟ್ರೊ ರೈಲು ಸೇರಿದಂತೆ ಭಾರತದಾದ್ಯಂತ ಹಲವಾರು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದ ತಂತ್ರಜ್ಞ ಮೆಟ್ರೊಮ್ಯಾನ್​ ಇ. ಶ್ರೀಧರನ್, ಕೇರಳದಲ್ಲಿ ಭಾರತೀಯ ಜನತಾ ಪಕ್ಷದ ಭವಿಷ್ಯ ತಿರುಗಿಸುವ ವಿಶ್ವಾಸ ಹೊಂದಿದ್ದಾರೆ. "ಒಂದೋ ಪಕ್ಷವು ರಾಜ್ಯದಲ್ಲಿ ಕಿಂಗ್ ಮೇಕರ್ ಆಗಿ ವಿಕಸನಗೊಳ್ಳಲು ಪೂರ್ಣ ಬಹುಮತ ಸಿಗಬಹುದು. ಇಲ್ಲವೇ ಸಾಕಷ್ಟು ಸಂಖ್ಯೆಯ ಸ್ಥಾನಗಳಲ್ಲಿ ಜಯಗಳಿಸಬಹುದು " ಎಂದಿದ್ದಾರೆ.

ಕೇರಳ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಮಾಧ್ಯಮದೊಂದಿದೆ ಮಾತನಾಡಿದ ಅವರು ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರವನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. "ಬಿಜೆಪಿ ಕೇರಳದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಗಳಿವೆ ಎಂದು ನಾನು ಭಾವಿಸುತ್ತೇನೆ. ಇದು ಸಂಪೂರ್ಣ ಬಹುಮತವಾಗಿರಬಹುದು ಅಥವಾ ವಿಧಾನಸಭೆ ಪ್ರವೇಶಿಸಬಹುದಾದ ಸಂಖ್ಯೆಯನ್ನು ಹೊಂದಿರಬಹುದು. ಈ ಮೂಲಕ ಬಿಜೆಪಿ ಕಿಂಗ್ ಮೇಕರ್ ಆಗುತ್ತದೆ" ಎಂದು ಶ್ರೀಧರನ್ ಹೇಳಿದರು.

ಇದನ್ನು ಓದಿ: ವಾರಾಣಾಸಿಯಲ್ಲಿ ‘ರಂಗ್​ಭರಿ ಏಕಾದಶಿ’: ಇದು ಹೋಳಿಯ ಪ್ರಾರಂಭದ ಸಂಕೇತ

"ಇದು ಲೆಫ್ಟ್​ ಡೆಮಾಕ್ರಟಿಕ್ ಫ್ರಂಟ್ ಮತ್ತು ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸರ್ಕಾರಗಳಿಂದ ಹೊರಗುಳಿದ ಜನರ ಸ್ಥೈರ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ ಎಂದು ನಾನು ಭಾವಿಸುತ್ತೇನೆ. ಜನರು ಬಿಜೆಪಿಗೆ ಮತ ಹಾಕುತ್ತಾರೆ" ಎಂದು ಅವರು ಹೇಳಿದರು.

140 ಸದಸ್ಯರ ಕೇರಳ ವಿಧಾನಸಭೆಯ ಚುನಾವಣೆ ಏಪ್ರಿಲ್ 6 ರಂದು ನಡೆಯಲಿದೆ. ಅಸೆಂಬ್ಲಿ ಪೋಲ್ 2021ಕ್ಕೆ ಕೇರಳದ ಮತಗಟ್ಟೆಗಳ ಸಂಖ್ಯೆಯನ್ನು 21,498 ರಿಂದ 40,771 ಕ್ಕೆ ವಿಸ್ತರಿಸಲಾಗಿದೆ. ಮತ ಎಣಿಕೆ ಮೇ 2 ರಂದು ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.