ETV Bharat / bharat

ರಾಜಸ್ಥಾನ ಚುನಾವಣೆ: ಕಾಂಗ್ರೆಸ್​ ಸರ್ಕಾರದ ಭ್ರಷ್ಟಾಚಾರಗಳ ತನಿಖೆಗೆ ಪ್ರಣಾಳಿಕೆಯಲ್ಲಿ ಭರವಸೆ

ರಾಜಸ್ಥಾನ ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿತು.

ರಾಜಸ್ಥಾನ ಚುನಾವಣೆ
ರಾಜಸ್ಥಾನ ಚುನಾವಣೆ
author img

By ETV Bharat Karnataka Team

Published : Nov 16, 2023, 9:54 PM IST

ಜೈಪುರ (ರಾಜಸ್ಥಾನ) : ಕಾಂಗ್ರೆಸ್ ಸೋಲಿಸಿ ಅಧಿಕಾರ ಹಿಡಿಯಲು ತಂತ್ರ ಹೂಡಿರುವ ಬಿಜೆಪಿ ರಾಜಸ್ಥಾನ ಜನತೆಗೆ ತನ್ನ ಭರವಸೆಗಳ ಪ್ರಣಾಳಿಕೆಯನ್ನು ಇಂದು ಬಿಡುಗಡೆ ಮಾಡಿತು. ಯಾವುದೇ ದೊಡ್ಡ ಉಚಿತಗಳನ್ನು ಘೋಷಿಸದೇ ಕಿಸಾನ್​ ಸಮ್ಮಾನ್​ ಯೋಜನೆಯ ಹಣ ದುಪ್ಪಟ್ಟು, ಹೆಣ್ಣು ಮಗು ಜನಿಸಿದಲ್ಲಿ ಉಳಿತಾಯ ಬಾಂಡ್​, ಶಾಲಾ ಮಕ್ಕಳಿಗೆ ವಾರ್ಷಿಕ 1200 ಹಣ, ನೇಮಕಾತಿ ಪೇಪರ್​ ಸೋರಿಕೆ ಪ್ರಕರಣದ ತನಿಖೆ ನಡೆಸುವ ಆಶ್ವಾಸನೆಗಳನ್ನು ನೀಡಲಾಗಿದೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಹೆಚ್ಚಳ: ಈ ಯೋಜನೆಯಡಿ ರೈತರಿಗೆ ನೀಡುವ ಆರ್ಥಿಕ ಸಹಾಯವನ್ನು ವರ್ಷಕ್ಕೆ 12,000 ರೂಪಾಯಿಗೆ ಹೆಚ್ಚಿಸಲು ಪಕ್ಷವು ಆಶ್ವಾಸನೆ ನೀಡಿದೆ. ಅಂದರೆ ಈಗಿರುವ 6 ಸಾವಿರ ರೂಪಾಯಿಗೆ ಇನ್ನೂ 6 ಸಾವಿರ ಹೆಚ್ಚುವರಿಯಾಗಿ ನೀಡಲಾಗುವುದು ಎಂದು ಪಕ್ಷ ಹೇಳಿದೆ.

  • उज्ज्वला धारक को हम 450 प्रति सिलेंडर सब्सिडी देंगे।

    मातृत्व वंदना योजना के तहत महिलाओं को दिए जा रहे 5,000 रुपये को बढ़ाकर 8,000 किया जाएगा।

    - श्री @JPNadda, राष्ट्रीय अध्यक्ष, भाजपा#AgraniRajasthanKaSankalp pic.twitter.com/VJbeAl00iI

    — BJP Rajasthan (@BJP4Rajasthan) November 16, 2023 " class="align-text-top noRightClick twitterSection" data=" ">

ಉಳಿತಾಯ ಬಾಂಡ್​ ಯೋಜನೆ: ಲಾಹೋ ಪ್ರೋತ್ಸಾಹ ಯೋಜನೆ ಹೆಸರಿನಲ್ಲಿ ಬಡ ಕುಟುಂಬದಲ್ಲಿ ಹೆಣ್ಣುಮಕ್ಕಳು ಜನಿಸಿದಲ್ಲಿ ಅವರಿಗೆ ಉಳಿತಾಯದ ಬಾಂಡ್ ಅನ್ನು ಒದಗಿಸಲಾಗುವುದು. ಬಾಂಡ್ ಮಗುವಿನ 6ನೇ ತರಗತಿಯಲ್ಲಿ 26,000 ರೂ., 9ನೇ ತರಗತಿಯಲ್ಲಿ 18,000 ರೂ., 10ನೇ ತರಗತಿಯಲ್ಲಿ 10,000ರೂ., 11ನೇ ತರಗತಿಯಲ್ಲಿ 12,000 ರೂ., 12ನೇ ತರಗತಿಯಲ್ಲಿ 14,000 ರೂ., ವೃತ್ತಿ ಕೋರ್ಸ್​ಗಳ ಮೊದಲ ಮತ್ತು ಕೊನೆಯ ವರ್ಷದಲ್ಲಿ 50,000 ರೂ. ನೀಡುತ್ತದೆ. 21ನೇ ವಯಸ್ಸಿನಲ್ಲಿ ಒಟ್ಟು 1 ಲಕ್ಷ ರೂ. ಹಣ ಸಿಗಲಿದೆ.

ನೇರ ಲಾಭ ವರ್ಗಾವಣೆ: ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ನೆರವಾಗಲು ಶಾಲಾ ಬ್ಯಾಗ್‌ಗಳು, ಪುಸ್ತಕಗಳು ಮತ್ತು ಸಮವಸ್ತ್ರಗಳನ್ನು ಖರೀದಿಸಲು ವಾರ್ಷಿಕವಾಗಿ 1,200 ರೂಪಾಯಿ ರವು ಸಿಗಲಿದೆ. ಆರೋಗ್ಯ ಸೌಕರ್ಯಗಳನ್ನು ಆಧುನೀಕರಣಗೊಸುವ ಗುರಿಯೊಂದಿಗೆ ಈ ಮಿಷನ್‌ನಲ್ಲಿ 40,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ಯೋಜಿಸಿದೆ.

  • हर ​एक जिले में महिला थाना खोला जाएगा और हर थाने में महिला डेस्क होगी। हर सिटी में Anti Romeo Squad बनाया जाएगा।

    महिलाओं के सशक्तिकरण के लिए 'लाडो प्रोत्साहन योजना' शुरू की जाएगी। जिसमें भाजपा सरकार नवजात बच्चियों को 2 लाख का सेविंग बांड देगी।

    - श्री @JPNadda, राष्ट्रीय… pic.twitter.com/TL3SGPeZbz

ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಈಚೆಗೆ ನಡೆದ ಪೇಪರ್ ಸೋರಿಕೆ ಪ್ರಕರಣವನ್ನು ತ್ವರಿತವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತಂಡವನ್ನು ರಚಿಸುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ.

ಪ್ರಣಾಳಿಕೆ ಬಿಡುಗಡೆಯ ಬಳಿಕ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು, ಇತರ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿ ಪ್ರಣಾಳಿಕೆ ಕಾರ್ಯರೂಪದ್ದಾಗಿದೆ. ಇದು ಅಭಿವೃದ್ಧಿಯ ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸುತ್ತದೆ. ಇತರ ಪಕ್ಷಗಳ ಪ್ರಣಾಳಿಕೆ ಕೇವಲ ಔಪಚಾರಿಕವಾಗಿದೆ. ನಮ್ಮ 'ಸಂಕಲ್ಪ ಪತ್ರ' ಬರಿಯ ಪುಸ್ತಕದ ಪದಗಳಲ್ಲ, ಇವುಗಳನ್ನು ಪೂರೈಸಲು ನಾವು ಬದ್ಧರಾಗಿದ್ದೇವೆ ಎಂದರು.

ಜೈಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್​ ಜೋಶಿ, ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸಿಪಿ ಜೋಶಿ, ಅರ್ಜುನ್ ರಾಮ್ ಮೇಘವಾಲ್, ಮಾಜಿ ಸಿಎಂ ವಸುಂಧರಾ ರಾಜೆ, ಗಜೇಂದ್ರ ಸಿಂಗ್ ಶೇಖಾವತ್, ಸತೀಶ್ ಪೂನಿಯಾ ಮತ್ತಿತರರು ಇದ್ದರು.

ಇದನ್ನೂ ಓದಿ: ನಾಳೆ ಮಧ್ಯಪ್ರದೇಶದ 230 ಕ್ಷೇತ್ರಗಳು, ಛತ್ತೀಸ್​ಗಢದ 70 ಸ್ಥಾನಗಳಿಗೆ ಮತದಾನ: 3,500 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.