ETV Bharat / bharat

ಮುಸ್ಲಿಂ ಯುವಕನೊಂದಿಗೆ ನಡೆಯಬೇಕಿದ್ದ ಮಗಳ ಮದುವೆ ರದ್ದುಗೊಳಿಸಿದ ಬಿಜೆಪಿ ನಾಯಕ

ಪೌರಿ ಪುರಸಭೆಯ ಅಧ್ಯಕ್ಷ ಯಶಪಾಲ್ ಬೇನಂ ಅವರು ತಮ್ಮ ಪುತ್ರಿಯ ಮದುವೆಯನ್ನು ಹಿಂದು ಸಂಘಟನೆಗಳ ಒತ್ತಡಕ್ಕೆ ಮಣಿದು ರದ್ದುಪಡಿಸಿದ್ದಾರೆ ಎಂದು ತಿಳಿದುಬಂದಿದೆ.

Yashpal Benam daughter marriage
ಮದುವೆಯನ್ನು ರದ್ದು
author img

By

Published : May 21, 2023, 8:18 AM IST

ಉತ್ತರಾಖಂಡ (ಪೌರಿ): ಇಲ್ಲಿನ ಪೌರಿ ಪುರಸಭೆ ಅಧ್ಯಕ್ಷ ಯಶಪಾಲ್ ಬೇನಂ ಎಂಬವರ ಪುತ್ರಿಯ ವಿವಾಹವನ್ನು ರದ್ದು ಮಾಡಲಾಗಿದೆ. ಮುಸ್ಲಿಂ ಯುವಕನ ಜೊತೆ ನಡೆಯಬೇಕಿದ್ದ ವಿವಾಹಕ್ಕೆ ಭಾರಿ ಆಕ್ಷೇಪ ಎದುರಾಗಿತ್ತು. ಈ ಕುರಿತು ಯಶಪಾಲ್ ಬೇನಂ ಅವರೇ ಶನಿವಾರ ಸ್ಪಷ್ಟಪಡಿಸಿದ್ದಾರೆ. ಹಿಂದು ಸಂಘಟನೆಗಳ ಒತ್ತಡ ಹಾಗು ಅಸಮಾಧಾನಕ್ಕೆ ಮಣಿದು ಮೇ 28 ರಂದು ನಡೆಯಬೇಕಿದ್ದ ಮಗಳ ಮದುವೆಯನ್ನು ರದ್ದು ಮಾಡಿರುವುದಾಗಿ ಬೇನಂ ತಿಳಿಸಿದ್ದಾರೆ.

ಈ ಕುರಿತು ನಿನ್ನೆ (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಯಶಪಾಲ್ ತಮ್ಮ ಮಗಳ ಸಂತೋಷಕ್ಕಾಗಿ ಮುಸ್ಲಿಂ ಯುವಕನೊಂದಿಗೆ ಮದುವೆ ಮಾಡಲು ಯೋಚಿಸಿದ್ದೆ. ಆದರೆ ಮದುವೆಗೆ ಸಾಮಾಜಿಕ ಮಾಧ್ಯಮ ಮತ್ತು ಹಿಂದು ಸಂಘಟನೆಗಳಿಂದ ಭಾರಿ ವಿರೋಧ ವ್ಯಕ್ತವಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ರೀತಿಯನ್ನು ಗಮನದಲ್ಲಿ ಇಟ್ಟುಕೊಂಡು ಮದುವೆ ರದ್ದು ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ನಾನು ನನ್ನ ಮಗಳ ಮದುವೆಗೆ ಸಾರ್ವಜನಿಕರ ಅಭಿಪ್ರಾಯಗಳನ್ನು ಕೇಳಬೇಕಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದು, ಈ ಎಲ್ಲ ಕಾರಣಗಳಿಗಾಗಿ ನಿಗದಿಯಾಗಿದ್ದ ಮದುವೆಯನ್ನು ಈಗ ರದ್ದುಗೊಳಿಸಲಾಗಿದೆ ಎಂದಿದ್ದಾರೆ. ಯಶಪಾಲ್ ಬೇನಂ ಪುತ್ರಿಯ ವಿವಾಹ ಮುಸ್ಲಿಂ ಯುವಕನೊಂದಿಗೆ ಎಂದು ಮಾಹಿತಿ ಹೊರಬಿದ್ದ ನಂತರ ತೀವ್ರ ವಿರೋಧವೇ ವ್ಯಕ್ತವಾಗಿತ್ತು. ಅಲ್ಲದೇ ಶುಕ್ರವಾರ ಇಲ್ಲಿನ ಝಂಡಾ ಚೌಕ್ನನಲ್ಲಿ ಹಿಂದು ಸಂಘಟನೆಗಳು ಮದುವೆಗೆ ವಿರೋಧ ವ್ಯಕ್ತಪಡಿಸಿ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ), ಭೈರವ ಸೇನೆ ಮತ್ತು ಬಜರಂಗ ದಳ ಕಾರ್ಯಕರ್ತರು ಭಾಗವಹಿಸಿದ್ದರು. ಅಂತರ್​ಧಮೀರ್ಯ ವಿವಾಹವನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎಂದು ಜಿಲ್ಲಾ ವಿಎಚ್‌ಪಿ ಕಾರ್ಯಾಧ್ಯಕ್ಷ ದೀಪಕ್ ಗೌಡ ಹೇಳಿದ್ದಾರೆ. ಯಶಪಾಲ್ ಬೇನಂ ಮಗಳ ಮದುವೆ ಕಾರ್ಡ್‌ ಫೋಟೋ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಎಲ್ಲೆಡೆ ಇದೇ ಸುದ್ದಿಯಾಗಿತ್ತು.

ಶಿಮ್ಲಾದಲ್ಲಿ ನಡೆದ ಅಂತರ್​ಧರ್ಮೀಯ ವಿವಾಹ: ಇಲ್ಲಿನ ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿ ಹಿಂದೂ ದೇವಸ್ಥಾನಕ್ಕೆ ಆಗಮಿಸಿ ಮುಸ್ಲಿಂ ಪದ್ಧತಿಯಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಘಟನೆ ಶಿಮ್ಲಾ ಜಿಲ್ಲೆಯ ರಾಮ್‌ಪುರ್‌ ಪ್ರದೇಶದಲ್ಲಿ ದೇವಸ್ಥಾನದಲ್ಲಿ ಕಳೆದ ಮಾರ್ಚ್​ ತಿಂಗಳಿನಲ್ಲಿ ನಡೆದಿತ್ತು. ಇಲ್ಲಿನ ಠಾಕೂರು ಸತ್ಯನಾರಾಯಣ ದೇವಾಲಯಲ್ಲಿ ಮುಸ್ಲಿಂ ಪದ್ಧತಿಯಂತೆ ಹಿಂದೂ ಯುವತಿಯನ್ನು ಮುಸ್ಲಿಂ ಯುವಕ ವರಿಸಿದ್ದಾನೆ. ಈ ದೇಗುಲವನ್ನು ವಿಶ್ವ ಹಿಂದೂ ಪರಿಷದ್ ನಡೆಸುತ್ತಿದ್ದು ವಿವಾಹಕ್ಕೆ ಮುಸ್ಲಿಂ-ಹಿಂದೂ ಸಮುದಾಯದ ಅನೇಕ ಜನರು ಸಾಕ್ಷಿಯಾಗಿದ್ದರು. ವಿವಾಹಿತ ಜೋಡಿ ಹಾಗು ಅವರ ಸಂಬಂಧಿಕರು ಪ್ರತಿಕ್ರಿಯಿಸಿ, ಜನರಲ್ಲಿ ಸೌಹಾರ್ದತೆ, ಸಹೋದರತೆ ಮತ್ತು ನಾವೆಲ್ಲ ಒಂದೇ ಎಂಬ ಭಾವನೆಯನ್ನು ಸಮಾಜದಲ್ಲಿ ಸಾರುವ ಉದ್ದೇಶ ಈ ವಿಶೇಷ ಮದುವೆಯ ಹಿಂದಿತ್ತು ಎಂದು ತಿಳಿಸಿದ್ದರು. ಎರಡು ಧರ್ಮದ ಜನರಿಂದ ಯಾವುದೇ ತಕರಾರು, ಆಕ್ಷೇಪ ವ್ಯಕ್ತವಾಗದೇ ಕಾರ್ಯಕ್ರಮ ನಡೆಯಿತು ಎಂದು ವರದಿಯಾಗಿತ್ತು. ​

ಇದನ್ನೂ ಓದಿ: ದೇವರ ಬಗ್ಗೆ ಆಕ್ಷೇಪಾರ್ಹ ಪೋಸ್ಟ್: ಯುವಕನನ್ನು ಥಳಿಸಿದ ದೇವಿ ಭಕ್ತರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.