ನವದೆಹಲಿ: ಬಹುನಿರೀಕ್ಷಿತ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಈಗಾಗಲೇ ಮುಹೂರ್ತ ಫಿಕ್ಸ್ ಆಗಿದ್ದು, ಫೆ. 10ರಂದು ಮೊದಲ ಹಂತದ ಮತದಾನ ನಡೆಯಲಿದೆ. ಇದಕ್ಕೋಸ್ಕರ ಆಡಳಿತ ಪಕ್ಷ ಬಿಜೆಪಿ ಅಭ್ಯರ್ಥಿಗಳ ಮೊದಲ ಲಿಸ್ಟ್ ರಿಲೀಸ್ ಮಾಡಿದೆ. ಇದೀಗ ಚುನಾವಣೆಯಲ್ಲಿ ಪ್ರಚಾರ ನಡೆಸಲು ಸ್ಟಾರ್ ಕ್ಯಾಂಪೇನರ್ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಪ್ರಮುಖರಾಗಿದ್ದು, ಒಟ್ಟು 30 ಮುಖಂಡರು ಪಟ್ಟಿಯಲ್ಲಿದ್ದಾರೆ. ಆದರೆ, ಬಿಜೆಪಿ ಸಂಸದರಾಗಿರುವ ವರುಣ್ ಗಾಂಧಿ ಹಾಗೂ ಮನೇಕಾ ಗಾಂಧಿಗೆ ಕೊಕ್ ನೀಡಲಾಗಿದೆ.
ಕ್ಯಾಂಪೇನರ್ ಲಿಸ್ಟ್ನಲ್ಲಿ ಯಾರೆಲ್ಲ ಇದ್ದಾರೆ..
- ಪ್ರಧಾನಿ ನರೇಂದ್ರ ಮೋದಿ
- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ
- ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್
- ಕೇಂದ್ರ ಗೃಹ ಸಚಿವ ಅಮಿತ್ ಶಾ
- ರಕ್ಷಣಾ ಸಚಿವ ರಾಜನಾಥ್ ಸಿಂಗ್
- ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್
- ಕೇಂದ್ರ ಸಚಿವ ಧರ್ಮೇಂದ್ರ ಪ್ರದಾನ್
- ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಅನೇಕರು ಲಿಸ್ಟ್ನಲ್ಲಿದ್ದಾರೆ.
-
BJP releases a list of 30 leaders who will campaign for the party's candidates in the first phase of the upcoming #UttarPradeshElection2022
— ANI (@ANI) January 19, 2022 " class="align-text-top noRightClick twitterSection" data="
PM Modi, party chief JP Nadda, Defence Minister Rajnath Singh, HM Amit Shah, CM Yogi Adityanath, party MP Hema Malini & others to campaign. pic.twitter.com/w0IKkHkQZ6
">BJP releases a list of 30 leaders who will campaign for the party's candidates in the first phase of the upcoming #UttarPradeshElection2022
— ANI (@ANI) January 19, 2022
PM Modi, party chief JP Nadda, Defence Minister Rajnath Singh, HM Amit Shah, CM Yogi Adityanath, party MP Hema Malini & others to campaign. pic.twitter.com/w0IKkHkQZ6BJP releases a list of 30 leaders who will campaign for the party's candidates in the first phase of the upcoming #UttarPradeshElection2022
— ANI (@ANI) January 19, 2022
PM Modi, party chief JP Nadda, Defence Minister Rajnath Singh, HM Amit Shah, CM Yogi Adityanath, party MP Hema Malini & others to campaign. pic.twitter.com/w0IKkHkQZ6
-
ಕಳೆದ ಕೆಲ ತಿಂಗಳಿಂದ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಉತ್ತರ ಪ್ರದೇಶದ ಪಿಲಿಭಿತ್ ಕ್ಷೇತ್ರದ ಸಂಸದ ವರುಣ್ ಗಾಂಧಿ ಹಾಗೂ ಸುಲ್ತಾನ್ಪುರ್ ಸಂಸದೆ ಮನೇಕಾ ಗಾಂಧಿಗೆ ಕೈಬಿಡಲಾಗಿದೆ. ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಕ್ರಮವಾಗಿ ಫೆಬ್ರವರಿ 10, 14, 20, 23, 27 ಮಾರ್ಚ್ 3 ಹಾಗೂ 7ರಂದು ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ದೇಶದಲ್ಲಿ ಕೊರೊನಾ ಮೂರನೇ ಅಲೆ ಜೋರಾಗಿರುವ ಕಾರಣ ಬಹುತೇಕ ಎಲ್ಲರೂ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಸಭೆ-ಸಮಾರಂಭಗಳನ್ನುದ್ದೇಶಿಸಿ ಮಾತನಾಡುವ ಸಾಧ್ಯತೆ ಕೂಡ ದಟ್ಟವಾಗಿದೆ.
ಇದನ್ನೂ ಓದಿರಿ: ಸಾಲ ತೀರಿಸದ್ದಕ್ಕೆ ರೈತರ ಜಮೀನು ಹರಾಜು ಹಾಕಿದ ಬ್ಯಾಂಕ್ ಸಿಬ್ಬಂದಿ.. ಮನವಿಗೂ ಸಿಗದ ಮನ್ನಣೆ
ಕಳೆದ ಸಲ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಕ್ಕೆ ಟಾಂಗ್ ನೀಡಿದ್ದ ಬಿಜೆಪಿ ಅತಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿ ಸರ್ಕಾರ ರಚಿಸಿತ್ತು. ಇದೀಗ, ಮತ್ತೊಂದು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕಸರತ್ತು ನಡೆಸಿದೆ.